China 
ವಿದೇಶ

ತೇಲುವ ಕೃತಕ ದ್ವೀಪ ನಿರ್ಮಿಸುತ್ತಿರುವ ಚೀನಾ: ಪರಮಾಣು ದಾಳಿಗೂ ಸೆಡ್ಡು! ಏನಿದರ ವಿಶೇಷತೆ?

ಪ್ರಮುಖ ಮುಖ್ಯಾಂಶಗಳು

  • 78,000 ಟನ್ ತೂಕದ ಕೃತಕ ದ್ವೀಪವನ್ನು ಚೀನಾದಿಂದ ವಿನ್ಯಾಸ
  • ಹೇಗಿದೆ ತೇಲುವ ದ್ವೀಪ?
ನವದೆಹಲಿ: ಪರಮಾಣು ಸ್ಫೋಟಗಳನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ 78,000 ಟನ್ ತೂಕದ ಕೃತಕ ದ್ವೀಪವನ್ನು ಚೀನಾ ದೇಶ ವಿನ್ಯಾಸಗೊಳಿಸುತ್ತಿದೆ ಎಂದು ಶನಿವಾರ(ನ.22) ವರದಿಯಾಗಿದೆ.
ಹೌದು, ಇದು ಮೊಬೈಲ್ ಸೆಮಿ-ಸಬ್‌ಮರ್ಸಿಬಲ್, ಟ್ವಿನ್-ಹಲ್ ಪ್ಲಾಟ್‌ಫಾರ್ಮ್ ಆಗಿದ್ದು, ಯಾವುದೇ ನವೀಕರಣಗಳ ಅಗತ್ಯವಿಲ್ಲದೆ ನಾಲ್ಕು ತಿಂಗಳವರೆಗೆ 238 ಜನರಿಗೆ ಆರಾಮವಾಗಿ ಸ್ಥಳಾವಕಾಶ ಕಲ್ಪಿಸಬಹುದು. ಇದರ ಮೂಲಸೌಕರ್ಯವು ಚೀನಾದ ಫ್ಯೂಜಿಯನ್ ವಿಮಾನವಾಹಕ ನೌಕೆಯಷ್ಟು ದೊಡ್ಡದಾಗಿದ್ದು, 2028 ರಲ್ಲಿ ಇದನ್ನು ನಿಯೋಜಿಸಲಾಗುವುದು. ಇದು 6-9 ಮೀಟರ್ ಅಲೆಗಳು ಮತ್ತು 17 ಬಿರುಗಾಳಿಗಳು (ಅತ್ಯಂತ ಶಕ್ತಿಶಾಲಿ ಉಷ್ಣವಲಯದ ಚಂಡಮಾರುತಗಳು) ಹಾಗೂ ಸಮುದ್ರ ಪ್ರಕ್ಷುಬ್ಧತೆಯನ್ನು ತಡೆದುಕೊಳ್ಳಬಲ್ಲದು. ಇದು ವಿಶ್ವದ ಮೊದಲ ತೇಲುವ ದ್ವೀಪವಾಗಲಿದೆ ಎಂದು ವರದಿ ಉಲ್ಲೇಖಿಸಿದೆ.

ಹೇಗಿದೆ ತೇಲುವ ದ್ವೀಪ?

ಈ ದ್ವೀಪವು 138 ಮೀಟರ್ ಉದ್ದ ಮತ್ತು 85 ಮೀಟರ್ ಅಗಲ (125 ಅಡಿ ಉದ್ದ ಮತ್ತು 279 ಅಡಿ ಅಗಲ) ಇರಲಿದ್ದು, ಮುಖ್ಯ ಡೆಕ್ ನೀರಿನ ರೇಖೆಯಿಂದ 45 ಮೀಟರ್ ಎತ್ತರದಲ್ಲಿ ಇರುತ್ತದೆ. ಇದರ ಸೂಪರ್‌ಸ್ಟ್ರಕ್ಚರ್ ತುರ್ತು ವಿದ್ಯುತ್, ಸಂವಹನ ಮತ್ತು ಸಂಚರಣೆ ನಿಯಂತ್ರಣವನ್ನು ಖಚಿತಪಡಿಸುವ ನಿರ್ಣಾಯಕ ವಿಭಾಗಗಳನ್ನು ಒಳಗೊಂಡಿದೆ. ಇದು "ಈ ಸ್ಥಳಗಳಿಗೆ ಪರಮಾಣು ಸ್ಫೋಟ ರಕ್ಷಣೆಯನ್ನು ಅತ್ಯಂತ ಮುಖ್ಯವಾಗಿದೆ" ಎಂದು ತಜ್ಞರ ತಂಡ ಹೇಳಿದೆ.
ಶಾಂಘೈ ಜಿಯಾವೊ ಟಾಂಗ್ ವಿಶ್ವವಿದ್ಯಾಲಯದ (SJTU) ಪ್ರಾಧ್ಯಾಪಕ ಯಾಂಗ್ ಡೆಕಿಂಗ್ ನೇತೃತ್ವದ ತಂಡದ ಪ್ರಕಾರ, "ಈ ಪ್ರಮುಖ ಆಳ ಸಮುದ್ರದ ವೈಜ್ಞಾನಿಕ ಸೌಲಭ್ಯವನ್ನು ಎಲ್ಲಾ ಹವಾಮಾನ, ದೀರ್ಘಕಾಲೀನ ವಾಸಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ದೂರದ ಸಮುದ್ರದಲ್ಲಿ ಮೊಬೈಲ್ ತೇಲುವ ದ್ವೀಪವಾಗಿದ್ದು, ಇದನ್ನು ಒಂದು ದಶಕದ ಸಂಶೋಧನೆ ಮತ್ತು ಯೋಜನೆಯ ನಂತರ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿನ್ಯಾಸ ಮತ್ತು ನಿರ್ಮಾಣವನ್ನು ಪೂರ್ಣಗೊಳಿಸಲು ನಾವು ತ್ವರಿತವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು 2028ರ ವೇಳೆಗೆ ಅದನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಗುರಿಯಾಗಿದೆ ಎಂದು ಯೋಜನೆಯನ್ನು ಮುನ್ನಡೆಸುತ್ತಿರುವ ಶಿಕ್ಷಣ ತಜ್ಞ ಲಿನ್ ಝೊಂಗ್ಕಿನ್ ತಿಳಿಸಿದ್ದಾರೆ(ಏಜೆನ್ಸೀಸ್​).