ಅಮೆರಿಕಾ: ( Donald Trump) ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೋ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರದಾನ ಮಾಡಿದ್ದಾರೆ. ಈ ಸುದ್ದಿ ಬೆನ್ನಲ್ಲೇ ಇದೀಗ ನೋಬೆಲ್ ಸಮಿತಿ ಈ ಪ್ರಶಸ್ತಿಯನ್ನು ಯಾರಿಗಾದ್ರೂ ವರ್ಗಾಯಿಸಬಹುದಾ ಎನ್ನುವ ಪ್ರಶ್ನೆಗೆ ಸ್ಪಷ್ಟನೆ ನೀಡಿದೆ.
ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025ರ ನೋಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ವೆನೆಜುವೆಲಾದಲ್ಲಿನ ಬಿಕ್ಕಟ್ಟಿನ ಸಮಯದಲ್ಲಿ ಅಮೆರಿಕ ನೀಡಿದ ಬೆಂಬಲಕ್ಕಾಗಿ ತಮ್ಮ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸುವುದಾಗಿ ಅಥವಾ ಅವರೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದರು. ನಿನ್ನೆ ವರದಿ ಪ್ರಕಾರ ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025ರ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಅವರು ಈ ಪ್ರಶಸ್ತಿಯನ್ನು ಟ್ರಂಪ್ಗೆ ಪ್ರದಾನ ಮಾಡಿದ್ದಾರೆ.
ನೋಬೆಲ್ ಸಮಿತಿಯ ನಿಯಮಗಳೇನು?
ಈ ವಿವಾದದ ಹಿನ್ನೆಲೆಯಲ್ಲಿ ನಾರ್ವೇಜಿಯನ್ ನೋಬೆಲ್ ಸಮಿತಿಯು ತನ್ನ ನಿಯಮಗಳನ್ನು ಸ್ಪಷ್ಟಪಡಿಸಿದೆ. ಪದಕವು ಮಾಲೀಕರನ್ನು ಬದಲಾಯಿಸಬಹುದು, ಆದರೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರ ಶೀರ್ಷಿಕೆಯು ಸಾಧ್ಯವಿಲ್ಲ.
ನೋಬೆಲ್ ಪ್ರಶಸ್ತಿಯನ್ನು ಒಮ್ಮೆ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಘೋಷಿಸಿದ ನಂತರ, ಅದನ್ನು ಬೇರೆಯವರಿಗೆ ವರ್ಗಾಯಿಸಲು ಅಥವಾ ಉಡುಗೊರೆಯಾಗಿ ನೀಡಲು ಬರುವುದಿಲ್ಲ. ಪ್ರಶಸ್ತಿಯನ್ನು ಘೋಷಿಸುವಾಗಲೇ ಸಮಿತಿಯು ಗರಿಷ್ಠ ಮೂವರು ವ್ಯಕ್ತಿಗಳ ನಡುವೆ ಹಂಚಿಕೆ ಮಾಡಬಹುದು. ಆದರೆ ಪ್ರಶಸ್ತಿ ವಿಜೇತರು ವೈಯಕ್ತಿಕವಾಗಿ ಅದನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ.
ನೋಬೆಲ್ ಪ್ರತಿಷ್ಠಾನದ ನಿಯಮಗಳ ಪ್ರಕಾರ, ಪ್ರಶಸ್ತಿ ನೀಡುವ ನಿರ್ಧಾರವು ಶಾಶ್ವತವಾಗಿದ್ದು, ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಪ್ರಶಸ್ತಿಯ ಜೊತೆಗೆ ನೀಡಲಾಗುವ ನಗದು ಬಹುಮಾನವನ್ನು (Prize Money) ವಿಜೇತರು ತಮ್ಮ ಇಚ್ಛೆಯಂತೆ ಯಾರಿಗಾದರೂ ನೀಡಬಹುದು ಅಥವಾ ದಾನ ಮಾಡಬಹುದು. ಆದರೆ 'ನೋಬೆಲ್ ಪ್ರಶಸ್ತಿ ವಿಜೇತ' ಎಂಬ ಅಧಿಕೃತ ಗೌರವ ಮತ್ತು ಪದಕವು ಮೂಲ ವಿಜೇತರಿಗೆ ಮಾತ್ರ ಸೀಮಿತವಾಗಿರುತ್ತದೆ.
ನೋಬೆಲ್ ಪ್ರಶಸ್ತಿಯು ಕೇವಲ ಒಂದು ಗೌರವ ಮಾತ್ರವಲ್ಲ, ಅದು ಸಮಿತಿಯ ನಿರ್ಧಾರಕ್ಕೆ ಬದ್ಧವಾದ ಶಾಸನಬದ್ಧ ಪ್ರಶಸ್ತಿ. ಆದ್ದರಿಂದ ಅದನ್ನು ಬೇರೆಯವರಿಗೆ ವರ್ಗಾಯಿಸಲು ಕಾನೂನುಬದ್ಧವಾಗಿ ಸಾಧ್ಯವಿಲ್ಲ.