Pakistan Air Strike on Afghanistan
- ಅಫ್ಘಾನಿಸ್ತಾನದ ಕಾಬೂಲ್, ಕಂದಹಾರ್ ಮೇಲೆ ವಾಯುದಾಳಿ ನಡೆಸಿದ ಪಾಕಿಸ್ತಾನ
- ರಂಜಾನ್ ವೇಳೆ ನಡೆದ ಈ ದಾಳಿಗೆ ತಾಲಿಬಾನ್ ಆಕ್ರೋಶ
- ಪ್ರತೀಕಾರದ ಎಚ್ಚರಿಕೆ ನೀಡಿದ ಅಫ್ಘಾನ್ ಸರ್ಕಾರ
ಕಾಬೂಲ್: ಒಂದು ಕಡೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದ್ದಿದ್ದರೆ, ಇನ್ನೊಂದು ಕಡೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವಿನ ಸಂಘರ್ಷ ತಾರಕಕ್ಕೇರುತ್ತಿದ್ದೆ.
ಪಾಕಿಸ್ತಾನವು ಅಫ್ಘಾನಿಸ್ತಾನದ ಕಾಬೂಲ್, ಕಂದಹಾರ್, ಪಕ್ತಿಯಾ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ (Pakistan Air Strike on Afghanistan) ಯನ್ನು ನಡೆಸಿದ್ದು, ಇದರಲ್ಲಿ ತಾಲಿಬಾನಿಗಳ ಮನೆ, ಮಕ್ಕಳು ಮತ್ತು ಮಹಿಳೆಯರು ಸಾವನ್ನಪ್ಪಿದ್ದಾರೆಂದು ಅಫ್ಘಾನಿಸ್ತಾನ ಸರ್ಕಾರ ಆರೋಪಿಸಿದೆ.
ಕಂದಹಾರ್ ವಿಮಾನ ನಿಲ್ದಾಣದ ಮೇಲೆ ಸಹ ಪಾಕಿಸ್ತಾನ ಬಾಂಬ್ ದಾಳಿ ಮಾಡಿದೆ ಎಂದು ತಾಲಿಬಾನಿಗಳು ಆರೋಪಿಸಿದ್ದಾರೆ. ರಂಜಾನ್ನ ಕೊನೆಯ ಹತ್ತು ದಿನ ಇರುವಾಗ ಪಾಕಿಸ್ತಾನ ಈ ರೀತಿ ದಾಳಿ ಮಾಡಿರುವುದು ಖಂಡನೀಯವಾಗಿದ್ದು, ನಾವು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದೆವೆ ಎಂದು ಇಸ್ಲಾಮಿಕ್ ಎಮರೇಟ್ಸ್ ಆಫ್ ಅಫ್ಘಾನಿಸ್ತಾನ ತಿಳಿಸಿದೆ.
ಇಬ್ಬರ ನಡುವೆ ನಿರಂತರ ಸಂಘರ್ಷ
ಸಂಘರ್ಷವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಿದ್ದರು ಪಾಕಿಸ್ತಾನ ಈ ರೀತಿ ದಾಳಿ ನಡೆಸಿರುವುದು ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮತ್ತೆ ಉಲ್ಬಣವಾಗಲು ಕಾರಣವಾಗಲಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದರು.
ಕಳೆದ ತಿಂಗಳು ಪಾಕಿಸ್ತಾನವು ಅಫ್ಘಾನಿಸ್ತಾನದೊಳಗೆ ವಾಯುದಾಳಿ ನಡೆಸಿದಾಗ ಭುಗಿಲೆದ್ದ ಹೋರಾಟದ ನಂತರ ಇತ್ತೀಚಿನ ಹಿಂಸಾಚಾರ ಸಂಭವಿಸಿದೆ, ಇದನ್ನು ಇಸ್ಲಾಮಾಬಾದ್ ಉಗ್ರರ ಪ್ರಬಲ ನೆಲೆಗಳನ್ನು ಗುರಿಯಾಗಿರಿಸಿಕೊಂಡಿದೆ ಎಂದು ಹೇಳಲಾಗಿದೆ. ಕಾಬೂಲ್ ಈ ಕಾರ್ಯಾಚರಣೆಗಳನ್ನು ತನ್ನ ಸಾರ್ವಭೌಮತ್ವದ ಉಲ್ಲಂಘನೆ ಎಂದು ಖಂಡಿಸಿತು ಮತ್ತು ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿತು.
ಭಯೋತ್ಪಾದನೆಗೂ ನಮಗೂ ಸಂಬಂಧವಿಲ್ಲ: ಅಫ್ಘಾನಿಸ್ತಾನ
ಉಗ್ರಗಾಮಿತ್ವವು ಎರಡೂ ದೇಶಗಳ ನಡುವಿನ ಪ್ರಮುಖ ವಿವಾದದ ಅಂಶವಾಗಿ ಉಳಿದಿದ್ದು, ಪಾಕಿಸ್ತಾನದೊಳಗಿನ ದಾಳಿಗಳಿಗೆ ಕಾರಣರಾದ ಉಗ್ರಗಾಮಿಗಳಿಗೆ ಕಾಬೂಲ್ ಸುರಕ್ಷಿತ ಆಶ್ರಯವನ್ನು ಒದಗಿಸುತ್ತಿದೆ ಎಂದು ಇಸ್ಲಾಮಾಬಾದ್ ಆರೋಪಿಸುತ್ತದೆ. ಆದರೆ ತಾಲಿಬಾನ್ ಆರೋಪವನ್ನು ನಿರಾಕರಿಸುತ್ತದೆ ಮತ್ತು ಉಗ್ರಗಾಮಿತ್ವವು ಪಾಕಿಸ್ತಾನದ ಆಂತರಿಕ ಸಮಸ್ಯೆಯಾಗಿದೆ ಎಂದು ಹೇಳುತ್ತಿದೆ.
ಈ ಸಾವುಗಳು ಮಂಗಳವಾರದಿಂದ ಅಫ್ಘಾನಿಸ್ತಾನದಲ್ಲಿ ಗಡಿಯಾಚೆಗಿನ ಘರ್ಷಣೆಗಳಲ್ಲಿ ಏಳು ಜನರನ್ನು ಕೊಂದ ವರದಿಯಾಗಿದೆ ಎಂದು ಕಾಬೂಲ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು, ಪಕ್ತಿಯಾ ಗಡಿ ಪ್ರಾಂತ್ಯದಲ್ಲಿ ಪಾಕಿಸ್ತಾನದ ಶೆಲ್ ದಾಳಿಯಿಂದ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು,(ಏಜನ್ಸೀಸ್).