ಸಾಂದರ್ಭಿಕ ಚಿತ್ರ 
ವಿದೇಶ

ಪಾಕಿಸ್ತಾನದಲ್ಲಿ ಗೋಬರ್ ತೆರಿಗೆ; ದನ ಮತ್ತು ಎಮ್ಮೆಗಳಿಗೆ ಡೈಪರ್ ತೋಡಿಸಲು ಮುಂದಾದ ಮಾಲೀಕರು | Dung Tax

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 168 ಜಾನುವಾರು ವಸಾಹತುಗಳಲ್ಲಿರುವ 50 ಲಕ್ಷ ಪ್ರಾಣಿಗಳ ಮೇಲೆ ಗೋಬರ್ ತೆರಿಗೆ(Dung Tax) ವಿಧಿಸಲಾಗಿದ್ದು, ಪಾಕಿಸ್ತಾನಿಗಳು ಇದನ್ನು ಸೆಗಣಿ ತೆರಿಒಗೆ ಎಂದು ಕರೆದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡ್ತಿದ್ದಾರೆ.
ಪಂಜಾಬ್ ಸಿಎಂ ಮರ್ಯಮ್ ನವಾಜ್ ಅವರು 'ಸೂತ್ರ ಪಂಜಾಬ್' ಹೆಸರಿನಲ್ಲಿ ಪ್ರತಿ ಮೇಕೆಯ ಮಾಲೀಕರು ಜೈವಿಕ ಅನಿಲ ಕಾರ್ಯಕ್ರಮಕ್ಕಾಗಿ ಪ್ರತಿ ಮೇಕೆಗೆ ದಿನಕ್ಕೆ 30 ರೂ. ತೆರಿಗೆ ಪಾವತಿಸಬೇಕೆಂದು ಆದೇಶಿಸಿದ್ದಾರೆ. ಈ ತೆರಿಗೆ ಮೂಲಕ ಸರ್ಕಾರ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ.
ಏತನ್ಮದ್ಯೆ, ತೆರಿಗೆಯನ್ನು ತಪ್ಪಿಸಲು ವಿಚಿತ್ರ ಕೆಲಸಗಳನ್ನು ಮಾಡ್ತಿದ್ದಾರೆ. ಕೆಲವು ಮಾಲೀಕರು ತಮ್ಮ ಜಾನುವಾರುಗಳಿಗೆ ಶೂನ್ಯ ತ್ಯಾಜ್ಯ ಆಹಾರವನ್ನು ನೀಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಜಾನುವಾರುಗಳಿಗೆ ಡೈಪರ್ ಧರಿಸಲು ಪ್ರಾರಂಭಿಸಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಂತೂ ನೀವು ಜಾನುವಾರುಗಳ ಸಗಣಿ ಮೇಲೆ ತೆರಿಗೆ ವಿಧಿಸುವಾಗ. ಮಾನವ ಮಲದ ಮೇಲೂ ಏಕೆ ತೆರಿಗೆ ವಿಧಿಸಬಾರದು ವ್ಯಂಗ್ಯದ ಮೂಲಕ ಸರ್ಕಾರವನ್ನು ಕಿಚಾಯಿಸುತ್ತಿದ್ದಾರೆ (ಏಜೆನ್ಸೀಸ್).