ಟ್ರಂಪ್ ಹೊಸ ಹೇರ್‌ಸ್ಟೈಲ್ ನೋಡಿ ಶಾಕ್ ಆದ ನೆಟ್ಟಿಗರು Donald Trump (ಚಿತ್ರ X) 
ವಿದೇಶ

ಟ್ರಂಪ್ ಹೊಸ ಹೇರ್‌ಸ್ಟೈಲ್ ನೋಡಿ ಶಾಕ್ ಆದ ನೆಟ್ಟಿಗರು: ಸೋಷಿಯಲ್ ಮೀಡಿಯಾದಲ್ಲಿ 'ಗೋಲ್ಡನ್ ಹೇರ್' ಟ್ರೋಲ್ ಆಟ! Donald Trump

ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಇತ್ತೀಚಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಹೊಸ ಕೇಶವಿನ್ಯಾಸ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅವರ ಹೊಳೆಯುವ ಗೋಲ್ಡ್​ ಬಣ್ಣದ ಕೂದಲು ಮತ್ತು ಕೇಶವಿನ್ಯಾಸವನ್ನು ನೋಡಿ ನೆಟ್ಟಿಗರು ತರಹೇವಾರು ಮೀಮ್ಸ್​ಗಳು, ಜೋಕ್‌ಗಳು ಹಾಗೂ ಎಐ (AI) ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

'ಹರ್ಮಿ ದಿ ಎಲ್ಫ್' ಪಾತ್ರಕ್ಕೆ ಹೋಲಿಸಿದ ನಿಕಟ ಸಂಬಂಧಿ!

ಟ್ರಂಪ್ ಅವರ ಹೊಸ ಲುಕ್​ ಬಗ್ಗೆ ಅವರ ನಿಕಟ ಸಂಬಂಧಿ (ಸಹೋದರನ ಮಗಳು) ಮೇರಿ ಟ್ರಂಪ್ ತೀವ್ರ ವ್ಯಂಗ್ಯವಾಡಿದ್ದಾರೆ. ಯೂಟ್ಯೂಬ್ ಶೋ ಒಂದರಲ್ಲಿ ಮಾತನಾಡಿದ ಅವರು, ಟ್ರಂಪ್ ಅವರ ಹೊಸ ಲುಕ್ ನೋಡಲು 'ರುಡಾಲ್ಫ್ ದಿ ರೆಡ್-ನೋಸ್ಡ್ ರೇಂಡೀರ್' ಕಾರ್ಟೂನ್‌ನಲ್ಲಿ ಬರುವ 'ಹರ್ಮಿ ದಿ ಎಲ್ಫ್' ಪಾತ್ರದಂತೆ ಕಾಣುತ್ತಿದೆ" ಎಂದು ಕಾಲೆಳೆದಿದ್ದಾರೆ.

ತಂದೆಯ ಅನಾರೋಗ್ಯ ಮತ್ತು ವಿಗ್ ವ್ಯಾಮೋಹ ನೆನಪಿಸಿಕೊಂಡ ಮೇರಿ

ಡೊನಾಲ್ಡ್ ಟ್ರಂಪ್ ತಮ್ಮ ಕೂದಲಿನ ಬಗ್ಗೆ ತೋರುತ್ತಿರುವ ಅತಿಯಾದ ಗಮನ ಹಾಗೂ ಆಸಕ್ತಿಯನ್ನು ಕಂಡು ಮೇರಿ ಟ್ರಂಪ್ ಅವರು ತಮ್ಮ ದಿವಂಗತ ತಂದೆ ಫ್ರೆಡ್ ಟ್ರಂಪ್ (Fred Trump) ಅವರನ್ನು ನೆನಪಿಸಿಕೊಂಡಿದ್ದಾರೆ.

ಮೇರಿ ಅವರ ಪ್ರಕಾರ, ಅವರ ತಂದೆ ಫ್ರೆಡ್ ಟ್ರಂಪ್ ಅವರು ಅಲ್ಸೈಮರ್ (ಮರೆವಿನ ಕಾಯಿಲೆ/Dementia) ರೋಗಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಕೂದಲು ಉದುರುವುದರ ಬಗ್ಗೆ ವಿಪರೀತ ಚಿಂತಿಯಲ್ಲಿ ತೊಡಗಿದ್ದರು. ಕಾಯಿಲೆ ತೀವ್ರತೆ ಹೆಚ್ಚಾದಂತೆ ಅವರು ಅವರ ಕೂದಲಿಗೆ ಹೊಂದಿಕೆಯಾಗುವಂತ ವಿಗ್​ ಧರಿಸಲು ಪ್ರಾರಂಭಿಸಿದರು. ಜೊತೆಗೆ ತಮ್ಮ ಕೂದಲು ಮತ್ತು ಮೀಸೆಗೆ ವಿಪರೀತ ಡೈ (Dye) ಹಚ್ಚಿಕೊಳ್ಳುತ್ತಿದ್ದರು ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕೇಶವಿನ್ಯಾಸವು ಕೇವಲ ಹಾಸ್ಯ ಅಥವಾ ಮೀಮ್ಸ್​ಗಳಿಗೆ ಸೀಮಿತವಾಗದೆ, ಅವರ ಕುಟುಂಬದ ಹಿನ್ನೆಲೆ ಹಾಗೂ ಮೇರಿ ಟ್ರಂಪ್ ಅವರ ಈ ಗಂಭೀರ ಹೇಳಿಕೆಗಳಿಂದಾಗಿ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವಿಭಿನ್ನ ಕೋನದಿಂದ ದೊಡ್ಡ ಮಟ್ಟದ ಸುದ್ದಿಯಾಗಿದೆ.
ಆದಾಗ್ಯೂ, ಒಬ್ಬ ಬಳಕೆದಾರರು ಟ್ರಂಪ್ ಅವರ ಕೂದಲಿನ ಮೀಮ್ಸ್​ಗಳು ದಿನದಿಂದ ದಿನಕ್ಕೆ ಗಡಿಯನ್ನೇ ಮೀರುತ್ತಿವೆ ಎಂದು ತಮಾಷೆ ಮಾಡಿದ್ದರೆ, ಮತ್ತೊಬ್ಬ ಬಳಕೆದಾರ "ಹೊಸ ಟ್ರಂಪ್ ಹೇರ್ ಸೀರಮ್" ಎಂಬ ಶೀರ್ಷಿಕೆಯೊಂದಿಗೆ ಎಐ-ನಿರ್ಮಿತ ತಮಾಷೆಯ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಟ್ರಂಪ್ ಬೆಂಬಲಿಗರೊಬ್ಬರು, "ಯಾರು ಏನೇ ಹೇಳಲಿ, ಟ್ರಂಪ್ ದಿನದಿಂದ ದಿನಕ್ಕೆ ಯುವಕರಂತೆ ಕಾಣುತ್ತಿದ್ದಾರೆ, ಅವರ ಹೊಸ ಹೇರ್‌ಸ್ಟೈಲ್ ಸೂಪರ್ ಆಗಿದೆ" ಎಂದು ಶ್ಲಾಘಿಸಿದ್ದಾರೆ (ಏಜೆನ್ಸೀಸ್​).