ನತಾಶಾ ಬೊಂಬೆ ವಿವಾದ: ಚೀನಾ ವಿರುದ್ಧ ಜನಾಂಗೀಯ ನಿಂದನೆ ಆರೋಪ
- ಮಾನಸಿಕ ಒತ್ತಡ ನಿವಾರಣೆ ಹೆಸರಿನಲ್ಲಿ ಕಪ್ಪು ವರ್ಣದ 'ನತಾಶಾ' ಬೊಂಬೆ ತಯಾರಿಸಿರುವ ಚೀನಾ
- ಡ್ರ್ಯಾಗನ್ ದೇಶದ ವಿರುದ್ಧ ಜನಾಂಗೀಯ ನಿಂದನೆ ಆರೋಪ
- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 'ನತಾಶಾ' ಬೊಂಬೆ ವಿಡಿಯೋಗಳು
ವೈರಲ್: ನತಾಶಾ ಎಂಬ ಕಪ್ಪು ವರ್ಣದ ಬೊಂಬೆಯನ್ನು ಹಿಂಸಾತ್ಮಕವಾಗಿ ಬಳಸಿಕೊಳ್ಳುವ ವಿಡಿಯೋಗಳನ್ನು ನೀವು ಸೋಷಿಯಲ್ ಮೀಡಿಯಾಗಳಲ್ಲಿ ನೋಡಿರುತ್ತೀರಾ. ಈಗ ಇದು ಅಂತಾರಾಷ್ಟ್ರೀಯವಾಗಿ ಸುದ್ದಿಯಾಗುತ್ತಿದ್ದು, ಈ ಬೊಂಬೆಯನ್ನು ತಯಾರಿಸಿರುವ ಚೀನಾನ ಮೇಲೆ ಜನಾಂಗೀಯ ನಿಂದನೆ (Natasha Doll Controversy) ಆರೋಪ ಕೇಳಿಬರುತ್ತಿದೆ.
ಈ ಬೊಂಬೆಯನ್ನು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ತಯಾರಿಸಲಾಗಿದೆ ಎಂದು ಚೀನಾ ಎಲ್ಲೆಡೆ ಮಾರ್ಕೆಟಿಂಗ್ ಮಾಡಿತ್ತು. ಈ ಬೊಂಬೆಯನ್ನು ಹೇಗೇ ಬೇಕೋ ಹಾಗೇ ಬಳಸಿಕೊಳ್ಳಬಹುದು, ಏನು ಮಾಡಿದರೂ ಈ ಬೊಂಬೆ ಹಾಳಾಗುವುದಿಲ್ಲ. ನಿಮ್ಮ ಒತ್ತಡ ಕಡಿಮೆ ಮಾಡುತ್ತದೆ ಎನ್ನುವುದು ಚೀನಾದ ವಾದವಾಗಿತ್ತು.
ಇದು ಜನಾಂಗೀಯ ದ್ವೇಷ!
ಆದರೆ ನತಾಶಾ ಎಂಬ ಹೆಸರಿನ ಬೊಂಬೆಯನ್ನು ಸುತ್ತಿಗೆಯಿಂದ ಹೊಡೆಯುವ, ಚಾಕುವಿನಿಂದ ಚುಚ್ಚುವ ಹೀಗೆ ಮೊದಲಾದ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಾಗತಿಕವಾಗಿ ಚೀನಾ ಮೇಲೆ ಜನಾಂಗೀಯ ನಿಂದನೆ ಆರೋಪ ಕೇಳಿಬರುತ್ತಿದೆ.
ಈ ಬೊಂಬೆಯನ್ನು ಕೇವಲ ಕಪ್ಪು ವರ್ಣದಲ್ಲಿ ಮಾತ್ರ ಏಕೆ ತಯಾರಿಸಲಾಗಿದೆ? ಇದು ಕಪ್ಪುವರ್ಣದ ಜನರನ್ನು ಕೀಳು, ಅವರನ್ನು ಹೇಗೇ ಬೇಕಾದರೂ ಬಳಸಿಕೊಳ್ಳಬಹುದು ಎನ್ನುವ ಪ್ರೊಪಗಾಂಡಾವನ್ನು ಬಿತ್ತುವ ಕೆಲಸವನ್ನು ಚೀನಾ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ನಿಮಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಬೊಂಬೆಯನ್ನು ತಯಾರಿಸಲು ಅನುಮತಿಯಿದೆ. ಆದರೆ ಇದು ಸ್ಪಷ್ಟ ಜನಾಂಗೀಯ ನಿಂದನೆ ಎಂದು ಹಲವಾರು ಕೆರೆಬಿಯನ್ ದೇಶಗಳು ವಿರೋಧಿಸಿವೆ. ಈ ಕೂಡನೇ ಚೀನಾ ಈ ಬೊಂಬೆ ತಯಾರಿಸುವುದನ್ನು ನಿಲ್ಲಿಸಬೇಕು ಹಾಗೂ ಕಪ್ಪು ಜನರಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಲಾಗಿದೆ, (ಏಜನ್ಸೀಸ್).