ಅಜಾನ್ ಸೇರಿದಂತೆ ಮುಸ್ಲಿಮರ ಧಾರ್ಮಿಕ ಪ್ರಾರ್ಥನೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಚಿಂತನೆ
- ಡೆನ್ಮಾರ್ಕ್‌ನಲ್ಲಿ ಹೆಚ್ಚುತ್ತಿರುವ ಇಸ್ಲಾಮೀಕರಣಕ್ಕೆ ಬ್ರೇಕ್ ಹಾಕಲು ಮುಂದಾದ ಸರ್ಕಾರ
- ಅಜಾನ್ ಸೇರಿದಂತೆ ಮುಸ್ಲಿಮರ ಧಾರ್ಮಿಕ ಪ್ರಾರ್ಥನೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಚಿಂತನೆ
- "ಡೆನ್ಮಾರ್ಕ್ ಇಸ್ಲಾಮಾಬಾದ್ ಉಪನಗರವಲ್ಲ" ಎಂದ ವಲಸೆ ಮಂತ್ರಿ ಮಾರ್ಟೆನ್ ಬೋಡ್ಸ್ಕೋವ್
ಡೆನ್ಮಾರ್ಕ್: ದೇಶದಲ್ಲಿ ಇಸ್ಲಾಮೀಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಜಾನ್ ಸೇರಿದಂತೆ ಮುಸ್ಲಿಮರ ಧಾರ್ಮಿಕ ಪ್ರಾರ್ಥನೆಗಳನ್ನು (Azan Ban in Denmark) ಸಂಪೂರ್ಣವಾಗಿ ನಿಷೇಧಿಸುವ ಕುರಿತು ಡೆನ್ಮಾರ್ಕ್ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಡನ್ಮಾರ್ಕ್ ಇಸ್ಲಾಮಾಬಾದ್ನ ಉಪನಗರದಂತೆ ಭಾಸವಾಗುತ್ತಿದ್ದು, ಈ ಹಿನ್ನಲೆಯಲ್ಲಿ ನಮ್ಮ ದೇಶದ ನೆಲದಲ್ಲಿ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ವಲಸೆ ಮಂತ್ರಿ ಮಾರ್ಟೆನ್ ಬೋಡ್ಸ್ಕೋವ್ (Morten Bodskov) ಹೇಳಿಕೆ ನೀಡಿದ್ದಾರೆ.
ಡೆನ್ಮಾರ್ಕ್ನ ಅತಿ ದೊಡ್ಡ ಅಲ್ಪಸಂಖ್ಯಾತರು!
ಡೆನ್ಮಾರ್ಕ್‌ನಲ್ಲಿ ಇಸ್ಲಾಮೀಕರಣ ಹೆಚ್ಚುತ್ತಲಿದ್ದು, ದೇಶದ ಜನಸಂಖ್ಯೆಯಲ್ಲಿ ಶೇ.5 ರಷ್ಟು ಮುಸ್ಲಿಮರೇ ಇದ್ದು, ಇವರು ಡೆನ್ಮಾರ್ಕ್ನಲ್ಲಿರುವ ಅತಿ ದೊಡ್ಡ ಅಲ್ಪಸಂಖ್ಯಾತರಾಗಿ ಪರಿವರ್ತನೆ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ಡೆನ್ಮಾರ್ಕ್‌ನಲ್ಲಿ ಮುಖ ಮುಚ್ಚಿಕೊಂಡು (ಹಿಜಾಬ್, ನಖಾಬ್, ಬುರ್ಖಾ ಧರಿಸುವುದು) ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಿದ್ಯಾಸಂಸ್ಥೆಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.
ಡೆನ್ಮಾರ್ಕ್ನ್ನು ಇಸ್ಲಾಮಾವಾದ್ನ ಉಪನಗರ ಮಾಡುವ ಯಾವುದೇ ಯೋಚನೆ ನಿಮ್ಮ ತಲೆಯಲ್ಲಿದ್ದರೆ ಅದನ್ನು ತೆಗೆದು ಹಾಕಿಬಿಡಿ. ಇದಕ್ಕೆಲ್ಲಾ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಮಾರ್ಟೆನ್ ಬೋಡ್ಸ್ಕೋವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಜಾನ್ ಬ್ಯಾನ್ ಇದೇ ಮೊದಲಲ್ಲ!
ಡೆನ್ಮಾರ್ಕ್‌ನಲ್ಲಿ ಆಜಾನ್ ನಿಷೇಧದ ಕುರಿತು ಚರ್ಚೆ ಇದೇ ಮೊದಲೇನಲ್ಲ. 2020 ಮತ್ತು 2025 ರಲ್ಲಿ ಕೂಡ ಈ ಕುರಿತು ಚರ್ಚೆಯಾಗಿತ್ತು. ಆದರೆ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿರಲಿಲ್ಲ. ಅದರೆ ಯುರೋಪಿನ ಹಲವು ದೇಶಗಳಲ್ಲಿ ಅಜಾನ್ಗೆ ಕಠಿಣ ನೀತಿ-ನಿಯಮಗಳನ್ನು ವಿಧಿಸಲಾಗಿದೆ.
ಅಜಾನ್ ಪ್ರಾರ್ಥನೆಯನ್ನು ಶಬ್ದ ಮಾಲಿನ್ಯ ಉಂಟಾಗದಂತೆ, ಇತರರಿಗೆ ತೊಂದರೆ ಆಗದಂತೆ ಪ್ರಾರ್ಥನೆ ಮಾಡಬೇಕೆಂದು ಹಲವೆಡೆ ನಿಯಮಗಳನ್ನು ರೂಪಿಸಲಾಗಿದೆ. ಹಾಗೆಯೇ ಮಸೀದಿ ಹೊರಗೆ, ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ, (ಏಜನ್ಸೀಸ್).