ಮಿನಾಬ್ ಶಾಲೆಯ ಮೇಲೆ ದಾಳಿಗೆ ಆದೇಶ ನೀಡಿದ್ದ ಅಧಿಕಾರಿಗಳ ಫೋಟೊ ರೀಲಿಸ್ ಮಾಡಿದ ಇರಾನ್
- ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
- ಮಿನಾಬ್ ಶಾಲೆಯ ಮೇಲೆ ದಾಳಿಗೆ ಆದೇಶ ನೀಡಿದ್ದ ಅಧಿಕಾರಿಗಳ ಫೋಟೊ ರೀಲಿಸ್ ಮಾಡಿದ ಇರಾನ್
- 168 ಮಕ್ಕಳ ಜೀವ ತೆಗೆದ ಈ ಪಾಪಿಗಳನ್ನು ಮರೆಯಲ್ಲ ಎಂದು ಎಕ್ಸ್ನಲ್ಲಿ ಫೋಸ್ಟ್
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭವಾಗಿ ಸುಮಾರು ಒಂದು ತಿಂಗಳು ಕಳೆದರೂ ಉಭಯ ಪಾಳಯದಲ್ಲಿ ಇನ್ನೂ ಶಾಂತಿ ಮಂತ್ರದ ಬದಲು ಸೇಡಿನ ಜ್ವಾಲೆಯೇ ಹೆಚ್ಚುತ್ತಿದೆ.
ಭಾರತ ಸೇರಿದಂತೆ ತನ್ನ ಐದು ಮಿತ್ರ ದೇಶಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿಯನ್ನು ತೆರೆದಿರುವ ಇರಾನ್ ಈಗ ಫೆ. 28 ರಂದು ಮಿನಾಬ್ ಶಾಲೆಯ ಮೇಲೆ ದಾಳಿಗೆ ಆದೇಶ ನೀಡಿದ್ದ ಅಮೆರಿಕದ ಸೇನಾಧಿಕಾರಿಗಳ ಭಾವಚಿತ್ರವನ್ನು (Iran Releases Photos) ಪ್ರಕಟಿಸಿದೆ.
ಈ ಪಾಪಿಗಳನ್ನು ನೆನಪಿಟ್ಟುಕೊಳ್ಳಿ!
ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಸಾವಿನ ಬಳಿಕ ಪ್ರಾರಂಭವಾದ ಈ ಸಂಘರ್ಷದಲ್ಲಿ ಇಲ್ಲಿವೆರೆಗೆ ಸಾರಿರಾರು ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಫೆ. 28 ರಂದು ಅಮೆರಿಕದ ವಿಮಾನಗಳು ಇರಾನಿನ ವಾಯು ಪ್ರದೇಶವನ್ನು ಪ್ರವೇಶಿಸಿ ಮಿನಾಬ್ನಲ್ಲಿರುವ ಶಾಲೆಯ ಮೇಲೆ ಮಿಸೈಲ್ ದಾಳಿ ನಡೆಸಿ 168 ಮಕ್ಕಳು ಸೇರಿದಂತೆ ಒಟ್ಟು 175 ಜನರ ಸಾವು ಸಂಭವಿಸಿದೆ ಎಂದು ಇರಾನ್ ಹೇಳಿತ್ತು.
ಈಗ ಈ ದಾಳಿಗೆ ನಿರ್ದೇಶನ ಮತ್ತು ಆದೇಶ ನೀಡಿದ ಇಬ್ಬರು ಸೇನಾಧಿಕಾರಿಗಳಾದ, ಲೀ ಆರ್ ಟೇಟ್ ಮತ್ತು ಜೆಫ್ರಿ ಇ ಯಾರ್ಕ್ ಅವರ ಭಾವಚಿತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಇಬ್ಬರು ಅಧಿಕಾರಿಗಳೇ ನಮ್ಮ ದೇಶದ ನಿರಪರಾಧಿ 168 ಮಕ್ಕಳ ಸಾವಿಗೆ ಕಾರಣಿಕರ್ತರು, ಈ ಪಾಪಿಗಳನ್ನು ನಾವು ಎಂದಿಗೂ ಕ್ಷಮಿಸುವುದಿಲ್ಲ ಹಾಗೆಯೇ ಮರೆಯುವುದಿಲ್ಲ ಎಂದು ಇರಾನ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ಆರೋಪವನ್ನು ಅಲ್ಲಗೆಳೆದಿದ್ದ ಅಮೆರಿಕ!
ಆದರೆ ಇರಾನ್ ಮಾಡಿದ್ದ ಈ ಆರೋಪವನ್ನು ತಿರಸ್ಕರಿಸಿದ್ದ ಅಮೆರಿಕ, ನಾವೆಂದು ನಾಗರಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ, ನಮ್ಮ ಗುರಿ ಏನಿದ್ದರೂ ಇರಾನಿನ ಮಿಲಿಟರಿ ತಾಣವಾಗಿದೆ.
ನಮಗೆ ಇರಾನಿನ ಜನರ ಸುರಕ್ಷತೆಯೇ ಮೊದಲ ಆದ್ಯತೆಯಾಗಿದೆ. ಪ್ರಜೆಗಳು ಇರಾನಿನ ಆಡಳಿತದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ, ಹೀಗಾಗಿ ಇರಾನ್ ನಮ್ಮ ಮೇಲೆ ಸುಳ್ಳು ಆರೋಪವನ್ನು ಮಾಡುತ್ತಿದೆ ಎಂದು ಅಮೆರಿಕ ಹೇಳಿಕೆ ನೀಡಿತ್ತು, (ಏಜನ್ಸೀಸ್).