ಸಾಂದರ್ಭಿಕ ಚಿತ್ರ 
ವಿದೇಶ

ಯುಎಸ್ಎಸ್ ಲಿಂಕನ್ ಸಿಬ್ಬಂದಿಯ ಮಾನಸಿಕ ಆರೋಗ್ಯದ ಬಗ್ಗೆ ಕಳವಳ; ಟ್ರಂಪ್ ಹೇಳಿದ್ದೇನು? | USS Lincoln Staff mental health

ಪ್ರಮುಖ ಮುಖ್ಯಾಂಶಗಳು

  • 9 ತಿಂಗಳಿನಿಂದ ನಿಯೋಜನೆಗೊಂಡಿರುವ USS ಅಬ್ರಹಾಂ ಲಿಂಕನ್
  • ಸಿಬ್ಬಂದಿಯ ಮಾನಸಿಕ ಆರೋಗ್ಯ ಬಗ್ಗೆ ಕುಟುಂಬಸ್ಥರ ಕಳವಳ
  • ಮನೋಸ್ಥೈರ್ಯ ಹೆಚ್ಚಿಸಲು ಕ್ಯಾಪ್ಟನ್ ಫ್ಯಾಥಮ್ ಎಂಬ ನಾಯಿ ನಿಯೋಜನೆ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಸತತ 9 ತಿಂಗಳಿಂದ ಕೆಲಸ ಮಾಡುತ್ತಿರುವ, ಅಮೆರಿಕದ ಯುಎಸ್ಎಸ್ ಅಬ್ರಹಾಂ ಲಿಂಕನ್ ಸಿಬ್ಬಂದಿಯ ಮಾನಸಿಕ ಸ್ಥಿತಿ ಬಗ್ಗೆ ಕಳವಳ ವ್ಯಕ್ತವಾಗಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಆತಂಕಗಳನ್ನು ತಳ್ಳಿಹಾಕಿದ್ದಾರೆ. ಸಿಬ್ಬಂದಿಯ ಕುಟುಂಬಸ್ಥರು ಅವರ ಬಗ್ಗೆ ಚಿಂತೆ ಮಾಡುತ್ತಿಲ್ಲವೇ? ಎಂಬ ಪ್ರಶ್ನೆಗೆ ಟ್ರಂಪ್ ಇಲ್ಲ ಎಂದು ಉತ್ತರಿಸಿದ್ದಾರೆ.
ಇನ್ನು, ಯುಎಸ್ಎಸ್ ಅಬ್ರಹಾಂ ಲಿಂಕನ್ ಅನ್ನು ಶೀಘ್ರದಲ್ಲೇ ವಾಪಸ್ ಕರೆಸಿಕೊಳ್ಳಲಾಗುತ್ತೆ. ಅದರ ಬದಲಿಗೆ ಮತ್ತೊಂದು ವಿಮಾನವಾಹಕ ನೌಕೆಯನ್ನು ನಿಯೋಜಿಸುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆ ಲಿಂಕನ್ ಹಡಗಿನ ಕೆಲಸದ ಅವಧಿಯನ್ನು ವಿಸ್ತರಿಸಲಾಗಿತ್ತು. ಈ ಪರಮಾಣು ಚಾಲಿತ ವಿಮಾನವಾಹಕ ನೌಕೆ 2025ರ ನವೆಂಬರ್‌ನಲ್ಲಿ ಕ್ಯಾಲಿಫೋರ್ನಿಯಾದಿಂದ ಹೊರಟಿತ್ತು. ಬಳಿಕ ಅದನ್ನು ಮಧ್ಯಪ್ರಾಚ್ಯಕ್ಕೆ ನಿಯೋಜಿಸಲಾಗಿತ್ತು ಎಂದಿದ್ದಾರೆ.

ಸಿಬ್ಬಂದಿಯ ಮಾನಸಿಕ ಆರೋಗ್ಯದ ಬಗ್ಗೆ ಆತಂಕ

ಅಮೆರಿಕ ಸೇನಾ ಮೂಲಗಳ

ಪ್ರಕಾರ,

ಆ ಹಡಗಿನಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಸಿಬ್ಬಂದಿಯ ಮಾನಸಿಕ ಆರೋಗ್ಯದ ಕಳವಳ ವ್ಯಕ್ತವಾಗಿದೆ. ಕೆಲ ನಾವಿಕರು ಸಮುದ್ರಕ್ಕೆ ಹಾರಲು ಯತ್ನಿಸಿದ್ದಾರೆ ಎಂಬ ವರದಿಗಳೂ ಕೇಳಿಬಂದಿವೆ. ಆಗಸ್ಟ್ 3ರಂದು ನಾವಿಕನೊಬ್ಬ ಸಮುದ್ರಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ. ಆದರೆ ನೌಕಾಪಡೆ ಕಾರ್ಯದರ್ಶಿ ಹಂಗ್ ಕಾವೋ, ಕೆಲವರಿಗೆ ಮಾತ್ರ ಮಾನಸಿಕ ಆರೋಗ್ಯದ ಬಗ್ಗೆ ಚಿಕಿತ್ಸೆ ನೀಡಲಾಗಿದೆ, ಯಾವುದೇ ಪ್ರಾಣಹಾಯಾಗಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

ಮನೋಸ್ಥೈರ್ಯ ಹೆಚ್ಚಿಸಲು ನಾಯಿ ನಿಯೋಜನೆ

ಹಡಗಿನಲ್ಲಿರುವ ಸಿಬ್ಬಂದಿಯ ಆರೋಗ್ಯ ಮತ್ತು ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಐವರು ಧರ್ಮಗುರುಗಳು, ಒಬ್ಬ ಮನೋವೈದ್ಯರು, ಸೇರಿದಂತೆ ಹಲವು ಅವರ ಕಾಳಜಿ ವಹಿಸುತ್ತಾರೆ. ಇದರ ಜತೆಗೆ ‘ಕ್ಯಾಪ್ಟನ್ ಫ್ಯಾಥಮ್’ ಎಂಬ ನಾಯಿಯನ್ನೂ ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸಲು ಹಡಗಿನಲ್ಲಿ ಇರಿಸಲಾಗಿದೆ. ಇತ್ತ, USS ಅಬ್ರಹಾಂ ಲಿಂಕನ್‌ನಲ್ಲಿನ ಪರಿಸ್ಥಿತಿ ಕುರಿತ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಸಂಸದರು ಒತ್ತಾಯಿಸಿದ್ದಾರೆ,(ಏಜೆನ್ಸೀಸ್​).