Bill Gates 
ವಿದೇಶ

ರಷ್ಯಾ ಬೆಡಗಿಯರ ಸಂಬಂಧದಿಂದ ಲೈಂಗಿಕವಾಗಿ ಹರಡುವ ರೋಗಕ್ಕೆ ತುತ್ತಾಗಿದ್ದರೇ ಬಿಲ್ ಗೇಟ್ಸ್? ಎಪ್ಸ್ಟೀನ್ ಕಡತಗಳಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!..Bill Gates

ನ್ಯೂಯಾರ್ಕ್: ( Bill Gates) ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸುತ್ತಲಿನ ವಿವಾದಗಳ ಸರಣಿ ಮುಂದುವರಿದಿದೆ. ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದ ಹೊಸ ನ್ಯಾಯಾಲಯದ ದಾಖಲೆಗಳು ಬಿಡುಗಡೆಯಾಗಿದ್ದು, ಅದರಲ್ಲಿ ಬಿಲ್ ಗೇಟ್ಸ್ ಕುರಿತು ಅತ್ಯಂತ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದೆ.
ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ(Trump - Bill Gates in Epstein files) ಸಂಬಂಧಿಸಿದ 35 ಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಸಾರ್ವಜನಿಕಗೊಳಿಸಿದೆ. ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಈ ವರದಿಗಳ ಪ್ರಕಾರ, 2013 ರಲ್ಲಿ ಎಪ್ಸ್ಟೀನ್ ಸ್ವತಃ ಬರೆದ ಇಮೇಲ್‌ಗಳಲ್ಲಿ, ಬಿಲ್ ಗೇಟ್ಸ್ ಅವರು ರಷ್ಯಾದ ಯುವತಿಯರೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು ಮತ್ತು ಈ ಕಾರಣದಿಂದಾಗಿ ಅವರಿಗೆ ಲೈಂಗಿಕವಾಗಿ ಹರಡುವ ರೋಗ (STD) ತಗುಲಿತ್ತು. ಈ ರೋಗದ ವಿಷಯವನ್ನು ತಮ್ಮ ಅಂದಿನ ಪತ್ನಿ ಮೆಲಿಂಡಾ ಅವರಿಂದ ಮುಚ್ಚಿಡಲು ಬಿಲ್ ಗೇಟ್ಸ್ ಪ್ರಯತ್ನಿಸಿದ್ದರು ಎಂಬ ಸಂಚಲನಕಾರಿ ವಿಷಯ ವರದಿಯಾಗಿದೆ.
ಬಿಲ್ ಗೇಟ್ಸ್ ರಷ್ಯಾದ ಬ್ರಿಡ್ಜ್ ಆಟಗಾರ್ತಿ ಮಿಲಾ ಅಂಟೋನೋವಾ ಸೇರಿದಂತೆ ಹಲವು ರಷ್ಯಾದ ಯುವತಿಯರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಎಪ್ಸ್ಟೀನ್ ಹೇಳಿಕೊಂಡಿದ್ದಾಗಿ ದಾಖಲೆಗಳು ತಿಳಿಸಿವೆ. ಗೇಟ್ಸ್ ಅವರ ಈ ರಹಸ್ಯಗಳನ್ನು ಬಳಸಿಕೊಂಡು ಎಪ್ಸ್ಟೀನ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಮತ್ತು ಹಣಕಾಸಿನ ಲಾಭ ಪಡೆಯಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಮೆಲಿಂಡಾ ಮತ್ತು ಬಿಲ್ ಗೇಟ್ಸ್ ಅವರ ವಿಚ್ಛೇದನಕ್ಕೆ ಈ ಎಪ್ಸ್ಟೀನ್ ಜೊತೆಗಿನ ಸ್ನೇಹ ಮತ್ತು ಇಂತಹ ಅಕ್ರಮ ಸಂಬಂಧಗಳೇ ಮುಖ್ಯ ಕಾರಣ ಎಂಬ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಆರೋಪಗಳನ್ನು ಬಿಲ್ ಗೇಟ್ಸ್ ಅವರ ಪ್ರತಿನಿಧಿಗಳು ತೀವ್ರವಾಗಿ ಖಂಡಿಸಿದ್ದಾರೆ. ಎಪ್ಸ್ಟೀನ್ ಒಬ್ಬ ಅಪರಾಧಿಯಾಗಿದ್ದು, ತನ್ನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಕ್ಕಾಗಿ ಬಿಲ್ ಗೇಟ್ಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಇಂತಹ ಅರ್ಥಹೀನ ಕಟ್ಟುಕಥೆಗಳನ್ನು ಹೆಣೆದಿದ್ದಾರೆ ಎಂದು ಅವರು ತಳ್ಳಿಹಾಕಿದ್ದಾರೆ.
ಈ ಹಿಂದೆ ಕೂಡ ರಷ್ಯಾದ ಬ್ರಿಡ್ಜ್ ಆಟಗಾರ್ತಿಯೊಬ್ಬರ ಜೊತೆಗಿನ ಸಂಬಂಧವನ್ನು ಮುಂದಿಟ್ಟುಕೊಂಡು ಎಪ್ಸ್ಟೀನ್ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದರು ಎಂಬ ವರದಿಗಳು ಬಂದಿದ್ದವು. ಆದರೆ, ಗೇಟ್ಸ್ ಪರವಾಗಿರುವವರು ಮಾತ್ರ ತಾವು ಎಪ್ಸ್ಟೀನ್ ಅವರನ್ನು ಕೇವಲ ವ್ಯವಹಾರಿಕ ಮಾತುಕತೆಗಳಿಗಾಗಿ ಭೇಟಿಯಾಗಿದ್ದೆವು ಮತ್ತು ಅವರ ನಡುವೆ ಯಾವುದೇ ಅನೈತಿಕ ಸಂಬಂಧ ಇರಲಿಲ್ಲ ಎಂದು ವಾದಿಸುತ್ತಾ ಬಂದಿದ್ದಾರೆ. ಆದರೂ ಸಹ, ಈ ರಹಸ್ಯ ದಾಖಲೆಗಳ ಬಿಡುಗಡೆಯು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಈ ವಿವಾದವು ಬಿಲ್ ಗೇಟ್ಸ್ ಅವರ ವೈಯಕ್ತಿಕ ಜೀವನದ ಮೇಲೂ ತೀವ್ರ ಪರಿಣಾಮ ಬೀರಿದೆ. 2021 ರಲ್ಲಿ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ವಿಚ್ಛೇದನ ಪಡೆದಾಗ, ಗೇಟ್ಸ್ ಎಪ್ಸ್ಟೀನ್ ಜೊತೆ ಹೊಂದಿದ್ದ ನಿಕಟತೆಯ ಬಗ್ಗೆ ಮೆಲಿಂಡಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚಿನ ಆರೋಪಗಳು ಅವರ ಹಿಂದಿನ ಹೇಳಿಕೆಗಳನ್ನು ಬಲಪಡಿಸುವಂತೆ ತೋರುತ್ತಿದೆ.
2019 ರಲ್ಲಿ ಲೈಂಗಿಕ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಂತರ ಜೈಲಿನಲ್ಲಿ ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವನ್ನಪ್ಪಿದ ಎಪ್ಸ್ಟೀನ್ ಸಾವಿನ ಸುತ್ತಲಿನ ರಹಸ್ಯಗಳು ಮತ್ತು ಈಗ ಬೆಳಕಿಗೆ ಬರುತ್ತಿರುವ ಆರೋಪಗಳು ಬಿಲ್ ಗೇಟ್ಸ್‌ನಂತಹ ಸೆಲೆಬ್ರಿಟಿಗಳ ಖ್ಯಾತಿಯನ್ನು ಪ್ರಶ್ನಿಸುತ್ತಿವೆ.