ಅವರಿಂದ ಒಂದೇ ದಿನ 3 ಟ್ರಿಲಿಯನ್ ನಷ್ಟ! ಮಧ್ಯಂತರ ಚುನಾವಣೆ ಫಲಿತಾಂಶ ಬೆನ್ನಲ್ಲೇ ಟ್ರಂಪ್​ ಶಾಕಿಂಗ್​ ಹೇಳಿಕೆ | Donald Trump  
ವಿದೇಶ

ಅವರಿಂದ ಒಂದೇ ದಿನ 3 ಟ್ರಿಲಿಯನ್ ನಷ್ಟ! ಮಧ್ಯಂತರ ಚುನಾವಣೆ ಫಲಿತಾಂಶ ಬೆನ್ನಲ್ಲೇ ಟ್ರಂಪ್​ ಶಾಕಿಂಗ್​ ಹೇಳಿಕೆ | Donald Trump

ವಾಷಿಂಗ್ಟನ್​: ಇತ್ತೀಚೆಗಷ್ಟೇ ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಗಳ ಫಲಿತಾಂಶದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಎದುರಾದ ಹಿನ್ನಡೆಯ ಕುರಿತು ಪ್ರತಿಕ್ರಿಯಿಸಿರುವ ಅವರು, ಭಯಪಡುವ ಅಗತ್ಯವಿಲ್ಲ. ನಾವು ಹಿಂದಿನಕ್ಕಿಂತಲೂ ಮತ್ತೆ ಪುಟಿದೇಳುತ್ತೇವೆ. ಇನ್ನೂ ಹೆಚ್ಚು ಬಲಶಾಲಿಗಳಾಗಿ ಹೊರಹೊಮ್ಮುತ್ತೇವೆ ಎಂದು ತಮ್ಮ ಟ್ರೂತ್​ ಸೋಷಿಯಲ್​ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಷೇರು ಮಾರುಕಟ್ಟೆಗಳು ತೀವ್ರ ಕುಸಿತ

ಇನ್ನು, ಯುಎಸ್​ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷವು ಭರ್ಜರಿ ಗೆಲುವು ಸಾಧಿಸಿರುವುದರ ಕುರಿತು ತೀವ್ರ ಕಿಡಿಕಾಡಿರುವ ಟ್ರಂಪ್, ಚುನಾವಣಾ ಫಲಿತಾಂಶಗಳ ಪರಿಣಾಮವಾಗಿ ಅಮೆರಿಕದ ಷೇರು ಮಾರುಕಟ್ಟೆಗಳು ತೀವ್ರ ಕುಸಿತ ಕಂಡಿವೆ. ಇದಕ್ಕೆಲ್ಲ ಚುನಾವಣೆ ಅಥವಾ ನಮ್ಮ ಸೋಲು ಕಾರಣವಲ್ಲ. ಬದಲಿಗೆ, ಡೆಮಾಕ್ರಟಿಕ್‌ ಪಕ್ಷದ ಗೆಲುವೇ ನೇರ ಹೊಣೆ. ಇವರಿಂದ 3 ಟ್ರಿಲಿಯನ್​ ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದಾರೆ.

3 ಟ್ರಿಲಿಯನ್ ಡಾಲರ್‌

ಚುನಾವಣಾ ಫಲಿತಾಂಶಗಳ ಬಳಿಕ ಅಮೆರಿಕದ ಷೇರು ಮಾರುಕಟ್ಟೆಯು ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಿನಗಳಲ್ಲಿ ಕಂಡಿದ್ದೇವೆ. ತಮ್ಮ ಅಧಿಕಾರಾವಧಿಯಲ್ಲಿ ಗಗನಕ್ಕೇರಿದ್ದ ಷೇರು ಮಾರುಕಟ್ಟೆಯು, ಈ ಚುನಾವಣಾ ಫಲಿತಾಂಶಗಳಿಂದಾಗಿ ಒಂದೇ ದಿನದಲ್ಲಿ 3 ಟ್ರಿಲಿಯನ್ ಡಾಲರ್‌ಗಳಷ್ಟು ನಷ್ಟವನ್ನು ಅನುಭವಿಸಿದೆ ಎಂದು ವಿರೋಧ ಪಕ್ಷವನ್ನು ದೂಷಿಸಿದ್ದಾರೆ.

ಮಧ್ಯಂತರ ಚುನಾವಣೆಗಳಲ್ಲಿ, ಅಮೆರಿಕ ಕಾಂಗ್ರೆಸ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಪ್ರತಿನಿಧಿ ಸಭೆ) ಮತ್ತು ಸೆನೆಟ್ ಎರಡರಲ್ಲೂ ಡೆಮಾಕ್ರಟಿಕ್‌ ಪಕ್ಷವು ಮೇಲುಗೈ ಸಾಧಿಸಿದೆ. ಇದರೊಂದಿಗೆ, ಟ್ರಂಪ್ ಸರ್ಕಾರದ ನಿರ್ಧಾರಗಳ ಮೇಲೆ ವಿರೋಧ ಪಕ್ಷಕ್ಕೆ ಹೆಚ್ಚಿನ ಮೇಲ್ವಿಚಾರಣಾ ಅಧಿಕಾರ ಸಿಗಲಿದೆ. ಸರ್ಕಾರದ ನೀತಿಗಳ ಕುರಿತು ಹೆಚ್ಚಿನ ತನಿಖೆಗಳು, ಪ್ರಶ್ನೆಗಳು ಮತ್ತು ಚರ್ಚೆಗಳು ನಡೆಯುವ ಸಾಧ್ಯತೆಯಿದೆ. ಟ್ರಂಪ್ ಪ್ರಸ್ತಾಪಿಸುವ ಕಾನೂನುಗಳಿಗೆ ಅನುಮೋದನೆ ಪಡೆಯುವುದು ಕೂಡ ಇನ್ನುಂದೆ ಸವಾಲಾಗಿ ಪರಿಣಮಿಸಬಹುದು.

ಮತ್ತೊಂದೆಡೆ, ಡೆಮಾಕ್ರಟಿಕ್‌ ಪಕ್ಷದ ಗೆಲುವಿನ ನಂತರ ಮಾರುಕಟ್ಟೆಯಲ್ಲಿ ಉಂಟಾಗಿರುವ ಅನಿಶ್ಚಿತತೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ವಲಯದ ಮೇಲೆ ನಿಯಂತ್ರಣ ಹೇರಬಹುದು ಎಂಬ ಆತಂಕವು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಚುನಾವಣಾ ಫಲಿತಾಂಶಗಳ ಕುರಿತು ಟ್ರಂಪ್ ನೀಡಿರುವ ಹೇಳಿಕೆಗಳು ಸದ್ಯಅಮೆರಿಕದ ರಾಜಕೀಯ ಮತ್ತು ಆರ್ಥಿಕ ವಲಯಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ,(ಏಜೆನ್ಸೀಸ್).