ಡೊನಾಲ್ಡ್ ಟ್ರಂಪ್​(ಎಡ), ಅಯತೊಲ್ಲಾ ಖಮೇನಿ(ಬಲ) 
ವಿದೇಶ

2024, ನನ್ನ ಹತ್ಯೆಗೆ ಸಂಚು ರೂಪಿಸಿದ್ದ! ಇರಾನ್​ ಸುಪ್ರೀಂ ಲೀಡರ್​ ಮಾಸ್ಟರ್​ಪ್ಲ್ಯಾನ್​ ಬಗ್ಗೆ ಸ್ಟೋಟಕ ಸತ್ಯ ಬಿಚ್ಚಿಟ್ಟ ಟ್ರಂಪ್​

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ಕ್ಷಿಪಣಿ ದಾಳಿ
  • ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ
  • ನನ್ನ ಕೊಲ್ಲಲು 2 ಬಾರಿ ಸಂಚು ರೂಪಿಸಿದ್ದ ಎಂದ ಟ್ರಂಪ್​
Ayatollah Khamenei: ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ಕ್ಷಿಪಣಿ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾಗಿರುವುದಾಗಿ ಇದೀಗ ಅಧಿಕೃತವಾಗಿದೆ. ಸ್ವತಃ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಈ ಕುರಿತು ಘೋಷಿಸಿದ್ದು, ಟ್ರಂಪ್​ ಮಾತ್ರವಲ್ಲದೆ, ಇರಾನ್​ ಮಾಧ್ಯಮಗಳು ಕೂಡ ಖಮೇನಿ ಸಾವನ್ನು ಖಚಿತಪಡಿಸಿವೆ. ತಮ್ಮ ನಾಯಕನನ್ನು ಕಳೆದುಕೊಂಡ ದುಃಖದಲ್ಲಿ ಇರಾನ್​ ಶೋಕಾಚರಣೆಯಲ್ಲಿ ತೊಡಗಿದ್ದರೆ, ಅತ್ತ ಟ್ರಂಪ್​ಗೆ ಎಲ್ಲಿಲ್ಲದ ಆನಂದ.

2 ಬಾರಿ ಸಂಚು ರೂಪಿಸಿದ್ದ

ಖಮೇನಿ ಮೃತಪಟ್ಟ ಎರಡು ದಿನಗಳ ಬಳಿಕ ಸ್ಫೋಟಕ ಸತ್ಯ ಬಿಚ್ಚಿಟ್ಟಿರುವ ಡೊನಾಲ್ಡ್ ಟ್ರಂಪ್​, ಇರಾನ್​ನ ಸುಪ್ರೀಂ ಲೀಡರ್​ ನನ್ನ ಕೊಲ್ಲಲು ಎರಡು ಬಾರಿ ಸಂಚು ರೂಪಿಸಿದ್ದ. ಆದ್ರೆ, ಅವನಿಗಿಂತ ಮೊದಲೇ ನಾನು ಆತನನ್ನು ಮುಗಿಸಿರುವೆ ಎಂದು ಹೇಳಿದ್ದಾಗಿ ಎಬಿಸಿ ನ್ಯೂಸ್​ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಸಲಿಗೆ, ಈ ವಿಷಯವನ್ನು ಟ್ರಂಪ್​, ಎಬಿಸಿ ನ್ಯೂಸ್‌ನ ಪ್ರಮುಖ ವಾಷಿಂಗ್ಟನ್ ವರದಿಗಾರ ಜೊನಾಥನ್ ಕಾರ್ಲ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ತಮ್ಮ ಎಕ್ಸ್​ (ಪ್ರಸ್ತುತ ಟ್ವಿಟರ್​) ಖಾತೆಯಲ್ಲಿ ಬರೆದುಕೊಂಡಿರುವ ಕಾರ್ಲ್​, ಅಧ್ಯಕ್ಷ ಟ್ರಂಪ್​ ನನಗೆ ಖಮೇನಿ ಸಾವಿನ ಬಗ್ಗೆ ಮಾಹಿತಿ ಹಂಚಿಕೊಂಡರು. ಇರಾನ್​ ಸುಪ್ರೀಂ ಲೀಡರ್​ ಸಂಚಿಗೆ ಬಲಿಯಾಗುವ ಮೊದಲೇ ಆತನನ್ನು ನಾನು ಹತ್ಯೆಗೈದಿರುವೆ. 2024ರಲ್ಲೇ ಎರಡು ಬಾರಿ ನನ್ನನ್ನು ಮುಗಿಸಲು ಸಂಚು ರೂಪಿಸಿದ್ದ ಎಂದಿದ್ದಾರೆ.

ಟ್ರೂತ್​ ಸೋಷಿಯಲ್​ನಲ್ಲಿ ಟ್ರಂಪ್​ ಹೇಳಿದ್ದೇನು?

"ಇದು ಇರಾನ್‌ನ ಜನರಿಗೆ ಮಾತ್ರವಲ್ಲ, ಎಲ್ಲಾ ಮಹಾನ್ ಅಮೆರಿಕನ್ನರಿಗೆ ಮತ್ತು ಖಮೇನಿ ಹಾಗೂ ಆತನ ರಕ್ತಪಿಪಾಸು ಗುಂಪಿನಿಂದ ಹತ್ಯೆಗೀಡಾದ ಜನರಿಗೆ ನ್ಯಾಯ ಸಿಕ್ಕಂತಾಗಿದೆ. ಅವರು ನಮ್ಮ ಗುಪ್ತಚರ ಮತ್ತು ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ಇರಾನ್​ ಜನತೆಗೆ ತಮ್ಮ ದೇಶವನ್ನು ಹಿಂಪಡೆಯಲು ಸರಿಯಾದ ಸಮಯ ಎಂದರು,(ಏಜೆನ್ಸೀಸ್).