Tariq Rahman 
ವಿದೇಶ

17 ವರ್ಷಗಳ ಬಳಿಕ ಬಾಂಗ್ಲಾಕ್ಕೆ ಬಿಎನ್‌ಪಿ ನಾಯಕನ ಆಗಮನ; ಢಾಕಾಕ್ಕೆ ಬಂದಿಳಿದ ತಾರಿಕ್ ರೆಹಮಾನ್ | Tariq Rahman

ಢಾಕಾ: ಬಾಂಗ್ಲಾದೇಶದಿಂದ 17 ವರ್ಷಗಳ ಕಾಲ ಗಡಿಪಾರು ಆಗಿದ್ದ ಬಾಂಗ್ಲಾದ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್(Tariq Rahman) ಢಾಕಾಗೆ ಗುರುವಾರ (ಡಿ.25) ಬಂದಿಳಿದಿದ್ದಾರೆ. ಅಲ್ಲದೆ, ರೆಹಮಾನ್​ರನ್ನು ಸ್ವಾಗತಿಸಲು ಸಾವಿರಾರು ಜನ ವಿಮಾನ ನಿಲ್ದಾಣದ ಬಳಿ ನೆರೆದಿದ್ದರು.
ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯಾದ ಮಾಜಿ ಪ್ರಧಾನಿ ಖಲೀದಾ ಜಿಯಾರನ್ನು ನೋಡಲು 17 ವರ್ಷಗಳ ಬಳಿಕ ಯುನೈಟೆಡ್ ಕಿಂಗ್‌ಡಮ್‌ನಿಂದ ಬಾಂಗ್ಲಾಕ್ಕೆ ಮರಳಿದ್ದಾರೆ. ಅಲ್ಲದೆ, ತಾರಿಕ್ ಬಿಎನ್‌ಪಿ ಹಂಗಾಮಿ ಅಧ್ಯಕ್ಷರಾಗಿದ್ದು, 2026ರ ಫೆಬ್ರವರಿಯಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
ಯುಕೆಯಿಂದ ಪತ್ನಿ ಜುಬೈದಾ ರೆಹಮಾನ್ ಮತ್ತು ಮಗಳು ಜೈಮಾ ರೆಹಮಾನ್​ರೊಂದಿಗೆ ಹಿಂದಿರುಗಿದ ರೆಹಮಾನ್​ರನ್ನು ಸ್ವಾಗತಿಸಲು ಬಿಎನ್‌ಪಿ ಬೆಂಬಲಿಗರು ಮತ್ತು ಪಕ್ಷದ ಮುಖಂಡರು ಬನಾನಿ ವಿಮಾನ ನಿಲ್ದಾಣ ರಸ್ತೆಯಿಂದ ಢಾಕಾ ವಿಮಾನ ನಿಲ್ದಾಣದ ಕಡೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿದರು.
ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ತಾರಿಕ್​ರನ್ನು ಬಿಎನ್‌ಪಿ ಸ್ಥಾಯಿ ಸಮಿತಿ ಸದಸ್ಯರು ಬರಮಾಡಿಕೊಂಡರು ಮತ್ತು ಅಲ್ಲಿಂದ ಬೂಲೆಟ್​ಫ್ರೂಫ್​ ವಾಹನಗಳಲ್ಲಿ ಒಂದರಲ್ಲಿ ಪುರ್ಬಾಚಲ್‌ನ 300 ಅಡಿ ಪ್ರದೇಶದಲ್ಲಿ ಸ್ವಾಗತ ಸಮಾರಂಭಕ್ಕೆ ಪ್ರಯಾಣ ಬೆಳೆಸಿದ್ದರು. ಅಲ್ಲದೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಾರಿಕ್​ರನ್ನು ಸ್ವಾಗತಿಸಲು ಬದಿಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ.
ಸ್ವಾಗತ ಸಮಾರಂಭದಲ್ಲಿ ಭಾಗಿಯಾಗಲಿದ್ದು, ರೆಹಮಾನ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 50 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ತಮ್ಮ ಭಾಷಣದ ನಂತರ, ರೆಹಮಾನ್ ಅವರು ಎವರ್‌ಕೇರ್ ಆಸ್ಪತ್ರೆಗೆ ತೆರಳಿ ತಮ್ಮ ಅನಾರೋಗ್ಯ ಪೀಡಿತ ತಾಯಿ ಮಾಜಿ ಪ್ರಧಾನಿ ಜಿಯಾರನ್ನು ಭೇಟಿ ಮಾಡಲಿದ್ದಾರೆ.
ಜಿಯಾ ಕುಟುಂಬದ ಪರಮ ವೈರಿಯಾಗಿದ್ದ, ದೀರ್ಘಕಾಲದ ಪ್ರಧಾನಿ ಶೇಖ್ ಹಸೀನಾರನ್ನು ಕಳೆದ ವರ್ಷ ವಿದ್ಯಾರ್ಥಿ ನೇತೃತ್ವದ ದಂಗೆಯಲ್ಲಿ ಪದಚ್ಯುತಗೊಳಿಸಿದ ನಂತರ, ಬಿಎನ್‌ಪಿ ಪಕ್ಷವು ಉತ್ಕರ್ಷದ ಹಾದಿಯಲ್ಲಿರುವಾಗ ರೆಹಮಾನ್ ಲಂಡನ್‌ನಿಂದ ಹಿಂತಿರುಗಿದ್ದಾರೆ. ಸಂಕ್ಷಿಪ್ತ ಪರಿವರ್ತನೆಯ ಆಡಳಿತಗಳನ್ನು ಹೊರತುಪಡಿಸಿ, ಖಲೀದಾ ಜಿಯಾ ಮತ್ತು ಶೇಖ್ ಹಸೀನಾ 1991 ರಿಂದ ಪರ್ಯಾಯವಾಗಿ ಅಧಿಕಾರದಲ್ಲಿದ್ದಾರೆ.
ಅಮೆರಿಕ ಮೂಲದ ಇಂಟರ್ನ್ಯಾಷನಲ್ ರಿಪಬ್ಲಿಕನ್ ಇನ್ಸ್ಟಿಟ್ಯೂಟ್ ಡಿಸೆಂಬರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಬಿಎನ್‌ಪಿ ಅತಿ ಹೆಚ್ಚು ಸಂಸದೀಯ ಸ್ಥಾನಗಳನ್ನು ಗೆಲ್ಲುವ ಖಚಿತ ಎಂದು ಹೇಳುತ್ತಿದೆ. ಇಸ್ಲಾಮಿಸ್ಟ್ ಜಮಾತ್-ಇ-ಇಸ್ಲಾಮಿ ಪಕ್ಷವೂ ಸ್ಪರ್ಧೆಯಲ್ಲಿದೆ,(ಏಜೆನ್ಸೀಸ್).