ನಿಕೋಲಸ್ ಮಡುರೊ  
ವಿದೇಶ

4 ದಿನಗಳ ಹಿಂದೆಯೇ ಮಾಡಬೇಕಿತ್ತು! ಆದ್ರೆ... ಯುಎಸ್​ ಕಸ್ಟಡಿಯಲ್ಲಿ ಮಡುರೊ! ಫೋಟೋ ಹರಿಬಿಟ್ಟ ಟ್ರಂಪ್​

ನ್ಯೂಯಾರ್ಕ್​​: ಇಂದು (ಜ.03) ಕ್ಯಾರಕಾಸ್‌ನಲ್ಲಿ ತಮ್ಮ ಮಿಲಿಟರಿ ಪಡೆಯಿಂದ ವೆನೆಜುವೆಲಾ ಮೇಲೆ ದಾಳಿ ನಡೆಸಿದ ಅಮೆರಿಕ, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್​ರನ್ನು ಬಂಧಿಸಿ, ಯುಎಸ್​ಗೆ​ ಕರೆತಂದಿತು. ಆರಂಭದಲ್ಲಿ ಇದು ಕೇವಲ ಅಮೆರಿಕದ ನುಡಿಯಾಗಿತ್ತು. ಆದರೀಗ, ಮಡುರೊ ನಮ್ಮ ಕಸ್ಟಡಿಯಲ್ಲಿರುವುದು ಸತ್ಯ ಎಂಬುದನ್ನು ಅಮೆರಿಕ ಅಧ್ಯಕ್ಷ ಟ್ರಂಪ್​, ಫೋಟೋ ಮೂಲಕ ಸ್ಪಷ್ಟಪಡಿಸಿದ್ದಾರೆ.
ಎಎನ್​ಐ ವರದಿ ಪ್ರಕಾರ, ವೆನೆಜುವೆಲಾ ಮೇಲೆ ದಾಳಿ ನಡೆಸಲು ನಮ್ಮ ಸೇನಾ ಪಡೆ ಹಲವು ದಿನಗಳಿಂದಲೇ ತಯಾರಿ ಮಾಡಿಕೊಂಡಿತ್ತು. ನಾಲ್ಕು ದಿನಗಳ ಹಿಂದೆಯೇ ವಾಯುದಾಳಿಗೆ ಸಂಚು ಹೂಡಿದ್ದೆವು. ಆದ್ರೆ, ಹವಾಮಾನ ವೈಪರೀತ್ಯದಿಂದ ಅಟ್ಯಾಕ್​ ಮಾಡುವುದನ್ನು ಮುಂದೂಡುವ ಅನಿವಾರ್ಯತೆ ಎದುರಾಯಿತು. ಕಡೆಗೂ ವೆನೆಜುವೆಲಾ ಅಧ್ಯಕ್ಷ ಮತ್ತು ಆತನ ಪತ್ನಿಯನ್ನು ಬಂಧಿಸಿ, ನಮ್ಮ ಕಸ್ಟಡಿಯಲ್ಲಿ ಇರಿಸಿದ್ದೇವೆ ಎಂದರು.
"ಈ ವಿಷಯದಲ್ಲಿ ಅಮೆರಿಕಕ್ಕೆ ಹೆಮ್ಮೆಯಿದೆ. ವೆನೆಜುವೆಲಾ ಜನತೆಗೆ ಇದು ಎಚ್ಚರಿಕೆಯ ಗಂಟೆ. ಇಂದು ನಿಕೋಲಸ್ ಮಡುರೊಗೆ ಬಂದಿರುವ ಪರಿಸ್ಥಿತಿ ನಾಳೆ ಅವರಿಗೂ ಬರಬಹುದು ಎಂಬುದು ಅರಿವಿರಲಿ. ಸದ್ಯ ಅಲ್ಲಿನ ಸ್ಥಿತಿ-ಗತಿಗಳು ಸರಿ ಹೋಗುವವರೆಗೂ ನಾವು (ಅಮೆರಿಕ) ಆ ದೇಶವನ್ನು ಮುನ್ನಡೆಸಲಿದ್ದೇವೆ" ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದರು,(ಏಜೆನ್ಸೀಸ್).