ಸಾಂದರ್ಭಿಕ ಚಿತ್ರ 
ವಿದೇಶ

ವರ್ಕ್​ ಫ್ರಮ್ ಹೋಮ್ ಮಾಡಿ ಎಂದು ಮನೆಗೆ ಕಳಿಸಿ 7 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಫೇಸ್​ಬುಕ್ ​| Facebook

ವಾಷಿಂಗ್ಟನ್​: ಜಾಗತಿಕ ಸಾಮಾಜಿಕ ಜಾಲಾತಾಣ ಫೇಸ್​ಬುಕ್​(Facebook), ವಾಟ್ಸಾಪ್ ಹಾಗೂ ಇನ್​ಸ್ಟಾಗ್ರಾಂ ಆ್ಯಪ್​ನ ಮಾತೃ ಸಂಸ್ಥೆಯಾದ ಮೇಟಾ, ತನ್ನ 7 ಸಾವಿರ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಿ ಎಂದು ಕಳಿಸಿ ಇಂದು(ಮೇ 20) ಬೆಳಗ್ಗೆ 4 ಗಂಟೆಯಿಂದಲೇ ಅವರೆನ್ನಲ್ಲಾ ಕೆಲಸದಿಂದ ತೆಗೆದು ಹಾಕಿದ ಇಮೇಲ್ ಕಳುಹಿಸಿದೆ ಎಂದು ವರದಿಯಾಗಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮೆಟಾ ಕಂಪನಿ ತನ್ನ 78 ಸಾವಿರ ಉದ್ಯೋಗಿಗಳ ಪೈಕಿ ಶೇ. 10 ರಷ್ಟು ಅಂದ್ರೆ 7 ಸಾವಿರ ಉದ್ಯೋಗಿಗಳನ್ನು ಲೇ ಆಫ್ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆ ಪ್ರಪಂಚದಾದ್ಯಂತ ಬುಧವಾರ ಮುಂಜಾನೆ 4 ಗಂಟೆಯಿಂದಲೇ ವಜಾಗೊಳಿಸುವ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡ ಇಮೇಲ್‌ಗಳನ್ನು ಸ್ವೀಕರಿಸಿದ್ದಾರೆ.
ಮೊದಲು ಸಿಂಗಾಪುರದ ಉದ್ಯೋಗಿಗಳು ಇಮೇಲ್ ಪಡೆದಿದ್ದು, ಬಳಿಕ ಯುರೋಪ್, ಭಾರತ ಹಾಗೂ ಯುಎಸ್‌ನಲ್ಲಿನ ಉದ್ಯೋಗಿಗಳು ಇಮೇಲ್ ಸಂದೇಶಗಳನ್ನು ಸ್ವೀಕರಿಸುವ ನಿರೀಕ್ಷೆಯಿದೆ. ಮೆಟಾ ಸಂಸ್ಥೆ ಎಐಗೆ ಭಾರೀ ಹೂಡಿಕೆ ಮಾಡುತ್ತಿದ್ದು, ಸಣ್ಣ ತಂಡಗಳನ್ನು ಇಟ್ಟುಕೊಂಡು ಕೆಲಸ ನಿರ್ವಹಿಸಲು ಆದ್ಯತೆ ಕೊಡುತ್ತಿದೆ ಎನ್ನಲಾಗಿದೆ.
ಜ್ಞಾಪಕ ಪ್ರಕಟಣೆ ಹೊರಡಿಸಿರುವ ಮೆಟಾದ ಜನರ ಮುಖ್ಯಸ್ಥ ಜನೆಲ್ಲೆ ಗೇಲ್, 7,000 ಉದ್ಯೋಗಿಗಳನ್ನು ಹೊಸ AI-ಸ್ಥಳೀಯ ತಂಡಗಳಿಗೆ ಮರು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. ಸುಮಾರು 6,000 ಖಾಲಿ ಹುದ್ದೆಗಳನ್ನು ಮುಚ್ಚಲಾಗಿದೆ. ವ್ಯವಸ್ಥಾಪಕ ಹಂತಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂದಿದ್ದಾರೆ (ಏಜೆನ್ಸೀಸ್).