3 ಲಕ್ಷ ಕಾಂಡೋಮ್‌ಗಳು ಬ್ಯಾನ್! ಲ್ಯಾಬ್ ಟೆಸ್ಟ್‌ನಲ್ಲಿ ಶಾಕಿಂಗ್ ಸತ್ಯ ಬಯಲಾದ ಬೆನ್ನಲ್ಲೇ ಫ್ರಾನ್ಸ್ ಸರ್ಕಾರ ಅಲರ್ಟ್ | Condoms
- ಫ್ರಾನ್ಸ್‌ನಲ್ಲಿ ಕಾಂಡೋಮ್‌ಗಳ ಮೇಲೆ ಸುರಕ್ಷತಾ ಎಚ್ಚರಿಕೆ ಕ್ರಮ
- ಸುಮಾರು 3 ಲಕ್ಷ ಕಾಂಡೋಮ್‌ಗಳು ಅಸುರಕ್ಷಿತ ಎಂದು ಗೊತ್ತಾದ ಕೂಡಲೇ ಬ್ಯಾನ್ ಮಾಡಿದ ಸರ್ಕಾರ
- ಸದ್ಯ 2.6 ಲಕ್ಷ ಕಾಂಡೋಮ್ ಸೀಜ್ ಮಾಡಿದ ಅಧಿಕಾರಿಗಳು
- ಈ ಕಾಂಡೋಮ್‌ಗಳನ್ನು ಲ್ಯಾಬ್ ಟೆಸ್ಟ್ಗೆ ಒಳಪಡಿಸಿದಾಗ ಶಾಕಿಂಗ್ ಸತ್ಯಗಳು ಬಯಲಿಗೆ
ಫ್ರಾನ್ಸ್: ಆನ್‌ಲೈನ್ ಮತ್ತು ಫಾರ್ಮಸಿಗಳಲ್ಲಿ ಮಾರಾಟವಾಗುವ ಸಾವಿರಾರು ಕಾಂಡೋಮ್‌ಗಳು (Condoms) ಅಸುರಕ್ಷಿತವಾಗಿದೆ ಎಂಬ ಸ್ಫೋಟಕ ಹಾಗೂ ಶಾಕಿಂಗ್ ಮಾಹಿತಿ ಹೊರಬಿದ್ದಿದ್ದೇ ತಡ ಇದೀಗ ಫ್ರಾನ್ಸ್ ಸರ್ಕಾರ ಅವುಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿದೆ.
2.6 ಲಕ್ಷ ಕಾಂಡೋಮ್‌ಗಳು ವಶಕ್ಕೆ
ಈ ಕುರಿತು ವಂಚನೆ-ವಿರೋಧಿ ಮತ್ತು ಆರೋಗ್ಯ ಸಂಸ್ಥೆಗಳು ಶುಕ್ರವಾರ ಎಚ್ಚರಿಸಿವೆ. ಲ್ಯಾಬ್ ಪರೀಕ್ಷೆಗಳು ಎರಡು ರೀತಿಯ ಕಾಂಡೋಮ್‌ಗಳು ದಿಢೀರ್ ಹರಿಯುವ ಅಪಾಯದಲ್ಲಿದೆ ಅಥವಾ ಸಣ್ಣ ರಂಧ್ರಗಳನ್ನು ಹೊಂದಿವೆ ಎಂಬುದನ್ನು ಪತ್ತೆಹಚ್ಚಿವೆ. ಇದರ ಬೆನ್ನಲ್ಲೇ, ಸುಮಾರು 2.6 ಲಕ್ಷ ಕಾಂಡೋಮ್‌ಗಳನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು
ಈಗಾಗಲೇ ಈ ಕಾಂಡೋಮ್‌ಗಳನ್ನು ಬಳಸಿದವರಿಗೆ ಲೈಂಗಿಕವಾಗಿ ಹರಡುವ ರೋಗಗಳ (ಎಸ್‌ಟಿಡಿ) ಪರೀಕ್ಷೆಗೆ ಒಳಗಾಗಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಅವಧಿಗಳು ತಡವಾಗಿದ್ದರೆ ಗರ್ಭಧಾರಣೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಜನರಿಗೆ ಎಚ್ಚರಿಸಿದ್ದಾರೆ. ಇವುಗಳ ಸುಮಾರು 1,000 ಬಾಕ್ಸ್‌ಗಳು ಅಥವಾ 40,000ಕ್ಕೂ ಅಧಿಕ ಕಾಂಡೋಮ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ ಮತ್ತು ಸಂಬಂಧಿತ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಪಟ್ಟಿಯಿಂದ ಉತ್ಪನ್ನವನ್ನು ತೆಗೆದುಹಾಕಲು ಒಪ್ಪಿಕೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಲ್ಯಾಬ್ ಟೆಸ್ಟಿಂಗ್ನಲ್ಲಿ ಏನೆಲ್ಲ ಬಹಿರಂಗ?
- ಕಳಪೆ ಗುಣಮಟ್ಟ: ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಈ ಕಾಂಡೋಮ್‌ಗಳು ಬಳಕೆಯ ಸಮಯದಲ್ಲಿ ತೂತು ಬೀಳುವ ಹಾಗೂ ಹರಿಯುವ ಅಥವಾ ಬಸ್ಟ್ ಆಗುವ ಅಪಾಯವನ್ನು ಹೊಂದಿರುವುದು ದೃಢಪಟ್ಟಿದೆ.
- ಆರೋಗ್ಯಕ್ಕೆ ಭಾರಿ ಅಪಾಯ: ಗುಣಮಟ್ಟವಿಲ್ಲದ ಕಾಂಡೋಮ್‌ಗಳ ಬಳಕೆಯಿಂದ ಲೈಂಗಿಕವಾಗಿ ಹರಡುವ ಸೋಂಕುಗಳು (STIs) ಹರಡುವ ಹಾಗೂ ಅನಪೇಕ್ಷಿತ ಗರ್ಭಧಾರಣೆಯ ಅಪಾಯ ಹೆಚ್ಚು.
- ನಿಯಮಗಳ ಉಲ್ಲಂಘನೆ: ಈ ಕಳಪೆ ಉತ್ಪನ್ನಗಳು ಯುರೋಪಿಯನ್ ಯೂನಿಯನ್‌ನ ಭದ್ರತಾ ಪ್ರಮಾಣಪತ್ರ (CE Certification) ಹಾಗೂ ಫ್ರೆಂಚ್ ಭಾಷೆಯ ಸೂಕ್ತ ಲೇಬಲ್ ಹೊಂದಿಲ್ಲ. ಇವುಗಳಲ್ಲಿ ಹೆಚ್ಚಿನವು ಆನ್‌ಲೈನ್ ನೆಟ್‌ವರ್ಕ್‌ಗಳು, ಫಾರ್ಮಸಿಗಳು ಹಾಗೂ ಇ-ಕಾಮರ್ಸ್ ಮಾರುಕಟ್ಟೆಗಳ ಮೂಲಕ ಮಾರಾಟವಾಗಿವೆ ಎಂಬ ಅಂಶಗಳು ಬೆಳಕಿಗೆ ಬಂದಿವೆ,(ಏಜೆನ್ಸೀಸ್).