ಹೊರ್ಮುಜ್ ಜಲಮಾರ್ಗ ಅಮೆರಿಕದ ಆಸ್ತಿ
- ಹೊರ್ಮುಜ್ ಜಲ ಮಾರ್ಗ ತೆರೆಯಲು ನಿರಾಕರಿಸಿದ ಇರಾನ್
- ಇನ್ಮುಂದೆ ಅದು ನಮ್ಮ ಟೆರಿಟರಿ ಎಂದ ಅಮೆರಿಕ
- ಹೊಸ ನಕ್ಷೆ ರಿಲೀಸ್ ಮಾಡಿದ ಡೊನಾಲ್ಡ್ ಟ್ರಂಪ್
Strait of Hormuz: ತಮ್ಮ ಯಾವ ತಂತ್ರ, ಕುತಂತ್ರಕ್ಕೂ ಬಗ್ಗದ ಇರಾನ್ಗೆ ಮತ್ತೊಂದು ರೀತಿಯಲ್ಲಿ ಪಾಠ ಕಲಿಸಲು ಹೋಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ನಕ್ಷೆಗೆ ಹೊರ್ಮುಜ್ ಜಲಸಂಧಿ'ಯನ್ನು ಸೇರಿಸುವ ಮೂಲಕ ಜಾಗತಿಕವಾಗಿ ಹೊಸ ಸಂಚಲನ, ವಿವಾದವನ್ನು ಸೃಷ್ಟಿಸಿದ್ದಾರೆ.
ಈ ಕುರಿತಾಗಿ ತಮ್ಮ ಅಧಿಕೃತ ಜಾಲತಾಣ ಖಾತೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಹೊರ್ಮುಜ್ ಜಲ ಮಾರ್ಗವು ಇನ್ಮುಂದೆ ಹೊಸ ಅಮೇರಿಕನ್ ಪ್ರದೇಶ. ಈ ಜಲಸಂಧಿಯು ಅಮೆರಿಕ-ಇರಾನ್ ಯುದ್ಧದಲ್ಲಿ ನಿರ್ಣಾಯಕಗೊಂಡಿದೆ ಎಂದು ಹೇಳುವ ಮೂಲಕ ಇನ್ನಷ್ಟು ಕಿಡಿ ಹೊತ್ತಿಸಿರುವುದಂತು ಸ್ಪಷ್ಟ. ಟ್ರಂಪ್ನ ಯಾವ ನಡೆಗೆ ಬಗ್ಗದ ಇರಾನ್, ಸಂಚಾರಕ್ಕಾಗಿ ಜಲ ಮಾರ್ಗವನ್ನು ಸಂಪೂರ್ಣವಾಗಿ ತೆರೆಯುವುದಿಲ್ಲ. ಮಧ್ಯಂತರ ಶಾಂತಿ ಒಪ್ಪಂದದಲ್ಲಿ ಕೊಟ್ಟ ಭರವಸೆಗಳನ್ನು ಕಾರ್ಯರೂಪಕ್ಕೆ ತರುವವರೆಗೆ ಓಪನ್ ಮಾತೇ ಇಲ್ಲ ಎಂದು ಅಮೆರಿಕಕ್ಕೆ ಹೇಳಿದೆ.
ಹೊರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರೆಯುವ ಯಾವ ಲಕ್ಷಣವೂ ಇಲ್ಲ ಎಂದಿರುವ ಇರಾನ್ ನಾಯಕ ಮೊಹಮ್ಮದ್ ಗಾಲಿಬಾಫ್, ಯುಎಸ್ ತನ್ನ ನೌಕಾ ದಿಗ್ಬಂಧನವನ್ನು ತೆಗೆದುಹಾಕಬೇಕು. ಮತ್ತು ವಿಧಿಸಿರುವ ತೈಲ ನಿರ್ಬಂಧಗಳನ್ನು ಕಡಿತಗೊಳಿಸಿ ಮತ್ತು ವಿದೇಶಗಳಲ್ಲಿ ಸ್ಥಗಿತಗೊಳಿಸಿರುವ ಇರಾನಿನ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ,(ಏಜೆನ್ಸೀಸ್).