Thailand Travel Tragedy:ಒತ್ತಡ ಮತ್ತು ಮಾನಸಿಕವಾಗಿ ಬೆಂದ ದೇಹವನ್ನು ತಣಿಸಲು ಪ್ರವಾಸಕ್ಕೆ ಹೋಗೋದು ಸಾಮಾನ್ಯ. ಆದರೆ, ಅಲ್ಲಿಯೂ ಸಾವು ಬಾಯಿಗೆ ಬರುವಂತಹ ಪ್ರಕರಣಗಳು ನಡೆದುಬಿಟ್ಟರೆ ಅಬ್ಬಾ..!. ಇದೆಲ್ಲ ಬೇಕಿತ್ತಾ ಎಂದು ಎನಿಸಿಬಿಡುತ್ತದೆ. ಅಂತದ್ದೇ ಒಂದು ಮರೆಯಲಾಗದ ಘಟನೆಯನ್ನು ಥೈಲ್ಯಾಂಡ್‌ಗೆ ತೆರಳಿದ್ದ ದಂಪತಿ ಅನುಭವಿಸಿದ್ದಾರೆ.
ರಜಾ ದಿನಗಳನ್ನು ಹಾಯಾಗಿ ಕಳೆಯಲು ಥೈಲ್ಯಾಂಡ್‌ಗೆ ತೆರಳಿದ್ದ ದಂಪತಿ, ಕ್ರಾಬಿಯಲ್ಲಿನ ಹೋಟೆಲ್ವೊಂದರಲ್ಲಿ ಕೋಣೆಯೊಂದನ್ನು ಬಾಡಿಗೆಗೆ (Krabi Hotel Snake incident) ತೆಗೆದುಕೊಂಡಿದ್ದರು. ರಾತ್ರಿ ಗಾಢವಾಗಿ ಮಲಗಿರುವ ವೇಳೆ ಅವರ ಬೆಡ್ ಬಳಿ ವಿಷಕಾರಿ ಹಾವೊಂದು ಹರಿದಾಡಿರುವುದು ಗಮನಕ್ಕೆ ಬಂದಿದೆ.
ಬೆಡ್ ಕೆಳಗೆ ಕಂಡ ನಾಗಪ್ಪ
ಥೈಲ್ಯಾಂಡ್ ಸುತ್ತಮುತ್ತಲು ಭತ್ತದ ಗದ್ದೆ, ಕಡಲ ತೀರ, ಪರ್ವತ ಗುಡ್ಡಗಳಿಂದ ಕೂಡಿದೆ. ಸೆಲಬ್ರೆಟಿಗಳು ಸೇರಿದಂತೆ ಹಲವರು ಕಾಬ್ರಿಯಲ್ಲಿನ ಕಡಲ ತೀರ, ಐತಿಹಾಸಿಕ ದೇಗುಲಗಳ ವೀಕ್ಷಣೆಗೆ ಭೇಟಿ ನೀಡುತ್ತಾರೆ. ಮ್ಯಾನ್ಮಾರ್, ಕಾಂಬೋಡಿಯಾ, ಮಲೇಷಿಯಾ ಒಂದೊಂದು ಪ್ರದೇಶದಲ್ಲೂ ವಿಸ್ಮಯತೆ ಹೆಚ್ಚಿದೆ.
ಭದ್ರತೆ ಬಗ್ಗೆ ಹೆಚ್ಚಿದ ಆತಂಕ
ಸದ್ಯ ಕಣ್ಣುತ್ತಾಕರ್ನ್ ಉತ್ತರಣಾಕ್ರೋನ್ ಎಂಬುವವರು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಪ್ರವಾಸಿಗರಲ್ಲಿ ಆತಂಕವನ್ನುಂಟು ಮಾಡಿದೆ. ಬೆಳಿಗ್ಗೆ ಸುಮಾರು 5 ಗಂಟೆ. ಪಕ್ಕದಲ್ಲಿದ್ದ ನನ್ನ ಸಂಗಾತಿ ಜೋರಾಗಿ ಕಿರುಚಾಡಲು ಶುರು ಮಾಡಿದರು. ಬೆಳ್ಳಂಬೆಳಗ್ಗೆ ಇವಳ್ಯಾಕೆ ಹೀಗೆ ಕಿರುಚಾಡುತ್ತಿದ್ದಾಳೆ ಎಂದು ಕೇಳಿದೆ. ಆಗ ಎದೆ ಝಲ್ ಎನ್ನುವ ವಿಚಾರವನ್ನು ಆಕೆ ಹೇಳಿದಳು.
ನನ್ನ ಕುತ್ತಿಗೆ ಮೇಲೆ ಹಾವು ಹರಿದಾಡಿಂತಾಯಿತು ಎಂದು ಆಕೆ ಹೇಳಿದಳು. ಮೊದಲಿಗೆ ಭ್ರಮೆ ಎಂದು ತಿಳಿದು ಸುಮ್ಮನಾದ ಆಕೆ. ನಂತರ ಟಾರ್ಚ್ ಹಾಕಿ ಹುಡುಕಾಡಿದಾಗ ನಮ್ಮ ಬೆಡ್ ಕೆಳಗೆ ಹಾವು ಬುಸ್ಗುಡುತ್ತಿತ್ತು. ಅದೃಷ್ಟವಶಾತ್ ಇಬ್ಬರಿಗೆ ಹಾವು ಕಚ್ಚಲಿಲ್ಲ ಎಂದು ದಂಪತಿ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).