Prince Andrew Arrested  
ವಿದೇಶ

ಬ್ರಿಟನ್ ರಾಜಮನೆತನಕ್ಕೆ ಜನ್ಮದಿನದ ಆಘಾತ: 66ನೇ ಹುಟ್ಟುಹಬ್ಬದಂದೇ ಪ್ರಿನ್ಸ್ ಆಂಡ್ರ್ಯೂ ಬಂಧನ! | Prince Andrew

ಲಂಡನ್: ದೀರ್ಘಕಾಲದ ಜೆಫ್ರಿ ಎಪ್ಸ್ಟೀನ್ ಹಗರಣಕ್ಕೆಸಂಬಂಧಿಸಿದಂತೆ ಕಿಂಗ್ ಚಾರ್ಲ್ಸ್ ಅವರ ಕಿರಿಯ ಸಹೋದರ ಆಂಡ್ರ್ಯೂ(Prince Andrew) ಮೌಂಟ್‌ಬ್ಯಾಟನ್-ವಿಂಡ್ಸರ್ಅವರನ್ನು ಸಾರ್ವಜನಿಕ ಕಚೇರಿಯಲ್ಲಿನ ದುರ್ವರ್ತನೆ (Misconduct in public office) ಆರೋಪದ ಮೇಲೆಗುರುವಾರ ಬಂಧಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಪೂರ್ವ ಇಂಗ್ಲೆಂಡ್‌ನನಾರ್ಫೋಕ್ ಕೌಂಟಿಯಲ್ಲಿರುವ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ನ 'ವುಡ್ ಫಾರ್ಮ್' ನಿವಾಸಕ್ಕೆ ಗುರುವಾರಬೆಳಿಗ್ಗೆ ಆರು ಪೊಲೀಸ್ ವಾಹನಗಳಲ್ಲಿ ಎಂಟು ಮಂದಿ ನಾಗರಿಕ(ಸಿವಿಲ್) ಉಡುಪಿನಲ್ಲಿದ್ದ ಅಧಿಕಾರಿಗಳುಆಗಮಿಸಿದರು. ಅನಿರೀಕ್ಷಿತವಾಗಿ ದಾಳಿ ನಡೆಸಿದ ಪೊಲೀಸರು ಆಂಡ್ರ್ಯೂ ಅವರನ್ನು ವಶಕ್ಕೆ ಪಡೆದರು.

ಪೊಲೀಸರ ಅಧಿಕೃತಹೇಳಿಕೆ

ಥೇಮ್ಸ್ ವ್ಯಾಲಿಪೊಲೀಸರು ಈ ಬಂಧನವನ್ನು ಖಚಿತಪಡಿಸಿದ್ದಾರೆ. "ತನಿಖೆಯ ಭಾಗವಾಗಿ ನಾವು ಇಂದು (19/2) ನಾರ್ಫೋಕ್‌ನ60 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದೇವೆ. ಬರ್ಕ್‌ಶೈರ್ ಮತ್ತು ನಾರ್ಫೋಕ್‌ನ ಹಲವು ವಿಳಾಸಗಳಲ್ಲಿಶೋಧ ಕಾರ್ಯ ನಡೆಸಲಾಗುತ್ತಿದೆ. ಬಂಧಿತ ವ್ಯಕ್ತಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ," ಎಂದುತಿಳಿಸಿದ್ದಾರೆ. ತನಿಖೆಯ ಹಿತದೃಷ್ಟಿಯಿಂದ ಅವರು ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಗಂಭೀರ ಆರೋಪಗಳೇನು?

ಗೌಪ್ಯ ದಾಖಲೆಗಳಸೋರಿಕೆ: ಲೈಂಗಿಕ ಅಪರಾಧಿದಿವಂಗತ ಜೆಫ್ರಿ ಎಪ್ಸ್ಟೀನ್‌ಗೆ ಬ್ರಿಟನ್ ಸರ್ಕಾರದ ಅತ್ಯಂತ ಗೌಪ್ಯ ದಾಖಲೆಗಳನ್ನು ಆಂಡ್ರ್ಯೂ ಹಸ್ತಾಂತರಿಸಿದ್ದರುಎಂಬ ಗಂಭೀರ ಆರೋಪದ ಮೇಲೆ ತನಿಖೆ ನಡೆಯುತ್ತಿದೆ.

ಯುಎಸ್ ಸರ್ಕಾರದಫೈಲ್‌ಗಳು: ಇತ್ತೀಚೆಗೆಅಮೆರಿಕ ಸರ್ಕಾರ ಬಿಡುಗಡೆ ಮಾಡಿದ ಕಡತಗಳಲ್ಲಿ ಆಂಡ್ರ್ಯೂ ಮತ್ತು ಎಪ್ಸ್ಟೀನ್ ನಡುವಿನ ನಂಟಿನ ಬಗ್ಗೆಸ್ಫೋಟಕ ಮಾಹಿತಿ ಹೊರಬಿದ್ದಿತ್ತು. ಇದುವೇ ಈಗ ಅವರ ಬಂಧನಕ್ಕೆ ಪ್ರಮುಖ ಕಾರಣವಾಗಿದೆ.

ರಾಜಮನೆತನಕ್ಕೆಭಾರಿ ಮುಜುಗರ:

ರಾಣಿ ಎಲಿಜಬೆತ್II ಅವರ ಎರಡನೇ ಪುತ್ರರಾಗಿರುವ ಆಂಡ್ರ್ಯೂ, ಈ ಹಿಂದಿನಿಂದಲೂ ಎಪ್ಸ್ಟೀನ್ ಜೊತೆಗಿನ ಸ್ನೇಹದ ಬಗ್ಗೆವಿಷಾದ ವ್ಯಕ್ತಪಡಿಸಿದ್ದರಾದರೂ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸುತ್ತಾ ಬಂದಿದ್ದರು. ಆದರೆ ಜನ್ಮದಿನದಂದೇನಡೆದಿರುವ ಈ ಬಂಧನವು ಬ್ರಿಟನ್ ರಾಜಮನೆತನದ ಇತಿಹಾಸದಲ್ಲೇ ಅತ್ಯಂತ ಗಂಭೀರ ಕಾನೂನು ಸವಾಲಾಗಿ ಪರಿಣಮಿಸಿದೆ.ಸದ್ಯಕ್ಕೆ ಬಕಿಂಗ್‌ಹ್ಯಾಮ್ ಅರಮನೆಯು ಈ ಕುರಿತು ಯಾವುದೇ ಮೌನ ಮುರಿದಿಲ್ಲ,(ಏಜೆನ್ಸೀಸ್‌).