ದಕ್ಷಿಣ ಕೊರಿಯಾದ ಡೇಜಿಯಾನ್ಲ್ಲಿ ಅಗ್ನಿ ಅವಘಡ
- ದಕ್ಷಿಣ ಕೊರಿಯಾದ ಡೇಜಿಯಾನ್ಲ್ಲಿ ಅಗ್ನಿ ಅವಘಡ
- 10 ಮಂದಿ ಸಜೀವ ದಹನ; 59 ಜನ ಸಾವು ಬದುಕಿನೊಂದಿಗೆ ಹೋರಾಟ
- ಅಗ್ನಿಶಾಮಕ ಸಿಬ್ಬಂದಿಗಳಿಂದ ಮುಂದುವರೆದ ರಕ್ಷಣಾ ಕಾರ್ಯ
ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದ ಡೇಜಿಯಾನ್‌ನಲ್ಲಿರುವ ವಾಹನಗಳ ಬಿಡಿಭಾಗಗಳ ಕಾರ್ಖಾನೆಯಲ್ಲಿ ಅಗ್ನಿ ಅವಘಡ (South Korea Fire Accident) ಸಂಭವಿಸಿದ ಹಿನ್ನಲೆಯಲ್ಲಿ ಸುಮಾರು 10 ಜನ ಸ್ಥಳದಲ್ಲೇ ಮೃತಪಟ್ಟಿದ್ದು, 59 ಜನರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗಿ ವರದಿಯಾಗಿದೆ.
ಶುಕ್ರವಾರ (ಮಾರ್ಚ್ 20) ಮಧ್ಯಾಹ್ನ ಬೆಂಕಿ ಕಾಣಿಸಕೊಂಡ ನಂತರ ಸುಮಾರು 500 ಕ್ಕೂ ಹೆಚ್ಚಿನ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಕಿ ಕಟ್ಟಡವನ್ನು ಸಂಪೂರ್ಣವಾಗಿ ಆವರಿಸಿದ್ದರಿಂದ ಕಟ್ಟಡ ಬೀಳುವ ಸಂಭವ ಹೆಚ್ಚಿತ್ತು, ಆದ್ದರಿಂದ ಅಗ್ನಿಶಾಮಕ ಸಿಬ್ಬಂದಿಗಳು ಪ್ರವೇಶ ಮಾಡುವ ಬದಲು ರೋಬೋಟ್ಗಳನ್ನು ಮೊದಲು ಕಟ್ಟಡದ ಒಳಗೆ ಕಳುಹಿಸಲಾಯಿತು. ನಂತರ ಪರಿಸ್ಥಿತಿ ನಮ್ಮ ಕೈಗೆ ಬಂದ ನಂತರ ನಾವು ರಕ್ಷಣಾ ಕಾರ್ಯ ಮುಂದುವರೆಸಿದವು ಎಂದು ಡೇಡಿಯೋಕ್ ಜಿಲ್ಲೆಯ ಅಗ್ನಿಶಾಮಕ ದಳದ ಮುಖ್ಯಸ್ಥ ನಾಮ್ ಡಿಯುಕ್-ವೂ ತಿಳಿಸಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾತನಾಡುತ್ತಾ ನಾಮ್, ನಮಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿದೆವು. ಜೊತೆಗೆ ಈ ಅಗ್ನಿ ದುರಂತಕ್ಕೆ ಕಾರಣವೇನು ಎಂದು ಪತ್ತೆ ಹಚ್ಚಲು ಪ್ರಾರಂಭಿಸಿದ್ದೆವೆ.
ನಮ್ಮ ಅನುಮಾನದ ಪ್ರಕಾರ ಕಾರ್ಖಾನೆಯಲ್ಲಿ ಸಂಗೃಹಿಸಿದ್ದ ರಾಸಾಯನಿಕಗಳಿಂದಲೇ ಈ ಅವಘಡ ಸಂಭವಿಸಿದೆ ಎಂದು ಅಂದಾಜಿಸಿದ್ದೆವೆ. ಜೊತೆಗೆ ಅಕ್ಕ ಪಕ್ಕದಲ್ಲಿದ್ದ ಜನರನ್ನು ಸಹ ವಿಚಾರಣೆಗೆ ಒಳಪಡಿಸಿದ್ದೇವೆ. ಆದರೆ ಇದು ವರೆಗೆ ಈ ಅವಘಡ ಸಂಭವಿಸಲು ಇದೇ ನಿಖರ ಕಾರಣ ಎಂದು ತಿಳಿದು ಬಂದಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
ಇದುವರೆಗೆ ಸುಮಾರು 10 ಜನ ಬೆಂಕಿಗೆ ಆಹುತಿಯಾಗಿದ್ದಾರೆ. ಸುಮಾರು 59 ಜನ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರೇ ಇನ್ನೂ ನಾಲ್ಕು ಜನ ನಾಪತ್ತೆಯಾಗಿದ್ದು ನಾವು ಅವರನ್ನು ಹುಡುಕುವ ಪ್ರಯತ್ನದಲ್ಲಿದ್ದೆವೆ ಎಂದು ಅವರು ತಿಳಿಸಿದ್ದಾರೆ,(ಏಜನ್ಸೀಸ್).