ದುಬೈ ಕಟ್ಟಡದಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ
ದುಬೈ: ಪ್ರಸ್ತುತ, ವಿಶ್ವವನ್ನೇ ತಲ್ಲಣ ಮೂಡಿಸಿರುವ ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಸಂಘರ್ಷ ಇದೀಗ 14ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ ಭೀಕರ ದಾಳಿಗಳನ್ನು ಮುಂದುವರಿಸಿಕೊಂಡೇ ಬಂದಿರುವ ರಾಷ್ಟ್ರಗಳು, ವಾರ್ ನಿಲ್ಲಿಸುವ ಮನಸ್ಸು ಮಾಡುತ್ತಿಲ್ಲ. ಈ ಮಧ್ಯೆ, ಮತ್ತೊಮ್ಮೆ ದುಬೈ ಟಾರ್ಗೆಟ್ ಆಗಿದೆ.
ಇಂದು (ಮಾ.13) ಇಲ್ಲಿನ ಆರ್ಥಿಕ ಕೇಂದ್ರ ಪ್ರದೇಶವಾದ ದುಬೈನ ಬುರ್ಜ್ ಖಲೀಫದ ಬಳಿ ಸ್ಫೋಟ ಸಂಭವಿಸಿದ್ದಾಗಿ ಅಂತಾರಾಷ್ಟ್ರೀಯ ವರದಿಗಳು ಉಲ್ಲೇಖಿಸಿವೆ. ದುಬೈನ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರದಲ್ಲಿ ಈ ಬ್ಲಾಸ್ ವರದಿಯಾಗಿದೆ. ಘಟನಾ ಸ್ಥಳದಲ್ಲಿ ಈಗಾಗಲೇ ಪೊಲೀಸರು ಹೈಅಲರ್ಟ್ ಆಗಿದ್ದು, ಸ್ಫೋಟಗೊಂಡ ಸ್ಥಳದಿಂದ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ.
ದಟ್ಟ ಹೊಗೆ, ಸೈರನ್ ಅಲರ್ಟ್
ಯುಎಇಯ ಅತಿದೊಡ್ಡ ನಗರವಾದ ಶೇಖ್ ಜಾಯೆದ್ ರಸ್ತೆಯಲ್ಲಿ ಸೈರನ್ಗಳು ಕೇಳಿಬಂದಿದ್ದು, ಸ್ಥಳೀಯರೊಬ್ಬರು ಘಟನೆಯನ್ನು ವಿವರಿಸಿದ್ದಾರೆ. ನಾನು ಉಳಿದಿರುವ ಬಿಲ್ಡಿಂಗ್ ಪಕ್ಕದಲ್ಲೇ ಸ್ಫೋಟ ಸಂಭವಿಸಿದೆ ಎಂದು ಆಸ್ಟ್ರೇಲಿಯಾ ಉದ್ಯಮಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).