ಟೋಕಿಯೋ: ಜಪಾನ್‌ನ(Japan) ಕವಾಗೋ ನಗರದಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬರು ಸ್ಥಳೀಯ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೇ ನಿರ್ಮಿಸಿದ್ದ ಮತ್ತು ಪಾಕ್ ರಾಯಭಾರಿ ಉದ್ಘಾಟಿಸಿದ್ದ ಮಸೀದಿಯನ್ನು, ಜಪಾನ್ ಸರ್ಕಾರ ಅಕ್ರಮ ಎಂದು ಕರೆದಿದ್ದು, ಕೆಡವಲು ಆದೇಶ ನೀಡಿದೆ.
ಸೈತಾಮಾ ಪ್ರಾಂತ್ಯದ ಕವಾಗೋದಲ್ಲಿರುವ ಈ ಮಸೀದಿ, ಪರ್ವತ ಅರಣ್ಯ ಭೂಮಿ ಎಂದು ವರ್ಗೀಕರಿಸಲಾದ 4,500 ಚದರ ಮೀಟರ್ ಜಮೀನಿನಲ್ಲಿದೆ. ಮಸೀದಿ ನಿರ್ಮಿಸಿದ ಸ್ಥಳ ನಗರೀಕರಣ ನಿಯಂತ್ರಣ ಪ್ರದೇಶದೊಳಗೆ ಬರುತ್ತದೆ. ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆಯದ ನಿರ್ಮಿಸಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಸೀದಿ ವಿವಾದದಿಂದ ಅಂತರ ಕಾಯ್ದುಕೊಂಡ ಪಾಕ್ ರಾಯಭಾರಿ ಕಚೇರಿ, ಮಸೀದಿಗಳ ನಿರ್ಮಾಣ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಜಪಾನಿನ ಕಾನೂನುಗಳನ್ನು ಪಾಲಿಸಬೇಕೆಂದು ಜಪಾನ್‌ನಲ್ಲಿ ವಾಸಿಸುವ ಎಲ್ಲಾ ಪಾಕಿಸ್ತಾನಿಗಳಿಗೆ ಮನವಿ ಮಾಡಲಾಗುವುದು. ಸ್ಥಳೀಯ ಅಧಿಕಾರಿಗಳಿಂದ ಪರವಾನಗಿಗಳನ್ನು ಪಡೆದ ಬಳಿಕವೇ ಯಾವುದೇ ನಿರ್ಮಾಣವನ್ನು ಕೈಗೊಳ್ಳಬೇಕು ಎಂದು ಅದು ತಿಳಿಸಿದೆ.
ವಿಶೇವಾಗಿ ಸ್ಥಳೀಯ ಆಡಳಿತ ಸಂಸ್ಥೆಯ ಕಾನೂನುಗಳನ್ನು ಪಾಲಿಸದ ಯಾವುದೇ ಯೋಜನೆಯಲ್ಲಿ ಜಪಾನ್ನಲ್ಲಿರುವ ರಾಯಭಾರಿ ಕಚೇರಿ ಭಾಗಿಯಾಗಿಲ್ಲ. ಇನ್ನೂ ಜಪಾನಿನ ಕಾನೂನಿನಿಂದ ನಿಗದಿಪಡಿಸಿದಂತೆ ಕಟ್ಟಡವು ಅಗತ್ಯವಿರುವ ಎಲ್ಲಾ ಪರವಾನಗಿಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದ ಬಳಿಕ ನಮ್ಮ ರಾಯಭಾರಿ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದೆ.
ಇನ್ನೂ ನಗರ ಅಧಿಕಾರಿಗಳ ಪ್ರಕಾರ, ಮಸೀದಿಯೂ 2024ಕ್ಕೂ ಮುಂಚೆಯಿಂದಲೂ ಮಸೀದಿಯಿತ್ತು. ಆದರೆ ಅದು ಅಕ್ರಮವಾಗಿ ಕಟ್ಟಿದ ಕಟ್ಟಡ ಎಂಬುದು 2024ರಲ್ಲಿ ತಿಳಿದಿದೆ. ಮಸೀದಿಯ ಹೊರಭಾಗದ ಕೆಲಸ ಪೂರ್ಣಗೊಂಡ ನಂತರ ನಿರ್ಮಾಣವನ್ನು ನಿಲ್ಲಿಸುವಂತೆ ಕೇಳಿಕೊಂಡರು. ಕಾರ್ಮಿಕರಿಗೆ ಜಪಾನೀಸ್ ತಿಳಿಯದ ಕಾರಣ ಕಟ್ಟಡ ಕಾರ್ಯವನ್ನು ಮುಂದುವರೆಸಿದರು ಎಂದು ಹೇಳಿದ್ದಾರೆ (ಏಜೆನ್ಸೀಸ್).