ಉದ್ಯಮಿ ಅರ್ಸಿಯಾನ್ ಇಸ್ಮಾಯಿಲ್
ಕೌಲಲಾಂಪುರ: ಮಲೇಷಿಯಾದ ಉದ್ಯಮಿಯೊಬ್ಬರು ತಮ್ಮ 10ನೇ ವಯಸ್ಸಿನಲ್ಲಿ 1993ರಲ್ಲಿ 300 ರೂ.ಗೆ ಖರೀದಿಸಿದ್ದ ಗೂಗಲ್ನಲ್ಲಿ ಸುಲಭವಾಗಿ ಹುಡಕಲು ಸಹಾಯ ಮಾಡುವಂತಹ AI.com ಡೊಮೇನ್ ಅನ್ನು 2025 ಎಪ್ರಿಲ್ನಲ್ಲಿ ಸುಮಾರು 634 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಮಲೇಷಿಯಾದ ಟೆಕ್ಕಿ ಮತ್ತು ಉದ್ಯಮಿ ಅರ್ಸಿಯಾನ್ ಇಸ್ಮಾಯಿಲ್, 1993ರಲ್ಲಿ ತನ್ನ ತಾಯಿಯ ಕ್ರೆಡಿಟ್ ಕಾರ್ಡ್ ಬಳಸಿ ಆಗ 300 ರೂಪಾಯಿಗೆ AI.Com ಡೊಮೆನ್ ಅನ್ನು ಖರೀಸಿದ್ದರು ಎನ್ನಲಾಗಿದೆ. ಆಗ ಈ ಕೃತಕ ಬುದ್ದಮತ್ತೆಯ ಯುಗ ಬರುತ್ತೆ ಎಂಬುದಬ್ನು ಅವರು ಊಹಿಸಿರಲಿಲ್ಲ. ಅವರ ಪ್ರಕಾರ ಇದನ್ನು ಖರೀದಿಸಿದ್ದು, ತಮ್ಮ ಹೆಸರಿನ ಮೊದಲ ಅಕ್ಷರಿಗಳಿಗೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಎನ್ನಲಾಗಿದೆ.
ಕಳೆದ ಮೂವತ್ತು ವರ್ಷಗಳಲ್ಲಿ AI.com ಅವರ ವೈಯಕ್ತಿಕ ಡೊಮೆನ್ ಆಗಿತ್ತು. ಆದರೆ ಇಂಟರ್ನೆಟ್ ಯುಗ ಆರಂಭವಾಗಿ ಕೃತಕ ಬುದ್ಧಿಮತ್ತೆ ಜಾಗತಿಕ ಉದ್ಯಮವಾಗಿ ಸ್ಫೋಟಗೊಂಡಂತೆ ಸದ್ದಿಲ್ಲದೆ ವಿಶ್ವದ ಅತ್ಯಂತ ಮೌಲ್ಯಯುತ ಡಿಜಿಟಲ್ ವಿಳಾಸಗಳಲ್ಲಿ ಒಂದಾಯಿತು. ಈ ಎರಡಕ್ಷರದ ಡೊಮೆನ್ಗಳು ಸಾಕಷ್ಟಿವೆ, ಆದರೆ AI.com ಹೆಚ್ಚು ಆಕರ್ಷೀಣಿಯವಾಗಿದೆ.
2025 ಎಪ್ರಿಲ್ನಲ್ಲಿ ಇಸ್ಮಾಯಿಲ್ ತಮ್ಮ ಡೊಮೆನ್ ಅನ್ನು Crypto.com ಸಿಇಒ ಕ್ರಿಸ್ ಮಾರ್ಜಲೆಕ್ ಅವರಿಗೆ $70 ಮಿಲಿಯನ್ (ಸುಮಾರು ರೂ. 634 ಕೋಟಿ) ಗೆ ಮಾರಾಟ ಮಾಡಿದ್ದಾರೆ. ಈ ಒಪ್ಪಂದದ ಖರೀದಿಯೂ ಪ್ಟೋಕರೆನ್ಸಿಯಲ್ಲಿ ಪೂರ್ಣಗೊಂಡಿದೆ. ಇದು ಇತಿಹಾಸದಲ್ಲೇ ಅತಿ ಹೆಚ್ಚಿನ ಮೌಲ್ಯಕ್ಕೆ ಮಾರಾಟವಾದ ಡೊಮೆನ್ ಎಂದು ವರದಿಗಳು ಉಲ್ಲೇಖಿಸಿವೆ.
ಈ ಕುರಿತು ಮಾಹಿತಿ ನೀಡಿರುವ Crypto.com ಸಿಇಒ ಕ್ರಿಸ್ ಮಾರ್ಜಲೆಕ್, ತೀವ್ರಗೊಳ್ಳುತ್ತಿರುವ AI ಓಟದಲ್ಲಿ ತನ್ನ ಕಂಪನಿಯು ಸರಕಾಗಿ ಉಳಿಯದಂತೆ ನೋಡಿಕೊಳ್ಳಲು AI.com ನಂತಹ ಹೆಸರನ್ನು ಪಡೆದುಕೊಳ್ಳುವುದು ನಿರ್ಣಾಯಕವಾಗಿತ್ತು ಎಂದು ಹೇಳಿದ್ದಾರೆ (ಏಜೆನ್ಸೀಸ್).