ಟ್ರಂಪ್ ಅಮೆರಿಕದ ಮಾನವನ್ನು ಹರಾಜು ಹಾಕಿದ್ದಾರೆ : ಕಮಾಲಾ ಹ್ಯಾರಿಸ್
- ನೆತನ್ಯಾಹು ಹೇಳಿದಂತೆ ಡೊನಾಲ್ಡ್ ಟ್ರಂಪ್ ಕೇಳುತ್ತಾರೆ
- ಟ್ರಂಪ್ ಅಮೆರಿಕದ ಮಾನವನ್ನು ಹರಾಜು ಹಾಕಿದ್ದಾರೆ : ಕಮಾಲಾ ಹ್ಯಾರಿಸ್
- ಎಪ್ಸ್ಟೀನ್ ಫೈಲ್ಸ್ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಇರಾನ್ ಮೇಲೆ ದಾಳಿ ಮಾಡಿದ್ದಾರೆ
ವಾಷಿಂಗ್ಟನ್: ಅಮೆರಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಭಾವಕ್ಕೆ ಒಳಗಾಗಿ ಇರಾನ್ ಮೇಲೆ ದಾಳಿ ನಡೆಸಿದ್ದಾರೆ. ಎಪ್ಸ್ಟೀನ್ ಫೈಲ್ಸ್ ಮೇಲಿದ್ದ ಜನರ ಗಮನವನ್ನು ಸೆಳೆಯಲು ಟ್ರಂಪ್ ಈ ಮಿಲಿಟರಿ ಕಾರ್ಯಾಚರಣೆ ಮಾಡಿದ್ದಾರೆಂದು ಅಮೆರಿಕದ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris on Donald Trump) ಟೀಕಿಸಿದ್ದಾರೆ.
ಶನಿವಾರ (ಏ.18) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಮಲಾ ಹ್ಯಾರಿಸ್, ಕೆಲ ತಿಂಗಳುಗಳ ಹಿಂದೆ ಪ್ರಪಂಚದ ಹಾಗೂ ಅಮೆರಿಕನ್ನರ ಗಮನ ಎಪ್ಸ್ಟೀನ್ ಫೈಲ್ಸ್ ಮೇಲಿತ್ತು. ಇದರಿಂದ ಟ್ರಂಪ್ ಸರ್ಕಾರಕ್ಕೆ ಆಗ್ಗಾಗೆ ಮುಜುಗರ ಉಂಟಾಗುತ್ತಿತ್ತು. ಹೋದಲ್ಲಿ-ಬಂದಲ್ಲಿ ಜನ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಇವೆಲ್ಲದರಿಂದ ಮುಕ್ತಿ ಪಡೆಯಲು, ಅಧ್ಯಕ್ಷ ಟ್ರಂಪ್ ಇಸ್ರೇಲ್ನ ಬೆಂಜಮಿನ್ ನೆತನ್ಯಾಹು ಜೊತೆ ಸೇರಿಕೊಂಡು ಇರಾನ್ ಮೇಲೆ ದಾಳಿ ಮಾಡಿರುವುದಾಗಿ ಕಮಾಲಾ ಆರೋಪಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ ಮಾನ ಹರಾಜು
ಟ್ರಂಪ್ ವಾಗ್ದಾಳಿ ಮುಂದುವರಿಸಿದ ಕಮಾಲಾ, ಎರಡನೇ ವಿಶ್ವಯುದ್ಧದ ನಂತರ, ತಮ್ಮ ಮಿತ್ರ ದೇಶಗಳನ್ನು ಹಾಗೂ ವಿಶ್ವಶಾಂತಿಯನ್ನು ಕಾಪಾಡುವುದು ಅಮೆರಿದ ಆದ್ಯ ಕರ್ತವ್ಯವೆಂದು ತಿಳಿಯಲಾಗಿತ್ತು. ಆದರೆ ಟ್ರಂಪ್ ಈ ರಲ್ಲಾ ಸಂಪ್ರದಾಯಗಳನ್ನು ಗಾಳಿಯಲ್ಲಿ ತೂರಿದ ಪರಿಣಾಮ, ಅಮೆರಿಕದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಡೆಮೊಕ್ರಾಟ್ಗಳು ಗೆಲ್ಲಲಿದ್ದೇವೆ!
ಡೊನಾಲ್ಡ್ ಟ್ರಂಪ್ ಹಾಗೂ ರಿಪಬ್ಲಿಕ್ ಪಕ್ಷದ ಆಡಳಿತದಿಂದ ಅಮೆರಿಕನ್ನರು ಬೇಸತ್ತಿದ್ದಾರೆ. ಅಮೆರಿಕದ ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ. ಆದ್ದರಿಂದ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿ ಅಧ್ಯಕ್ಷರಾಗಲಿದ್ದಾರೆ ಎಂದು ಕಮಾಲಾ ಹೇಳಿಕೆ ನೀಡಿದ್ದಾರೆ,(ಏಜನ್ಸೀಸ್).