ಗ್ವಾಡೆಲೋಪ್: ಕ್ರಿಸ್‌ಮಸ್(Christmas) ಆಚರಣೆಗೆ ತಯಾರಿ ನಡೆಸುತ್ತಿದ್ದ ಜನಸಮೂಹದ ಮೇಲೆ ಚಾಲಕನೊಬ್ಬ ಏಕಾಏಕಿ ಕಾರು ಚಲಾಯಿಸಿದ ಹಿನ್ನೆಲೆ 10 ಜನರು ಮೃತಪಟ್ಟಿದ್ದಾರೆ. ಅಲ್ಲದೇ, 19ಕ್ಕೂ ಅಧಿಕ ಮಂದಿಗೆ ಗಾಯಗಳಾದ ಘಟನೆ ಗ್ವಾಡೆಲೋಪ್‌ನ ಸೇಂಟ್-ಆನ್‌ನಲ್ಲಿ ಶನಿವಾರ ನಡೆದಿದೆ.
ರೇಡಿಯೋ ಕ್ಯಾರೈಬ್ಸ್ ಇಂಟರ್ನ್ಯಾಷನಲ್ ಗ್ವಾಡೆಲೋಪ್ ವರದಿಯ ಪ್ರಕಾರ, ಮೂವರು ಗಾಯಗಳುಗಳ ಸ್ಥಿತಿ ಗಂಭೀರವಾಗಿದೆ. ಟೌನ್ ಹಾಲ್ ಮತ್ತು ಚರ್ಚ್ ಎದುರಿನ ಸ್ಕೋಲ್ಚರ್ ಸ್ಕ್ವೇರ್‌ನಲ್ಲಿ ಈ ದುರಂತ ಸಂಭವಿಸಿದೆ.
ಅಪಘಾತದ ಕಾರಣ ಪ್ರಸ್ತುತ ತಿಳಿದಿಲ್ಲ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ. ಆರ್‌ಸಿಐ ವರದಿಯಲ್ಲಿ ಉಲ್ಲೇಖಿಸಲಾದ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಾಲಕನಿಗೆ ತಲೆ ಸುತ್ತು ಅಥವಾ ವೈದ್ಯಕೀಯ ಆರೋಗ್ಯ ಸಮಸ್ಯೆ ಉಂಟಾಗಿರಬಹುದು ಎಂದು ಹೇಳಲಾಗಿದೆ. ಆದರೆ, ಈ ಯಾವ ಕಾರಣಕ್ಕೆ ಎಂದು ಇನ್ನೂ ದೃಢಪಡಿಸಲಾಗಿಲ್ಲ. ಚಾಲಕ ಸ್ಥಳದಲ್ಲೇ ಬಂಧಿಸಲಾಗಿದೆ.
ಜರ್ಮನಿಯಲ್ಲಿ ಇಂತಹ ಘಟನೆಯೇ ನಡೆದಿತ್ತು
ಕಳೆದ ವರ್ಷ ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಕ್ರಿಸ್‌ಮಸ್ ಹಬ್ಬಕ್ಕೆ ಕೆಲವೇ ದಿನಗಳ ಮೊದಲು ಕಾರವೊಂದು ಜನದಟ್ಟಣೆಯ ಹೊರಾಂಗಣ ಮಾರುಕಟ್ಟೆಗೆ ನುಗ್ಗಿದ ಪರಿಣಾಮ ಐದು ಜನರು ಮೃತಪಟ್ಟಿದ್ದು, 200 ಜನರು ಗಾಯಗೊಂಡಿದ್ದರು(ಏಜೆನ್ಸೀಸ್).