ಪಾಕ್​ ಪ್ರಧಾನಿಯನ್ನು ಅವಮಾನಿಸಿದ ಡೊನಾಲ್ಡ್​ ಟ್ರಂಪ್​ (Donald Trump ) 
ವಿದೇಶ

ವಿಶ್ವ ನಾಯಕರ ಎದುರು ಪಾಕ್​ ಪ್ರಧಾನಿಯನ್ನು ಅವಮಾನಿಸಿದ ಟ್ರಂಪ್​: ಅಮೆರಿಕ ಅಧ್ಯಕ್ಷ ಮಾಡಿದ್ದೇನು? ವಿಡಿಯೋ ವೈರಲ್​! Donald Trump

ಪ್ರಮುಖ ಮುಖ್ಯಾಂಶಗಳು

  • ಡೊನಾಲ್ಡ್​ ಟ್ರಂಪ್ ನೇತೃತ್ವದಲ್ಲಿ ಗಾಜಾ ಪುನರ್ನಿರ್ಮಾಣ ಕುರಿತು ನಡೆದ ಶಾಂತಿ ಮಂಡಳಿಯ ಸಭೆ
  • ಈ ಸಭೆಯಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು
  • ಶಾಂತಿ ಮಂಡಳಿ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್​ರನ್ನು ಅವಮಾನಿಸಿದ ಟ್ರಂಪ್​
ವಾಷಿಂಗ್ಟನ್​ : ಗುರುವಾರ (ಫೆ.19) ಅಮೆರಿಕದ ವಾಷಿಂಗ್ಟನ್‌ನಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ( Donald Trump ) ನೇತೃತ್ವದಲ್ಲಿ ಗಾಜಾ ಪುನರ್ನಿರ್ಮಾಣ ಕುರಿತು ಶಾಂತಿ ಮಂಡಳಿಯ ಸಭೆ ನಡೆಯಿತು. ಈ ಸಭೆಯಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು. ಇದೇ ಸಭೆಯಲ್ಲಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಅವಮಾನಿಸಲಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಯುದ್ಧ ನಿಲ್ಲಿಸಿದ್ದು ನಾನೇ

ಶಾಂತಿ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಮತ್ತೊಮ್ಮೆ ಪ್ರಸ್ತಾಪಿಸಿದರು. ಉಭಯ ದೇಶಗಳ ನಡುವಿನ ಯುದ್ಧವನ್ನು ನಾನು ನಿಲ್ಲಿಸಿದೆ ಎಂದು ಮತ್ತೆ ಹೇಳಿದರು. ಯುದ್ಧ ನಿಲ್ಲಿಸಿ, ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ ಎಂದರು. 
ಮಾತು ಮುಂದುವರಿಸಿದ ಟ್ರಂಪ್​, ಯುದ್ಧ ನಿಲ್ಲಿಸದೇ ಹೋದರೆ ಎರಡೂ ದೇಶಗಳಿಗೆ ವ್ಯಾಪಾರದ ಮೇಲಿನ ಸುಂಕ ಹೆಚ್ಚಳದ ಬೆದರಿಕೆ ಹಾಕಿದ್ದೆ ಎಂದರು. ನಾನು ಯುದ್ಧ ನಿಲ್ಲಿಸಲು ನಿಮ್ಮೊಂದಿಗೆ ಮಾತನಾಡಿದ್ದು ನಿಜವೋ? ಅಲ್ಲವೋ? ಎಂದು ಇದೇ ಸಂದರ್ಭದಲ್ಲಿ ಪಾಕ್​ ಪ್ರಧಾನಿಯನ್ನು ಟ್ರಂಪ್​ ಕೇಳಿದರು. ಅಲ್ಲದೆ, ಎದ್ದು ನಿಂತು ಉತ್ತರಿಸುವಂತೆ ತಿಳಿಸಿದರು. ಅದರಂತೆ ಶೆಹಬಾಜ್ ಷರೀಫ್, ವಿಶ್ವ ನಾಯಕರ ಮುಂದೆ ಎದ್ದು ನಿಂತು ಕೋಲೆ ಬಸವನಂತೆ ತಲೆಯಾಡಿದಿದರು. 

ಪಾಕ್​ ಪ್ರಧಾನಿಗೆ ಅವಮಾನ

ಟ್ರಂಪ್​ ಹೇಳುತ್ತಿದ್ದಂತೆ ಪಾಕ್​ ಪ್ರಧಾನಿ, ವಿದ್ಯಾರ್ಥಿಯಂತೆ ಎದ್ದು ನಿಂತು ತಲೆಯಾಡಿಸಿದರು. ಶಾಲೆಯಲ್ಲಿ ಓರ್ವ ವಿದ್ಯಾರ್ಥಿ ಏನಾದರೂ ತಪ್ಪು ಮಾಡಿದಾಗ ಆತನನ್ನು ಎದ್ದು ನಿಲ್ಲಿಸಿ, ಶಿಕ್ಷಕ ವಿಚಾರಣೆ ಮಾಡುವಂತೆ, ಪಾಕ್​ ಪ್ರಧಾನಿಯನ್ನು ಟ್ರಂಪ್​ ವಿಚಾರಿಸಿದರು. ಈ ವೇಳೆ ವಿಶ್ವ ನಾಯಕರ ಎದುರು ಎದ್ದು ನಿಂತ ಶರೀಫ್, ಕೊಂಚ ಮುಜಗರಕ್ಕೆ ಒಳಗಾದಂತೆ ಕಂಡರು. ಟ್ರಂಪ್​ ಎದುರು ಶರೀಫ್​ ಕೋಲೆ ಬಸವನಂತೆ ತಲೆಯಾಡಿಸಿದರು.
ಇನ್ನೂ ಈ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪಾಕ್​ ಪ್ರಧಾನಿಯನ್ನು ಟ್ರಂಪ್​ ಅವಮಾನಿಸಿದ್ದಾರೆ ಎಂಬ ಕಾಮೆಂಟ್​ಗಳು ಹರಿದುಬರುತ್ತಿವೆ. ಟ್ರಂಪ್​ ನಿಲ್ಲು ಅಂದ ಕೂಡಲೇ ಶರೀಫ್​ ನಿಂತುಬಿಟ್ಟರು. ವಿಶ್ವದ ಹೆದರು ಪಾಕಿಸ್ತಾನದ ಸ್ಥಿತಿ ಏನೆಂಬುದನ್ನು ಈ ವಿಡಿಯೋ ತಿಳಿಸುತ್ತದೆ. ಪಾಕಿಸ್ತಾನಕ್ಕೆ ಮೂರು ಕಾಸಿನ ಬೆಲೆ ಇಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. 
ಸಭೆಯ ನಂತರ ಟ್ರಂಪ್ ಅವರು ವಿಶ್ವ ನಾಯಕರನ್ನು ಭೇಟಿಯಾದಾಗ, ಷರೀಫ್ ಸೆಲ್ಯೂಟ್ ಕೂಡ ಮಾಡಿದರು. ಆ ವಿಡಿಯೋ ಕೂಡ ವೈರಲ್ ಆಗುತ್ತಿದೆ, (ಏಜೆನ್ಸೀಸ್​).