Bomb blast 
ವಿದೇಶ

ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಸಾವು, 20 ಮಂದಿಗೆ ಗಾಯ | Bomb blast

Bomb blast: ಸಿರಿಯಾದ ಹೋಮ್ಸ್​ ನಗರದ ಅಲಾವೈಟ್ ಮಸೀದಿಯಲ್ಲಿ ಇಂದು(ಡಿ. 26) ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಮಾಮ್ ಅಲಿ ಬಿನ್ ಅಬಿ ತಾಲಿಬ್ ಮಸೀದಿಯೊಳಗೆ ಮಧ್ಯಾಹ್ನದ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಭದ್ರತಾ ಪಡೆಗಳು ಆ ಪ್ರದೇಶವನ್ನು ತ್ವರಿತವಾಗಿ ಸುತ್ತುವರೆದವು ಎನ್ನಲಾಗಿದೆ.
ಸಿರಿಯಾ ಆರೋಗ್ಯ ಇಲಾಖೆಯ ಪ್ರಾಥಮಿಕ ಮಾಹಿತಿ ಪ್ರಕಾರ, ಶುಕ್ರವಾರ ಪ್ರಾರ್ಥನೆ ವೇಳೆ ಮಸೀದಿಯನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಸ್ಫೋಟ ನಡೆದಿದೆ. ಘಟನೆಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಈ ಕ್ರಿಮಿನಲ್ ಕೃತ್ಯದ ಅಪರಾಧಿಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ, ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದೆ.
ಇನ್ನೂ ಭದ್ರತಾ ಪಡೆಯ ಮಾಹಿತಿ ಆಧಾರಿಸಿದ, ಆರಂಭಿಕ ತನಿಖೆಗಳು ಮಸೀದಿಯೊಳಗೆ ಇರಿಸಲಾಗಿದ್ದ ಸ್ಫೋಟಕ ಸಾಧನಗಳಿಂದ ಸ್ಫೋಟ ಸಂಭವಿಸಿದೆ ಎಂದು ಸೂಚಿಸುತ್ತದೆ ಸನಾ ವರದಿ ಮಾಡಿದೆ. ಸಿರಿಯಾದ ಅಂತರ್ಯುದ್ಧದ ಸಮಯದಲ್ಲಿ ಹೋಮ್ಸ್ ಭಾರೀ ಜನಾಂಗೀಯ ಹಿಂಸಾಚಾರದ ತಾಣವಾಗಿತ್ತು (ಏಜೆನ್ಸೀಸ್).