Faiz hameed, Imran Khan 
ವಿದೇಶ

ಮಾಜಿ ಐಎಸ್​ಐ ಮುಖ್ಯಸ್ಥನನ್ನು 14 ವರ್ಷ ಶಿಕ್ಷೆಗೆ ಗುರಿಮಾಡಿದ ಪಾಕ್​ ಮಿಲಿಟರಿ ಕೋರ್ಟ್​ | Pakistan

ಪ್ರಮುಖ ಮುಖ್ಯಾಂಶಗಳು

  • ಮಾಜಿ ಐಎಸ್​ಐ ಮುಖ್ಯಸ್ಥನಿಗೆ 14 ವರ್ಷ ಶಿಕ್ಷೆ ಘೋಷಿಸಿದ ಪಾಕ್ ಮಿಲಿಟರಿ ಕೋರ್ಟ್
  • 2019 ರಿಂದ 2021 ರ ವರೆಗೆ ಐಎಸ್​ಐ ಮುಖ್ಯಸ್ಥನಾಗಿದ್ದ ಫೈಜ್ ಹಮೀದ್
  • ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಆಪ್ತನಾಗಿದ್ದ ಫೈಜ್ ಹಮೀದ್
ಪಾಕಿಸ್ತಾನ : ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ನ ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಪಾಕಿಸ್ತಾನ (Pakistan) ದ ಸೇನಾ ನ್ಯಾಯಾಲಯವು ಗುರುವಾರ(ಡಿ.11) ದಂದು ಆದೇಶಿಸಿದೆ.
ಆರೋಪಿಯ ವಿರುದ್ಧ ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದು, ರಾಜ್ಯದ ಸುರಕ್ಷತೆ ಮತ್ತು ಹಿತಾಸಕ್ತಿಗೆ ಹಾನಿಕಾರಕವಾದ ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ, ಅಧಿಕಾರ ಮತ್ತು ಸರ್ಕಾರಿ ಸಂಪನ್ಮೂಲಗಳ ದುರುಪಯೋಗ ಮತ್ತು ತಪ್ಪಿತಸ್ಥ ವ್ಯಕ್ತಿಗಳಿಗೆ ನಷ್ಟವನ್ನುಂಟುಮಾಡುವುದಕ್ಕೆ ಸಂಬಂಧಿಸಿದ ನಾಲ್ಕು ಆರೋಪಗಳ ಮೇಲೆ ವಿಚಾರಣೆ ನಡೆಸಲಾಯಿತು ಎಂದು ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದ ಹೇಳಿಕೆ ತಿಳಿಸಿದೆ.
ಸುದೀರ್ಘ ಕಾನೂನು ಪ್ರಕ್ರಿಯೆಗಳ ನಂತರ ನ್ಯಾಯಾಲಯವು ISI ನ ಮಾಜಿ ಮಹಾನಿರ್ದೇಶಕ ಹಮೀದ್ ಅವರನ್ನು ಎಲ್ಲಾ ಆರೋಪಗಳಿಗೂ ತಪ್ಪಿತಸ್ಥರೆಂದು ಘೋಷಿಸಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಪಾಕ್ ಸೇನೆ ತಿಳಿಸಿದೆ.
ಈ ಫೈಜ್ ಹಮೀದ್ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಆಪ್ತರಾಗಿದ್ದು, 2019 ರಿಂದ 2021 ರವರೆಗೆ ಐಎಸ್‌ಐನ ಮಹಾನಿರ್ದೇಶಕರಾಗಿ ಹಮೀದ್ ಸೇವೆ ಸಲ್ಲಿಸಿದ್ದರು. 2023 ರಿಂದ ಇಮ್ರಾನ್ ಖಾನ್ ಸಹ ಜೈಲಿನಲ್ಲಿದ್ದಾರೆ.(ಏಜೆನ್ಸೀಸ್).