ಇಸ್ರೇಲ್ ಪ್ರಧಾನಿಯನ್ನು ನಾವು ಕೊಲ್ಲುತ್ತೇವೆ: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್
- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ
- ಇಸ್ರೇಲ್ ಪ್ರಧಾನಿಯನ್ನು ನಾವು ಕೊಲ್ಲುತ್ತೇವೆ: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್
- ಬೆಂಜಾಮಿನ ನೆತನ್ಯಾಹು ಬಲಿಯನ್ನು ನಾವು ಪಡೆಯುತ್ತೇವೆ
ಇರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಇನ್ನಷ್ಟು ಕತ್ತಲನ್ನು ಆವರಿಸುತ್ತಿದ್ದು, ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು (Benjamin Netanyahu) ನನ್ನು ಯಾವುದೇ ಕಾರಣಕ್ಕೂ ಜೀವಂತ ಉಳಿಸುವುದಿಲ್ಲ ಎಂದು ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಶಪಥ ಮಾಡಿದೆ.
ಕೆಲದಿನಳ ಹಿಂದೆ ಇಸ್ರೇಲ್ ಪ್ರಧಾನಿ, ಇರಾನಿನ ದಾಳಿಗೆ ಸಿಲುಕಿ ಮೃತ ಪಟ್ಟಿದ್ದಾರೆ ಎಂದು ಟೆಹ್ರಾನ್ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವದಂತಿಗಳನ್ನು ತಳ್ಳಿಹಾಕಿದ್ದ ಇಸ್ರೇಲ್ ತನ್ನ ಪ್ರಧಾನ ಮಂತ್ರಿಯ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಈ ವದಂತಿಗೆ ತಿಲಾಂಜಲಿ ಇಟ್ಟಿತ್ತು.
ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್, ಅವನೊಬ್ಬ ರಕ್ತ ಪಿಪಾಸು, ಸಾವಿರಾರು ಮಕ್ಕಳ ಬಲಿ ತೆಗೆದುಕೊಂಡ ಅವನನ್ನು ಜೀವ ಸಮೇತ ನಾವು ಉಳಿಸುವುದಿಲ್ಲ. ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿ ಇಸ್ರೇಲ್ ಪ್ರಧಾನ ಮಂತ್ರಿಯ ಬಲಿ ತೆಗೆದುಕೊಳ್ಳುತ್ತೇವೆ ಎಂದು IRGC ಹೇಳಿಕೆ ನೀಡಿದೆ.
ಎಐ ವಿಡಿಯೋ ಹರಿಬಿಟ್ಟ ನೆತನ್ಯಾಹು?
ಇಸ್ರೇಲ್ ಪ್ರಧಾನಿಯನ್ನು ನಾವು ಕೊಂದಿದ್ದೇವೆ ಎಂದು ಇರಾನ್ ಹೇಳಿದಾಗ, ಬೆಂಜಮಿನ್ ನೆತನ್ಯಾಹು ತಮ್ಮ ಎಕ್ಸ್(ಟ್ವಿಟರ್) ಖಾತೆಯಲ್ಲಿ ತಾವು ಜೀವಂತವಾಗಿದ್ದೇವೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ, ವಿಡಿಯೋವೊಂದನ್ನು ಹಂಚಿಕೊಂಡರು.
ಆದರೆ ಈ ವಿಡಿಯೋನಲ್ಲಿ ನೆತನ್ಯಾಹು ಅವರ ಕೈಯಲ್ಲಿ ಆರು ಬೆರಳು ಗಳಿರುವುದನ್ನು ನೋಡಿದ ಜನ ಈ ವಿಡಿಯೋ ಕೃತಕ ಬುದ್ಧಿಮತ್ತೆ ಬಳಸಿ ತಯಾರಸಿದ್ದು ಎಂದು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ಎಕ್ಸ್(ಟ್ವಿಟರ್)ನ ಚಾಟ್ಬಾಟ್ ಗ್ರೋಕ್ ಎಐ ಗೆ ಕೇಳಿದರೆ, ಈ ವಿಡಿಯೋ ಕೃತಕವಾಗಿ ನಿರ್ಮಿಸಿದ್ದಲ್ಲ, ಇದೊಂದು ಆಪ್ಟಿಕಲ್ ಇಲ್ಯೂಷನ್ ಎಂದು ಹೇಳಿದೆ,(ಏಜನ್ಸೀಸ್).