ಧಗಧಗನೆ ಹೊತ್ತಿ ಉರಿದ ಕಟ್ಟಡಗಳು 
ವಿದೇಶ

ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದ ಕಟ್ಟಡಗಳು: 13 ಜನರ ಸಾವು, ಹಲವರು ಸಿಲುಕಿರುವ ಶಂಕೆ!

ಹಾಂಗ್​ಕಾಂಗ್: ಹಾಂಗ್​ಕಾಂಗ್​ನ ನ್ಯೂ ಟೆರಿಟರಿಸ್‌ನ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯೊಂದರಲ್ಲಿ ಬುಧವಾರ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 13 ಜನರು ಬೆಂಕಿ ಕೆನ್ನಾಲಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಸ್ಥಳದಲ್ಲೇ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಾದ ಇತರ ನಾಲ್ವರು ಕೂಡ ಅಸುನಿಗಿದ್ದಾರೆ. ಕನಿಷ್ಠ 15ಕ್ಕೂ ಅಧಿಕ ಜನರು ಗಂಭೀರ ಗಾಯಗೊಂಡಿದ್ದು, ಸುಮಾರು 700 ಜನರನ್ನು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡಗಳ ಅವಶೇಷಗಳಡಿಯಲ್ಲಿ ಅನೇಕ ಜನರು ಸಿಲುಕಿರುವ ಬಗ್ಗೆ ಹಲವು ವರದಿಗಳು ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಯಾವುದೇ ವಿವರಗಳು ಬಹಿರಂಗಗೊಳಿಸಿಲ್ಲ.
ಧಗಧಗನೇ ಉರಿದ ಕಟ್ಟಡಗಳು
ವಸತಿ ಸಂಕೀರ್ಣದ ಹೊರಭಾಗದಲ್ಲಿ ಸ್ಥಾಪಿಸಲಾದ ಬಿದಿರಿನ ಸ್ಕ್ಯಾಫೋಲ್ಡಿಂಗ್ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಕಟ್ಟಡದ ಇತರ ಭಾಗಗಳಿಗೆ ಅವರಿಸಿಕೊಂಡಿದೆ. ವಸತಿ ಸಂಕೀರ್ಣವು ಎಂಟು ಬ್ಲಾಕ್‌ಗಳನ್ನು ಹೊಂದಿದ್ದು, ಸುಮಾರು 2,000 ಅಪಾರ್ಟ್‌ಮೆಂಟ್‌ಗಳು ಇದ್ದು, ಅಂದಾಜು 4,800 ಜನರನ್ನು ವಾಸವಿದ್ದರು ಎಂದು ವರದಿ ಉಲ್ಲೇಖಿಸಿದೆ(ಏಜೆನ್ಸೀಸ್​).