ಸಿರಿಯಾದ ಪದಚ್ಯುತ ಅಧ್ಯಕ್ಷ ಬಶರ್ ಅಸ್ಸಾದ್ 
ವಿದೇಶ

ಮಾನವೀಯತೆ ವಿರುದ್ಧ ಮತ್ತು ಯುದ್ಧ ಅಪರಾಧ; ದೇಶದಿಂದ ಪರಾರಿಯಾಗಿರುವ ಸಿರಿಯಾ ಮಾಜಿ ಅಧ್ಯಕ್ಷ ಬಶರ್ ಅಸ್ಸಾದ್​ಗೆ ಮರಣದಂಡನೆ ಶಿಕ್ಷೆ | Bashar al-Assad

ಡಮಾಸ್ಕಸ್: 14 ವರ್ಷಗಳ ಸಿರಿಯಾದ ಆಂತರಿಕ ಸಂಘರ್ಷದಲ್ಲಿ ಸುಮಾರು ಅರ್ಧ ಮಿಲಿಯನ್ ಜನರ ಸಾವಿಗೆ ಕಾರಣವಾದ, ಮಾನವೀಯತೆ ವಿರುದ್ಧ ಮತ್ತು ಯುದ್ಧ ಅಪರಾಧ ಪ್ರಕರಣದಗಳಲ್ಲಿ ಸಿರಿಯಾದ ನ್ಯಾಯಾಲಯವು ಮಂಗಳವಾರ(ಅ.11) ಪದಚ್ಯುತ ಅಧ್ಯಕ್ಷ ಬಶರ್ ಅಸ್ಸಾದ್(Bashar al-Assad) ಮತ್ತು ಅವರ ಕಿರಿಯ ಸಹೋದರ ಸಿರಿಯನ್ ಮಿಲಿಟರಿಯ ಮಾಜಿ ನಾಯಕ ಮಹೇರ್ ಅಲ್-ಅಸ್ಸಾದ್​ಗೆ ಮರಣದಂಡನೆ ವಿಧಿಸಿದೆ.
ಹಾಗೆ 2011ರಲ್ಲಿ ದಕ್ಷಿಣ ಸಿರಿಯಾದ ದಾರಾ ಪ್ರಾಂತ್ಯದಲ್ಲಿ ಅಸ್ಸಾದ್ ನೇತೃತ್ವದಲ್ಲಿ ರಾಜಕೀಯ ಭದ್ರತಾ ಶಾಖೆಯ ಮುಖ್ಯಸ್ಥರಾಗಿದ್ದ ಮಾಜಿ ಸಿರಿಯನ್ ಸೇನಾ ಬ್ರಿಗೇಡಿಯರ್ ಜನರಲ್ ಆಗಿದ್ದ, ಅಸ್ಸಾದ್ ಅವರ ತಾಯಿಯ ಸೋದರಸಂಬಂಧಿ ಅತೀಫ್ ನಜೀಬ್​ಗೂ, ದಾರಾದಲ್ಲಿ ದಮನ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಕ್ಕಾಗಿ ಮರಣದಂಡನೆ ನೀಡಲಾಗಿದೆ. ಈ ದಂಗೆ ಮುಂದೆ ಸಿರಿಯಾದಲ್ಲಿ ಆಂತರಿಕ ಸಂಘರ್ಷಕ್ಕೆ ಕಾರಣವಾಯಿತು.


ನಜೀಬ್ ಅವರು 15 ವರ್ಷದೊಳಗಿನ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದಾರೆ. ಮತ್ತು ಸಾವಿಗೆ ಕಾರಣವಾಗುವ ಚಿತ್ರಹಿಂಸೆ ಎಸೆಗಿದ್ದಾರೆ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದ್ದು, ಈ ಕೃತ್ಯಗಳು ಮಾನವೀಯತೆಯ ವಿರುದ್ಧದ ಅಪರಾಧಗಳು ಎಂದು ಮರಣದಂಡನೆಯಂತಹ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಿದೆ.

ಬಿಗಿ ಭದ್ರತೆಯ ನಡುವೆ, ನ್ಯಾಯಾಧೀಶರು ಶಿಕ್ಷೆಯನ್ನು ಓದುವಾಗ ನಜೀಬ್ ಕೈದಿಯ ಸಮವಸ್ತ್ರವನ್ನು ಧರಿಸಿ ಕಟಕಟೆಯಲ್ಲಿ ನಿಂತಿದ್ದರು. ಡಿಸೆಂಬರ್ 2024ರಲ್ಲಿ ದಂಗೆಕೋರರು ಡಮಾಸ್ಕಸ್‌ಗೆ ದಾಳಿ ಮಾಡಿದ ನಂತರ ಅಸ್ಸಾದ್ ಮತ್ತು ಅವರ ಸಹೋದರ ಮಹೇರ್ ರಷ್ಯಾಕ್ಕೆ ಪಲಾಯನ ಮಾಡಿದರು.
ಬಳಿಕ ಒಮ್ಮೆ ಅಮೆರಿಕದಿಂದ ಭಯೋತ್ಪಾದಕ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದ ಮಾಜಿ ಅಲ್-ಖೈದಾ ಕಮಾಂಡರ್ ಅಹ್ಮದ್ ಅಲ್-ಶರಾ ಸಿರಿಯಾದಲ್ಲಿ ಹೊಸ ಸರ್ಕಾರವನ್ನು ರಚಿಸಿ ಆಡಳಿತ ಮಾಡುತ್ತಿದ್ದಾನೆ (ಏಜೆನ್ಸೀಸ್).