ಮೊಹಮ್ಮದ್ ರಿಜ್ವಾನ್ ಅವರನ್ನು ನಿವೃತ್ತಿ ಹೊಂದಲು ಕೇಳಲಾಗುತ್ತಿದೆ
ಸಿಡ್ನಿ: ಕ್ರಿಕೆಟ್ ಜಗತ್ತಿನಲ್ಲಿ ಆಘಾತಕಾರಿ ಘಟನೆ ನೆಡೆದಿದ್ದು, ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯದ ವೇಳೆ, ಸಿಡ್ನಿ ಥಂಡರ್ ವಿರುದ್ಧ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪಾಕಿಸ್ತಾನಿ ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್(Mohammad Rizwan)ರ ನಿಧಾನಗತಿಯ ಬ್ಯಾಟಿಂಗ್ನಿಂದ ಬೆಸತ್ತ ರೆನೆಗೇಡ್ಸ್ ಆಡಳಿತ ಮಂಡಳಿಯು ದಿಢೀರ್ ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಾಯಿಸಿರುವ ಘಟನೆ ನೆಡೆದಿದೆ.
ಈ ಘಟನೆಯು ಮೊದಲ ಇನ್ನಿಂಗ್ಸ್‌ನ 18 ನೇ ಓವರ್‌ನಲ್ಲಿ ಸಂಭವಿಸಿದೆ. ತಮ್ಮ ಬ್ಯಾಟಿಂಗ್ ಉದ್ದಕ್ಕೂ ರನ್ಗಳಿಸಲು ಹೆಣಗಾಡುತ್ತಿದ್ದ ರಿಜ್ವಾನ್ 23 ಎಸೆತಗಳಲ್ಲಿ 26 ರನ್ ಗಳಿಸಿದ್ದರು. ಕೊನೆಯ ಓವರ್ಗಳಲ್ಲಿ ಸ್ಪೋಟಕ ಹೊಡೆತಗಳು ಆಗತ್ಯವಿದ್ದಾಗ ರೆನೆಗೇಡ್ಸ್ ನಾಯಕ ವಿಲ್ ಸದರ್ಲ್ಯಾಂಡ್ ಡಗೌಟ್‌ನಿಂದ ಉದ್ರಿಕ್ತವಾಗಿ ಕೈ ಬೀಸುತ್ತಾ, ರಿಜ್ವಾನ್‌ಗೆ ಪೆವಿಲಿಯನ್‌ಗೆ ಮರಳುವಂತೆ ಸೂಚಿಸಿದರು.
ಈ ನಿರ್ಗಮನದಿಂದ ರಿಜ್ವಾನ್ ಬಿಬಿಎಲ್ ಇತಿಹಾಸದಲ್ಲಿ ಪಂದ್ಯದ ವೇಳೆ ನಿವೃತ್ತಿ ಪಡೆದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಬದಲಿಗೆ ಸದರ್ಲ್ಯಾಂಡ್ ಅವರನ್ನು ಆಯ್ಕೆ ಮಾಡಲಾಯಿತು. ಆದರೂ ರೆನೆಗೇಡ್ಸ್ ಅಂತಿಮವಾಗಿ 170/8 ಕ್ಕೆ ಮುಗಿಸಿ ಡಿಎಲ್ಎಸ್ ವಿಧಾನದ ಮೂಲಕ ಪಂದ್ಯವನ್ನು ಸೋತಿತ್ತು.
ಇದು ಅಂತಾರಾಷ್ಟ್ರೀಯ ಅವಮಾನ
ಈ ನಿರ್ಧಾರವು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕೆಲವು ವಿಶ್ಲೇಷಕರು ರೆನೆಗೇಡ್ಸ್ ತಂಡದ ಕ್ಲಿನಿಕಲ್, ಮನಿಬಾಲ್ ವಿಧಾನವನ್ನು ಶ್ಲಾಘಿಸಿದರೆ, ಪಾಕಿಸ್ತಾನದ ಅನುಭವಿ ಆಟಗಾರನ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಎಕ್ಸ್ನಲ್ಲಿ ವೈರಲ್ ಆದ ಒಂದು ಪೋಸ್ಟ್ ಈ ನಡೆಯನ್ನು ಅಂತಾರಾಷ್ಟ್ರೀಯ ಅವಮಾನ ಎಂದು ಕರೆದಿದೆ. ರಿಜ್ವಾನ್ ಅವರಂತಹ ಆಟಗಾರನನ್ನು ನಿಧಾನಗತಿಯ ಬ್ಯಾಟಿಂಗ್ಗಾಗಿ ಸಾರ್ವಜನಿಕವಾಗಿ ಮೈದಾನದಿಂದ ಹೊರಹಾಕುವುದ ಅವಮಾನ ಎಂದು ಪಾಕ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಕ್ಷೀಣಿಸುತ್ತಿರುವ ಟಿ20 ಫಾರ್ಮ್
ಈ ಔಟಾಗುವಿಕೆಯಿಂದ ರಿಜ್ವಾನ್ ಬಿಬಿಎಲ್‌ನ ಕಳಪೆ ಋತುವಿಗೆ ಅಂತ್ಯ ಹಾಡಿದ್ದಾರೆ. ಎಂಟು ಪಂದ್ಯಗಳಲ್ಲಿ ಕೇವಲ 100 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 167 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ,(ಏಜೆನ್ಸೀಸ್).