Benjamin Netanyahu | ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು 
ವಿದೇಶ

Benjamin Netanyahu | ಭ್ರಷ್ಟಾಚಾರ ಪ್ರಕರಣ; ಇಸ್ರೇಲ್ ಅಧ್ಯಕ್ಷರಿಗೆ ಕ್ಷಮಾದಾನ ಕೋರಿಕೆ ಸಲ್ಲಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಟೆಲ್​ಅವಿವ್​: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ದೀರ್ಘಕಾಲದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕ್ಷಮಾದಾನಕ್ಕಾಗಿ ಅಧ್ಯಕ್ಷ ಐಸಾಕ್ ಹೆರ್ಜಾಗ್​ರಿಗೆ ವಿನಂತಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ, ದೇಶವನ್ನು ಒಳಗಿನಿಂದ ಹರಿದು ಹಾಕುತ್ತಿದ್ದಾರೆ ಎಂದಿದ್ದಾರೆ.
ಇದು ಗಮನಾರ್ಹ ಪರಿಣಾಮಗಳನ್ನು ಹೊಂದಿರುವ ಅಸಾಧಾರಣ ವಿನಂತಿಯಾಗಿದೆ ಎಂದು ಅಧ್ಯಕ್ಷರ ಕಚೇರಿಗೆ ತಿಳಿದಿದೆ. ಅಲ್ಲದೆ, ಎಲ್ಲಾ ಸಂಬಂಧಿತ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ, ಅಧ್ಯಕ್ಷರು ಜವಾಬ್ದಾರಿಯುತವಾಗಿ ಮತ್ತು ಪ್ರಾಮಾಣಿಕವಾಗಿ ವಿನಂತಿಯನ್ನು ಪರಿಗಣಿಸುತ್ತಾರೆ ಎಂದು ಹರ್ಜೋಗ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಇಸ್ರೇಲ್​ ಪ್ರಧಾನಿ, ವಿಚಾರಣೆಯ ಮುಂದುವರಿಕೆಯು ನಮ್ಮನ್ನು ಒಳಗಿನಿಂದ ಹರಿದು ಹಾಕುತ್ತಿದೆ. ಅಲ್ಲದೆ, ತೀವ್ರವಾದ ವಿಭಜನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಹೇಳಿದ್ದಾರೆ. ಏಕೆಂದರೆ ನೆತನ್ಯಾಹು ಈ ಹಿಂದೆ ದೋಷಾರೋಪಣೆಗಳು ಕುಸಿಯುತ್ತವೆ ಮತ್ತು ನ್ಯಾಯಾಲಯದಲ್ಲಿ ತಮ್ಮ ನಿರಪರಾಧಿ ಎಂದು ಸಾಬೀತುಪಡಿಸುತ್ತೇನೆ. ಪ್ರಸ್ತುತ ಇಸ್ರೇಲ್​ನಲ್ಲಿ ಮುಂದಿರುವ ಭದ್ರತಾ ಸವಾಲುಗಳು ಮತ್ತು ರಾಜತಾಂತ್ರಿಕ ಅವಕಾಶಗಳನ್ನು ಎದುರಿಸುತ್ತಿರುವ ನಾನು, ಬಿರುಕುಗಳನ್ನು ಸರಿಪಡಿಸಲು, ರಾಷ್ಟ್ರೀಯ ಏಕತೆಯನ್ನು ಸಾಧಿಸಲು ಮತ್ತು ದೇಶದ ಸಂಸ್ಥೆಗಳಲ್ಲಿ ಸಾರ್ವಜನಿಕ ನಂಬಿಕೆಯನ್ನು ಪುನಃಸ್ಥಾಪಿಸಲು ನನ್ನ ಶಕ್ತಿಯಿಂದ ಎಲ್ಲವನ್ನೂ ಮಾಡಲು ಬದ್ಧನಾಗಿದ್ದೇನೆ ಎಂದು ನೆತನ್ಯಾಹು ಬರೆದಿದ್ದಾರೆ.

ವಿವಾದದ ಕೇಂದ್ರಬಿಂದು

ಮುಂದುವರೆದು ಮಾತನಾಡಿದ ನೆತನ್ಯಾಹು, ನನ್ನ ವಕೀಲರು ಇಂದು ದೇಶದ ಅಧ್ಯಕ್ಷರಿಗೆ ಕ್ಷಮಾದಾನ ಕೋರಿಕೆಯನ್ನು ಕಳುಹಿಸಿದ್ದಾರೆ. ದೇಶದ ಒಳಿತನ್ನು ಬಯಸುವ ಯಾರಾದರೂ ಈ ಕ್ರಮವನ್ನು ಬೆಂಬಲಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಅಲ್ಲದೆ, ವಿಚಾರಣೆಯು ತೀವ್ರ ವಿವಾದದ ಕೇಂದ್ರಬಿಂದುವಾಗಿದೆ ಎಂದಿದ್ದಾರೆ.
ಇಸ್ರೇಲಿ ಪ್ರಧಾನಿಯ ಹೆಸರು ಮೂರು ಭ್ರಷ್ಟಾಚಾರ ವಿಚಾರಣೆಗಳಲ್ಲಿದೆ, ಇದರಲ್ಲಿ ಅವರ ಪತ್ನಿ ಸಾರಾ ಕೂಡ ಒಬ್ಬರಾಗಿದ್ದಾರೆ. ಅಲ್ಲದೆ, ವಿಚಾರಣೆಗಳಲ್ಲಿ ನೆತನ್ಯಾಹು ಯಾವುದೇ ತಪ್ಪನ್ನು ಪದೇಪದೆ ನಿರಾಕರಿಸಿದ್ದಾರೆ ಮತ್ತು ಅವರ ಬೆಂಬಲಿಗರು ಈ ಪ್ರಕರಣಗಳನ್ನು ರಾಜಕೀಯ ಪ್ರೇರಿತವೆಂದು ತಳ್ಳಿಹಾಕಿದ್ದಾರೆ.
ಇಸ್ರೇಲಿ ಪ್ರಧಾನಿ ಮತ್ತು ಅವರ ಪತ್ನಿ ಸಾರಾ ಅವರು ರಾಜಕೀಯ ಲಾಭಕ್ಕಾಗಿ ಕೋಟ್ಯಾಧಿಪತಿಗಳಿಂದ ಸಿಗಾರ್, ಆಭರಣಗಳು ಮತ್ತು ಷಾಂಪೇನ್ ಸೇರಿದಂತೆ $260,000 ಕ್ಕಿಂತ ಹೆಚ್ಚು ಮೌಲ್ಯದ ಐಷಾರಾಮಿ ಉಡುಗೊರೆಗಳನ್ನು ಸ್ವೀಕರಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ,(ಏಜೆನ್ಸೀಸ್).