ಬೀಜಿಂಗ್: ಯುನೈಟೆಡ್ ಸ್ಟೇಟ್ಸ್ (ಯುಎಸ್) ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಸ್ಪಷ್ಟ ಸಂದೇಶವೆಂದು ಪರಿಗಣಿಸಬಹುದಾದ ರೀತಿಯಲ್ಲಿ, ಚೀನಾ (China) ತೈವಾನ್ ಸುತ್ತಲೂ ಲೈವ್-ಫೈರ್ ಮಿಲಿಟರಿ ಕವಾಯತು ಪ್ರಾರಂಭಿಸಿದೆ. ಈ ಮೂಲಕ ತೈವಾನ್ ಯಾವಾಗಲೂ ಚೀನಾದ ಪ್ರದೇಶವೆಂದು ಪಶ್ಚಿಮದ ದೇಶಗಳಿಗೆ ಸ್ಪಷ್ಟ ಪಡಿಸಿದೆ. ಸೋಮವಾರ (ಡಿ.29) ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಈಸ್ಟರ್ನ್ ಥಿಯೇಟರ್ ಕಮಾಂಡ್ ತೈವಾನ್ ಜಲಸಂಧಿಯ ಮಧ್ಯ ಪ್ರದೇಶಗಳಲ್ಲಿ ಜಲ ಮತ್ತು ವಾಯುಪ್ರದೇಶದಲ್ಲಿ ಕವಾಯತುಗಳನ್ನು ನಡೆಸಲು ದೀರ್ಘ-ಶ್ರೇಣಿಯ ರಾಕೆಟ್ಗಳೊಂದಿಗೆ ಫೈಟರ್‌ಗಳು, ಬಾಂಬರ್‌ಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು ಬಳಸುತ್ತಿದೆ ಎಂದು ವರದಿಯಾಗಿದೆ.
ತೈವಾನ್‌ಗೆ ಯುಎಸ್ ನೆರವು
ಯುಎಸ್ ತೈವಾನ್‌ಗೆ 11 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪ್ಯಾಕೇಜ್ ಅನ್ನು ಅನುಮೋದಿಸಿದೆ. ಇದು ತೈವಾನ್‌ಗೆ ಯುಎಸ್‌ನ ಅತಿದೊಡ್ಡ ಶಸ್ತ್ರಾಸ್ತ್ರ ಮಾರಾಟವಾಗಿದೆ. ಇದರ ಬೆನ್ನಲ್ಲೇ ಚೀನಾ ಈ ಮಿಲಿಟರಿ ಕವಾಯತ್ನ್ನು ನಡೆಸಿದೆ ಎಂದು ಹೇಳಲಾಗುತ್ತಿದೆ. ತನ್ನ ರಾಷ್ಟ್ರೀಯ ಸಾರ್ವಭೌಮತ್ವ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಚೀನಾ ದೃಢ ಮತ್ತು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಡಿಸೆಂಬರ್ 18 ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಜಪಾನ್‌ಗೆ ಕಳವಳ
ಈ ಸಮರಾಭ್ಯಾಸವನ್ನು ಜಪಾನ್‌ಗೆ ಸಂದೇಶವೆಂದು ಪರಿಗಣಿಸಲಾಗಿದ್ದು, ಜಪಾನ್ ಪ್ರಧಾನಿ ಸನೇ ತಕೈಚಿ ನವೆಂಬರ್ ತಿಂಗಳು ತೈವಾನ್‌ಗೆ ಬದುಕುಳಿಯುವ-ಅಪಾಯದ ಪರಿಸ್ಥಿತಿ ಎದುರಾಗಬಹುದು ಹಾಗಾಗಿ ತನ್ನ ರಕ್ಷಣೆ ದೃಷ್ಟಿಯಿಂದ ಅಮೆರಿಕದ ಬೆಂಬಲ ಪಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯಿಂದ ಕೆರಳಿದ ಚೀನಾ, ಜಪಾನ್ ಪ್ರಧಾನ ಮಂತ್ರಿ ಕೂಡಲೇ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಹೇಳಿತ್ತು. ಹಾಗೆಯೇ ಒಕಿನಾವಾ ದ್ವೀಪವನ್ನು ಮಿಲಿಟರಿಯಾಗಿ ಅಭಿವೃದ್ಧಿಪಡಿಸುವ ಜಪಾನ್‌ನ ಕ್ರಮವನ್ನು ಚೀನಾ ಟೀಕಿಸಿತು,(ಏಜನ್ಸೀಸ್).