ಮಾಜಿ ಜನರಲ್ ಅಬ್ದುಲ್ಲಾಹಿಲ್ ಅಮಾನ್ ಅಜ್ಮಿ
- ಬಾಂಗ್ಲಾದೇಶ ಶಾಂತಿಗಾಗಿ ಭಾರತ ತುಂಡು ತುಂಡಾಗಬೇಕು
- ಬಾಂಗ್ಲಾದ ಮಾಜಿ ಜನರಲ್ ಅಬ್ದುಲ್ಲಾಹಿಲ್ ಅಮಾನ್ ಅಜ್ಮಿ ವಿವಾದ
ನವದೆಹಲಿ: ಭಾರತ ತುಂಡುಗಳಾಗಿ ಒಡೆಯದ ಹೊರತು ಬಾಂಗ್ಲಾದೇಶದಲ್ಲಿ ಸಂಪೂರ್ಣ ಶಾಂತಿ ನೆಲೆಸುವುದಿಲ್ಲ ಎಂದು ಬಾಂಗ್ಲಾದೇಶದ ಮಾಜಿ ಸೇನಾ ಜನರಲ್ ಮತ್ತು ಜಮಾತೆ-ಇ-ಇಸ್ಲಾಮಿಯ ಮಾಜಿ ಮುಖ್ಯಸ್ಥ ಗುಲಾಮ್ ಅಜಮ್ ಅವರ ಪುತ್ರ ಬ್ರಿಗೇಡಿಯರ್ ಜನರಲ್ (ನಿವೃತ್ತ) ಅಬ್ದುಲ್ಲಾಹಿಲ್ ಅಮಾನ್ ಅಜ್ಮಿ ಹೇಳಿದ್ದಾರೆ.
ಢಾಕಾದ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಜ್ಮಿ, ಭಾರತವು ತುಂಡುಗಳಾಗಿ ಒಡೆಯುವವರೆಗೆ ಬಾಂಗ್ಲಾದೇಶವು ಪೂರ್ಣ ಶಾಂತಿಯನ್ನು ಕಾಣುವುದಿಲ್ಲ. ಭಾರತವು ಬಾಂಗ್ಲಾ ದೇಶದೊಳಗೆ "ಯಾವಾಗಲೂ ಅಶಾಂತಿಯನ್ನು ಜೀವಂತವಾಗಿರಿಸುತ್ತದೆ" ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಭಾರತದ ಗಡಿಯಲ್ಲಿರುವ ಆಗ್ನೇಯ ಬಾಂಗ್ಲಾದೇಶದ ಚಿತ್ತಗಾಂಗ್ ಬೆಟ್ಟದ ಪ್ರದೇಶದಲ್ಲಿ 1975 ರಿಂದ 1996 ರವರೆಗೆ ಭಾರತವು ಅಶಾಂತಿಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.
"ಶೇಖ್ ಮುಜಿಬುರ್ ರೆಹಮಾನ್ ಸರ್ಕಾರದ ಅವಧಿಯಲ್ಲಿ, ಪರ್ಬತ್ಯ ಚಟ್ಟೋಗ್ರಾಮ್ ಜನ ಸಂಹತಿ ಸಮಿತಿ (ಪಿಸಿಜೆಎಸ್ಎಸ್) ರಚನೆಯಾಯಿತು. ಭಾರತ ಅವರಿಗೆ ಆಶ್ರಯ ನೀಡಿತು. ಶಸ್ತ್ರಾಸ್ತ್ರ ಮತ್ತು ತರಬೇತಿಯನ್ನು ನೀಡಿತು. ಇದು 1975 ರಿಂದ 1996 ರವರೆಗೆ ಬೆಟ್ಟಗಳಲ್ಲಿ ರಕ್ತಪಾತಕ್ಕೆ ಕಾರಣವಾಯಿತು" ಎಂದು ಅಜ್ಮಿ ಹೇಳಿದ್ದಾರೆ.
ತಂದೆ ಯುದ್ಧ ಅಪರಾಧಿ
ಕುಖ್ಯಾತ ಮಾಜಿ ಜಮಾತ್-ಇ-ಇಸ್ಲಾಮಿ ಮುಖ್ಯಸ್ಥ ಮತ್ತು 1971 ರ ವಿಮೋಚನಾ ಯುದ್ಧದ ಸಮಯದಲ್ಲಿ ಹಿಂದುಗಳು ಮತ್ತು ವಿಮೋಚನಾ ಪರ ಬಂಗಾಳಿಗಳ ನರಮೇಧಕ್ಕೆ ಕಾರಣವಾದ ಯುದ್ಧ ಅಪರಾಧಿ ಗುಲಾಮ್ ಅಜಮ್ ಅವರ ಮಗನೇ ಈ ಅಜ್ಮಿ,(ಏಜೆನ್ಸೀಸ್).