ಪ್ರಧಾನಿ ಮೋದಿ ಕುಳಿತ ಆಟೋ ರಿಕ್ಷಾ ನಮ್ಮದು ಅಂತ ಹೇಳಿ ಮತ್ತೊಮ್ಮೆ ವಿಶ್ವದೆದುರು ಬೆತ್ತಲಾದ ಪಾಕಿಸ್ತಾನ! 
ವಿದೇಶ

ಪ್ರಧಾನಿ ಮೋದಿ ಕುಳಿತ ಆಟೋ ರಿಕ್ಷಾ ನಮ್ಮದು ಅಂತ ಹೇಳಿ ಮತ್ತೊಮ್ಮೆ ವಿಶ್ವದೆದುರು ಬೆತ್ತಲಾದ ಪಾಕಿಸ್ತಾನ! ASEAN Summit

ವಿಶ್ವ ನಾಯಕರು ಆಟೋದಲ್ಲಿ ಸವಾರಿ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪಾಕಿಸ್ತಾನದ ಕೆಲ ನೆಟ್ಟಿಗರು ಅಪಪ್ರಚಾರಕ್ಕೆ ಮುಂದಾದರು.

ಮನಿಲಾ: ಆಸಿಯಾನ್ ಶೃಂಗಸಭೆಯ ( ASEAN Summit ) ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸವಾರಿ ಮಾಡಿದ ಆಟೋ-ರಿಕ್ಷಾ "ಪಾಕಿಸ್ತಾನದಲ್ಲಿ ತಯಾರಿಸಲ್ಪಟ್ಟಿದ್ದು" ಎಂಬ ಸುಳ್ಳು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ವಿಶ್ವದ ಎದುರು ಮುಖಭಂಗ ಅನುಭವಿಸಿದೆ.

ಭಾರತದ ಮೇಲಿನ ಅಸೂಯೆಯಿಂದ ಪಾಕಿಸ್ತಾನದ ನೆಟ್ಟಿಗರು ಭಾರತದ ಹೆಮ್ಮೆಯ ಬಜಾಜ್ ಆಟೋ ವಾಹನವನ್ನು ತಮ್ಮ ದೇಶದ್ದು ಎಂದು ಬಿಂಬಿಸಲು ಹೋಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ ಈ ನಕಲಿ ಪ್ರಚಾರದ ಅಸಲಿ ಸತ್ಯವೇನು ಮತ್ತು ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ನಡೆದ ನಿಜವಾದ ಬೆಳವಣಿಗೆ ಏನು ಎಂಬ ಕುರಿತು ಒಂದು ವಿಸ್ತೃತ ಮಾಹಿತಿ ಇಲ್ಲಿದೆ.

ಮನಿಲಾದಲ್ಲಿ ನಡೆದ ಆಸಿಯಾನ್ ಶೃಂಗಸಭೆಯ ಗಾಲಾ ಡಿನ್ನರ್ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ಜಾಗತಿಕ ನಾಯಕರು ವಿಶೇಷವಾಗಿ ಅಲಂಕರಿಸಲಾದ ಮೂರು ಚಕ್ರಗಳ ವಾಹನಗಳಲ್ಲಿ (ಆಟೋ) ಸವಾರಿ ಮಾಡಿದ್ದರು. ಫಿಲಿಪೈನ್ಸ್‌ನ ಸಾಂಪ್ರದಾಯಿಕ 'ಜೀಪ್ನಿ' ಶೈಲಿಯ ವರ್ಣರಂಜಿತ ಕಲಾಕೃತಿಗಳಿಂದ ಅಲಂಕರಿಸಲಾಗಿದ್ದ ಈ ವಿಶಿಷ್ಟ ಆಟೋಗಳನ್ನು ಆತಿಥೇಯ ದೇಶವೇ ಅತಿಥಿಗಳ ಸಂಚಾರಕ್ಕಾಗಿ ವ್ಯವಸ್ಥೆ ಮಾಡಿತ್ತು. ಈ ವೇಳೆ ಪ್ರಧಾನಿ ಮೋದಿ ಅವರು ಫಿಲಿಪೈನ್ಸ್‌ನ ಸಾಂಪ್ರದಾಯಿಕ ಉಡುಪಾದ 'ಬಾರೋಂಗ್ ಟಾಗಾಲೋಗ್' ಧರಿಸಿ ಗಮನ ಸೆಳೆದಿದ್ದರು.

ವಿಶ್ವ ನಾಯಕರು ಆಟೋದಲ್ಲಿ ಸವಾರಿ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪಾಕಿಸ್ತಾನದ ಕೆಲ ನೆಟ್ಟಿಗರು ಅಪಪ್ರಚಾರಕ್ಕೆ ಮುಂದಾದರು. ಲಾಹೋರ್ ಮೂಲದ ಪತ್ರಕರ್ತ ಹಮ್ಮದ್ ಹಸನ್ ಸೇರಿದಂತೆ ಹಲವು ಪಾಕಿಸ್ತಾನಿ ಖಾತೆಗಳು, "ಪ್ರಧಾನಿ ನರೇಂದ್ರ ಮೋದಿ ಅವರು ಆಸಿಯಾನ್ ಶೃಂಗಸಭೆಯಲ್ಲಿ 'ಪಾಕಿಸ್ತಾನದಲ್ಲಿ ತಯಾರಿಸಿದ' ಇ-ರಿಕ್ಷಾದಲ್ಲಿ ಸವಾರಿ ಮಾಡಿದರು" ಎಂದು ಸುಳ್ಳು ಪೋಸ್ಟ್‌ಗಳನ್ನು ಹಂಚಿಕೊಂಡವು. ಭಾರತದ ಸಾಧನೆಗಳನ್ನು ಸಹಿಸಲಾರದೆ ಪಾಕಿಸ್ತಾನಿ ನೆಟ್ಟಿಗರು ಇಂತಹ ಹಾಸ್ಯಾಸ್ಪದ ಸುಳ್ಳುಗಳನ್ನು ಹರಡಿದರು.

ಈ ಸುಳ್ಳು ಪ್ರಚಾರದ ಹಿಂದೆ ಒಂದು ಸಣ್ಣ ಲಾಜಿಕ್ ಹುಡುಕಲು ಕೂಡ ಪಾಕಿಗಳು ಪ್ರಯತ್ನಿಸಿದ್ದರು. ಕಳೆದ ತಿಂಗಳು ಪಾಕಿಸ್ತಾನದ ಆಟೋ ತಯಾರಿಕಾ ಸಂಸ್ಥೆಯಾದ 'ಸಾಜ್ಗರ್' ಫಿಲಿಪೈನ್ಸ್‌ನ ಲಗುನಾದಲ್ಲಿ ತನ್ನ ಮೊದಲ ಸಾಗರೋತ್ತರ ಉತ್ಪಾದನಾ ಘಟಕವನ್ನು ಆರಂಭಿಸಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಪಾಕಿಸ್ತಾನಿ ಜಾಲತಾಣಗಳು, ಶೃಂಗಸಭೆಯಲ್ಲಿ ಬಳಸಿದ ಆಟೋಗಳು ತಮ್ಮದೇ ದೇಶದಿಂದ ರಫ್ತಾಗಿರಬಹುದು ಎಂಬ ತಪ್ಪು ಕಲ್ಪನೆಯನ್ನು ಹರಡಲು ಯತ್ನಿಸಿದವು. ಆದರೆ ವಾಸ್ತವತೆ ಸಂಪೂರ್ಣ ಭಿನ್ನವಾಗಿತ್ತು.

ವಾಸ್ತವ ಏನು?

ಅಲ್ಲಿ ಬಳಸಲಾದ ಆಟೋಗಳು ಪಾಕಿಸ್ತಾನದ್ದಲ್ಲ, ಬದಲಿಗೆ ಭಾರತದ ಪ್ರಮುಖ ವಾಹನ ತಯಾರಿಕಾ ದೈತ್ಯ ಸಂಸ್ಥೆಯಾದ 'ಬಜಾಜ್ ಆಟೋ' (Bajaj Auto) ಕಂಪನಿಗೆ ಸೇರಿದವಾಗಿವೆ. ನಾಯಕರು ಕುಳಿತಿದ್ದ ಆಟೋಗಳ ಕ್ಲೋಸ್-ಅಪ್ ವಿಡಿಯೋಗಳಲ್ಲಿ ಬಜಾಜ್ (Bajaj) ಲೋಗೋ ಮತ್ತು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸ್ಪಷ್ಟವಾಗಿ ಗೋಚರಿಸಿದೆ. ಬಜಾಜ್ ಕಂಪನಿಯು 2015ರಿಂದಲೇ ಫಿಲಿಪೈನ್ಸ್ ಮಾರುಕಟ್ಟೆಯಲ್ಲಿ ಬೇರೂರಿದ್ದು, ಇಂದು ಅಲ್ಲಿನ ಆಟೋ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಹೆಸರಾಗಿದೆ ಹಾಗೂ ವಿಶ್ವದ 70ಕ್ಕೂ ಹೆಚ್ಚು ದೇಶಗಳಿಗೆ ತನ್ನ ವಾಹನಗಳನ್ನು ರಫ್ತು ಮಾಡುತ್ತಿದೆ.

ಭಾರತದ ಸಾಧನೆಯನ್ನು ತಮ್ಮದೆಂದು ಹೇಳಿಕೊಳ್ಳಲು ಹೋಗಿ ಸಿಕ್ಕಿಬಿದ್ದ ಪಾಕಿಗಳನ್ನು ಭಾರತೀಯ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. "ಒಂದು ಆಟೋ-ರಿಕ್ಷಾದ ರಾಷ್ಟ್ರೀಯ ಗುರುತನ್ನು ಬದಲಾಯಿಸುವಷ್ಟು ಹತಾಶರಾಗಿದ್ದಾರೆ. ಭಾರತವು ಉತ್ಪಾದಿಸುತ್ತದೆ, ಪಾಕಿಸ್ತಾನವು ತಪ್ಪಾಗಿ ಗುರುತಿಸುತ್ತದೆ" ಎಂದು ನೆಟಿಗರು ವ್ಯಂಗ್ಯವಾಡಿದ್ದಾರೆ. "ಬಜಾಜ್ ಆಟೋ: ಮೇಡ್ ಇನ್ ಇಂಡಿಯಾ, ಪಾಕಿಸ್ತಾನಕ್ಕೆ ಸರಿಯಾದ ತಿರುಗೇಟು" ಎಂದು ಬರೆಯುವ ಮೂಲಕ ಪಾಕ್ ಪ್ರಚಾರದ ಬಂಡವಾಳವನ್ನು ಬಯಲು ಮಾಡಿದ್ದಾರೆ.

ಇನ್ನು ಶೃಂಗಸಭೆಯ ಇತರೆ ಕಾರ್ಯಕ್ರಮಗಳ ಕಡೆ ಗಮನಹರಿಸುವುದಾದರೆ, ಫಿಲಿಪೈನ್ಸ್‌ನಲ್ಲಿ ನಡೆದ ಪ್ರಧಾನಿ ಮೋದಿಯವರ ಎರಡು ದಿನಗಳ ಭೇಟಿಯು ಅತ್ಯಂತ ಮಹತ್ವದ್ದಾಗಿತ್ತು. ಆಸಿಯಾನ್ ಶೃಂಗಸಭೆಯ ಜತೆಗೆ ಪೂರ್ವ ಏಷ್ಯಾ ಶೃಂಗಸಭೆ ಹಾಗೂ ಕ್ವಾಡ್ (Quad) ನಾಯಕರ ಸಭೆಯಲ್ಲೂ ಪ್ರಧಾನಿ ಭಾಗವಹಿಸಿದ್ದರು. ಈ ವೇಳೆ ಕಡಲ ಸಂಪರ್ಕವನ್ನು ಹೆಚ್ಚಿಸಲು ದೀರ್ಘಕಾಲೀನ ಕಡಲ ಸಹಕಾರ ಯೋಜನೆ, ಆಸಿಯಾನ್ ಪ್ರವಾಸಿಗರಿಗೆ ಉಚಿತ ಇ-ವೀಸಾ, ಜೈವಿಕ ಸೈಬರ್ ತರಬೇತಿ ಹಾಗೂ ಪ್ರಮುಖ ಖನಿಜಗಳ ಸಹಕಾರದ ಕುರಿತು ಹಲವು ಪ್ರಮುಖ ಪ್ರಸ್ತಾವನೆಗಳನ್ನು ಮಂಡಿಸಿದರು, (ಏಜೆನ್ಸೀಸ್​).