ವಿದೇಶ

ಸಂಪಾದಕೀಯ: ಚೀನಾ ಉದ್ಧಟತನ

ಲಡಾಖ್​ನ ಗಡಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಚೀನಾ ಮತ್ತೆ ತನ್ನ ಹಳೆಯ ವಿಸ್ತರಣಾವಾದಿ ಚಾಳಿಯನ್ನು ಮುಂದುವರಿಸಿ ಉದ್ಧಟತನ ಪ್ರದರ್ಶಿಸಿದೆ. ಲಡಾಖ್​ನ 28 ಸ್ಥಳಗಳು ತನಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸಿದೆ. ಭಾರತವು ಅಕ್ಟೋಬರ್​ 2ರಂದು ಈ ಸ್ಥಳಗಳ ಹೆಸರುಗಳನ್ನು ಅಧಿಕೃತವಾಗಿ ನಿಗದಿಪಡಿಸಿತ್ತು. 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಉದ್ವಿಗ್ನತೆ ಉಂಟಾಗಿದ್ದ ಗೋಗ್ರಾ ಮತ್ತು ಹಾಟ್​ ಸ್ಪ್ರಿಂಗ್ಸ್‌ನಂತಹ ಪ್ರದೇಶಗಳೂ ಇವುಗಳಲ್ಲಿ ಸೇರಿವೆ.

"ಭಾರತ ಹೆಸರು ಬದಲಾಯಿಸುವುದರಿಂದ ಅಥವಾ ಹೊಸ ಹೆಸರನ್ನು ಇಡುವುದರಿಂದ ನೆಲದ ಮೇಲಿನ ಮಾಲೀಕತ್ವ ಹಕ್ಕು ಬದಲಾಗುವುದಿಲ್ಲ' ಎಂದು ಚೀನಾ ಹೇಳಿರುವುದು, ಅನವಶ್ಯಕ ಉದ್ವಿಗ್ನತೆಯನ್ನು ಹುಟ್ಟುಹಾಕಿದೆ. ಚೀನಾ ಹೇಳಿಕೆಗೆ ಭಾರತ ಸೂಕ್ತ ತಿರುಗೇಟು ನೀಡಿದೆ. "ಲಡಾಖ್​ ಭಾರತದ ಅವಿಭಾಜ್ಯ ಅಂಗವಾಗಿದ್ದು, ಚೀನಾ ಎಷ್ಟೇ ನಿರಾಕರಿಸಿದರೂ ಈ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್​ ಜೈಸ್ವಾಲ್​ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನೆರೆಯ ರಾಷ್ಟ್ರಗಳ ಸಾರ್ವಭೌಮ ಭೂಪ್ರದೇಶಗಳಿಗೆ ನಿರಂತರವಾಗಿ ತಕರಾರು ಎತ್ತುವುದು, ಹಂತಹಂತವಾಗಿ ಭೂಮಿ ಕಬಳಿಸುವುದು ಚೀನಾ ತಂತ್ರದ ಅವಿಭಾಜ್ಯ ಅಂಗವಾಗಿದೆ. ಐತಿಹಾಸಿಕವಾಗಿ ಗಮನಿಸಿದರೆ, ಲಡಾಖ್​ ಎಂದಿಗೂ ಚೀನಾದ ಭಾಗವಾಗಿರಲಿಲ್ಲ. 1842ರ ಚುಶುಲ್​ ಒಪ್ಪಂದದ ಮೂಲಕ ಡೋಗ್ರಾ ಸಾಮ್ರಾಜ್ಯ ಮತ್ತು ಟಿಬೆಟ್​ ನಡುವೆ ಲಡಾಖ್​ನ ಗಡಿರೇಖೆಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿತ್ತು. ಬ್ರಿಟಿಷ್​ ಆಡಳಿತಾವಧಿಯಲ್ಲೂ ಲಡಾಖ್​ ಭಾರತದ ಭಾಗವಾಗಿಯೇ ಗುರುತಿಸಲ್ಪಟ್ಟಿತ್ತು. ಆದರೆ 1950ರ ದಶಕದಲ್ಲಿ ಚೀನಾ ಟಿಬೆಟ್​ ಅನ್ನು ಅಕ್ರಮವಾಗಿ ಆಕ್ರಮಿಸಿಕೊಂಡ ಬಳಿಕ, ಅಕ್ಸಾಯ್ ಚಿನ್​ ಮೂಲಕ ರಹಸ್ಯವಾಗಿ ರಸ್ತೆ ನಿರ್ಮಿಸಿ 1962ರ ಯುದ್ಧದ ಮೂಲಕ ಬಹುದೊಡ್ಡ ಭೂಭಾಗವನ್ನು ಕಬಳಿಸಿತು. ಅಂದಿನಿಂದ ಇಂದಿನವರೆಗೂ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್​ಎಸಿ) ಸ್ಪಷ್ಟವಾಗಿ ಗುರುತಿಸಲು ನಿರಾಕರಿಸುತ್ತ, ಗಡಿ ವ್ಯಾಜ್ಯವನ್ನು ಜೀವಂತವಾಗಿಡುವುದೇ ಚೀನಾದ ಪ್ರಮುಖ ರಾಜತಾಂತ್ರಿಕ ಅಸಹನೆಯಾಗಿದೆ.

2020ರಲ್ಲಿ ಗಲ್ವಾನ್​ ಕಣಿವೆಯಲ್ಲಿ ನಡೆದ ಘರ್ಷಣೆ ಭಾರತಕ್ಕೆ ಚೀನಾದ ವಿಸ್ತರಣಾವಾದದ ವಿರುದ್ಧ ಎಚ್ಚರಿಕೆಯ ಗಂಟೆಯಾಯಿತು. ಲಡಾಖ್​ ಕೇವಲ ಹಿಮಾವೃತ ಪರ್ವತ ಶ್ರೇಣಿಯಲ್ಲ; ಅದು ಭಾರತದ ರಾಷ್ಟ್ರೀಯ ಭದ್ರತೆ, ಜಲಮೂಲಗಳು ಹಾಗೂ ಮಧ್ಯ ಏಷ್ಯಾದ ಸಂಪರ್ಕಕ್ಕೆ ಅತ್ಯಂತ ಮಹತ್ವದ ಆಯಕಟ್ಟಿನ ನೆಲೆ. 2019ರಲ್ಲಿ ಲಡಾಖ್​ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ, ಭಾರತವು ಗಡಿಭಾಗಗಳಲ್ಲಿ ಸರ್ವಋತು ಸುರಂಗಗಳು, ರಸ್ತೆಗಳು, ಸೇತುವೆಗಳು ಮತ್ತು ವಾಯುನೆಲೆಗಳನ್ನು ವೇಗವಾಗಿ ಅಭಿವೃದ್ಧಿಪಡಿಸುತ್ತಿದೆ. ಭಾರತದ ಈ ಸಾರ್ವಭೌಮ ಸನ್ನದ್ಧತೆ ಮತ್ತು ಗಡಿ ಮೂಲಸೌಕರ್ಯ ಬಲವರ್ಧನೆಯೇ ಚೀನಾದ ಅಸಹನೆಗೆ ಮುಖ್ಯ ಕಾರಣ