ಇರಾನ್ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ! 
ವಿದೇಶ

ಇರಾನ್ ಮಾಜಿ ಸುಪ್ರೀಂ ಲೀಡರ್ ಅಂತ್ಯಕ್ರಿಯೆ: ತಂದೆಯ ಶವದ ಮುಂದೆ ಕಣ್ಣೀರಿಟ್ಟ ಮಕ್ಕಳು; ಅಂತಿಮ ದರ್ಶನಕ್ಕೆ ಗೈರಾದ ಮೊಜ್ತಾಬಾ! Mojtaba Skips Khamenei Funeral

ಪ್ರಮುಖ ಮುಖ್ಯಾಂಶಗಳು

  • ಇರಾನ್ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ!
  • ತಂದೆಯ ಶವದ ಮುಂದೆ ಕಣ್ಣೀರಿಟ್ಟ ಮಕ್ಕಳು
  • ಅಂತಿಮ ದರ್ಶನಕ್ಕೆ ಹಾಲಿ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಗೈರು
ತೆಹ್ರಾನ್​: ಕಳೆದ ಮೂರು-ನಾಲ್ಕು ತಿಂಗಳಿನಿಂದ ರಣರಂಗವಾಗಿದ್ದ ಮಧ್ಯಪ್ರಾಚ್ಯದಲ್ಲಿ ಸದ್ಯ ಸೂತಕದ ಛಾಯೆ ಕಾಣಿಸುತ್ತಿದೆ. ಅಮೆರಿಕ ಹಾಗೂ ಇಸ್ರೇಲ್​ ದಾಳಿಯಲ್ಲಿ ಮೃತಪಟ್ಟಿದ್ದ ಇರಾನ್​ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (Mojtaba Skips Khamenei Funeral) ಅಂತ್ಯಕ್ರಿಯೆ ನಡೆಯುತ್ತಿದೆ.
ಈ ಕಾರ್ಯಕ್ರಮಕ್ಕೆ ವಿಶ್ವದ ನೂರಾರು ದೇಶಗಳಿಂದ ಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದಾರೆ.

ಕಣ್ಣೀರಿಟ್ಟ ಪುತ್ರರು!

ಆಯತೊಲ್ಲಾ ಅಲಿ ಖಮೇನಿ ಸತ್ತು ಸುಮಾರು ಮೂರು ತಿಂಗಳು ಕಳೆದ ಬಳಿಕ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತಿದೆ. ಜುಲೈ 3 ರಿಂದ ಆರಂಭವಾಗಿರುವ ಈ ಕಾರ್ಯಕ್ರಮವು ಸೋಮವಾರ (ಜು.6) ರಂದು ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗಿದೆ.
ಇಂದು (ಭಾನುವಾರ, ಜು.5) ಆಯತೊಲ್ಲಾ ಅಲಿ ಖಮೇನಿಯ ಅಂತಿಮ ದರ್ಶನ ಪಡೆಯಲು ಮಕ್ಕಳಾದ ಮೊಸ್ತಫಾ, ಮೇಸಾಮ್ ಮತ್ತು ಮಸೂದ್ ಖಮೇನಿ ಆಗಮಿಸಿದ್ದು ತಂದೆಯ ಶವದ ಮುಂದೆ ದುಃಖತಪ್ತರಾಗಿ ಕಣ್ಣೀರನ್ನು ಸುರಿಸಿದ್ದಾರೆ.

ಉತ್ತರಾಧಿಕಾರಿ ಗೈರು!

ಆದರೆ ಈ ಸಮಯದಲ್ಲಿ ಆಯತೊಲ್ಲಾ ಅಲಿ ಖಮೇನಿಯ ಉತ್ತರಾಧಿಕಾರಿ, ಹಾಗೂ ಇರಾನ್​ನ ಪ್ರಸ್ತುತ ಸರ್ವೋಚ್ಚ ನಾಯಕನಾಗಿರುವ ಮೊಜ್ತಾಬಾ ಖಮೇನಿಯ ಗೈರು ಹಾಜರಿ ನೆರೆದಿದ್ದ ಜನರಿಗೆ ಹಾಗೂ ಪ್ರಪಂಚಕ್ಕೆ ಶಾಕ್​ ನೀಡಿದೆ ಎಂದರೆ ಸುಳ್ಳಲ್ಲ.
ತಂದೆಯ ಶವವನ್ನು ನೋಡಲು ಸಾಧ್ಯವಾಗದ ಯಾವ ಪರಿಸ್ಥಿತಿಯನ್ನು ಮೊಜ್ತಾಬಾ ಖಮೇನಿ ಎದುರಿಸುತ್ತಿದ್ದಾನೆ ಎನ್ನುವುದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿ ಎಲ್ಲರನ್ನು ಕಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಟಷ್ಟ ಉತ್ತರವು ಇಲ್ಲಿವರೆಗೆ ಹೊರಬಂದಿಲ್ಲ.

ಮೊಜ್ತಾಬಾ ಖಮೇನಿ ಸತ್ತು ಹೋಗಿದ್ದಾನೆ?

ಕಳೆದ ಕೆಲ ತಿಂಗಳುಗಳಿಂದ ಇರಾನ್​ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ ತಂದೆಯ ಹೆಣವನ್ನು ನೋಡಲು ಬಾರದೆ ಇರುವುದು, ಮೊಜ್ತಾಬಾ ಸಾವಿನ ಬಗ್ಗೆ ಮತ್ತೆ ವದಂತಿ ಕೇಳಿ ಬರುತ್ತಿದೆ. ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದ ದಾಳಿಯಲ್ಲಿ ಮೊಜ್ತಾಬಾ ಕೂಡ ಗಾಯಗೊಂಡಿದ್ದ ಎಂದು ಖುದ್ದು ಇರಾನ್​ ಒಪ್ಪಿಕೊಂಡಿತ್ತು. ಅದಾದ ಬಳಿಕ ಸವೋಚ್ಚ ನಾಯಕನ ಆರೋಗ್ಯ ಸುಧಾರಿಸಿದೆ ಎಂದು ಸ್ಪಷ್ಟನೆ ನೀಡಲಾಗಿತ್ತು, (ಏಜನ್ಸೀಸ್​).