ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ಘೋಷಿಸಿಕೊಂಡ ಬಲೂಚಿಸ್ತಾನ? 
ವಿದೇಶ

ಪಾಕಿಸ್ತಾನದಿಂದ ಬೇರ್ಪಟ್ಟ ಬಲೂಚಿಸ್ತಾನ? ಆಗಸ್ಟ್​ 11 ರಂದು ಸ್ವಾತಂತ್ರ ದಿನಾಚರಣೆ ನಿಗದಿ ಮಾಡಿದ ರೆಬಲ್​ ಪಡೆ! Balochistan Announce Independence Day

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ಘೋಷಿಸಿಕೊಂಡ ಬಲೂಚಿಸ್ತಾನ
  • ಆಗಸ್ಟ್ 11 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ರೆಬಲ್ ಪಡೆ ನಿರ್ಧಾರ
ಬಲೂಚಿಸ್ತಾನ: ಕಳೆದೊಂದು ತಿಂಗಳಿನಿಂದ ಪಾಕಿಸ್ತಾನದ ಜೊತೆ ಕಾದಾಡುತ್ತಿರುವ ಬಲೂಚ್​​ ಪ್ರಾಂತ್ಯ, ತಾವು ಪಾಕಿಸ್ತಾನದಿಂದ ಸ್ವತಂತ್ರರಾಗಿದ್ದೆವೆಂದು ಘೋಷಿಸಿದ್ದು, ಆಗಸ್ಟ್​ 11 ರಂದು ತಮ್ಮ ಸ್ವಾತಂತ್ರ್ಯ ದಿನಾಚರಣೆ (Balochistan Announce Independence Day) ಯಾಗಲಿದೆ ಎಂದು ತಿಳಿಸಿದೆ.
1947 ರಿಂದ ಇಲ್ಲಿವರೆಗೆ ಪಾಕಿಸ್ತಾನ ಹಾಗೂ ಇಸ್ಲಾಮಾಬಾದ್​ ಆಡಳಿತ ಬಲೂಚ್​​ಗಳನ್ನು ಎರಡನೇ ದರ್ಜೆಯ ನಾಗರಿಕರೆಂಬಂತೆ ನಡೆಸಿಕೊಂಡಿದೆ, ಹೀಗಾಗಿ ನಾವು ಪಾಕಿಸ್ತಾನದಿಂದ ಸ್ವಾತಂತ್ರವನ್ನು ಪಡೆದುಕೊಂಡಿದ್ದು, ನಮ್ಮ ಪ್ರಾಂತದಲ್ಲಿ ಸ್ವಂತ ಆಡಳಿತ ನಡೆಸುವುದಾಗಿ ತಿಳಿಸಿದ್ದಾರೆ.

ಆಗಸ್ಟ್​​ 11 ರ ಆಯ್ಕೆ ಏಕೆ?

ಪಾಕಿಸ್ತಾನದ ಆಡಳಿತ ಹಾಗೂ ನಿಯಮ ಇನ್ಮುಂದೆ ನಮ್ಮಲ್ಲಿ ನಡೆಯುದಿಲ್ಲ ಎಂದಿರುವ ಬಲೂಚ್​ ಜನ ಆಗಸ್ಟ್​​ 11 ನ್ನು ತಮ್ಮ ಸ್ವಾತಂತ್ರ ಪಡೆದ ದಿನವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆಗಸ್ಟ್​ 14 ರಂದು ಪಾಕಿಸ್ತಾನದ ಸ್ವಾತಂತ್ರ ದಿನವಾದರೆ, ಆಗಸ್ಟ್​ 15 ಭಾರತದ ಸ್ವಾತಂತ್ರ ದಿನವಾಗಿದೆ.
ಈ ಬಲೂಚ್​ಗಳು ಆಗಸ್ಟ್​ 11 ನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದಾರೆಂಬ ಪ್ರಶ್ನೆ ಇತಿಹಾಸದಲ್ಲಿ ಉತ್ತರ ದೊರೆಯಲಿದೆ. 1947 ಕ್ಕೂ ಪೂರ್ವದಲ್ಲಿ ಈ ಬಲೂಚ್​ ಪ್ರಾಂತ್ಯವನ್ನು ಭಾರತ, ಪಾಕ್​ ಅಥವಾ ಬ್ರಿಟಿಷರು ಆಳುತ್ತಿರಲಿಲ್ಲ. ಬದಲಿಗೆ ಬ್ರಿಟಿಷರ ಖಾನ್​ ಆಫ್​ ಖಲತ್​ ಆಗಿ ಮೀರ್ ಅಹ್ಮದ್ ಯಾರ್ ಖಾನ್ ಎಂಬ ರಾಜ ಆಳುತ್ತಿದ್ದನು.

1947 ರಲ್ಲಿ ಭಾರತ ಇಬ್ಭಾಗವಾಗಿ ಪಾಕಿಸ್ತಾನ ಜನ್ಮತಾಳಿದಾಗ, ಪಾಕಿಸ್ತಾನದ ಅಧಿಕಾರಿಗಳು ಈ ಖಾನ್​ ಆಫ್​ ಖಲತ್​​ನನ್ನು ಬೇಟಿಯಾಗಿ ಪಾಕಿಸ್ತಾನವನ್ನು ಸೇರುವಂತೆ ಕೇಳಿಕೊಂಡರು. ಆರಂಭದಲ್ಲಿ ಬಲೂಚ್​ ಪ್ರತ್ಯೇಕ ಪ್ರಾಂತ್ಯವಾಗಿ ಮುಂದುವರಿಯಲಿದೆ ಎಂದ ಖಾನ್​, ನಂತರ ಬಲೂಚ್​ಗೆ ವಿಶೇಷ ಸ್ಥಾನಮಾನ ನೀಡಿದರೆ ಮಾತ್ರ ಪಾಕ್​ ಜೊತೆ ನಿಲ್ಲುವುದಾಗಿ ಹೇಳಿದ್ದನು.


ಅದರೆ ಪಾಕಿಸ್ತಾನದ ಜೊತೆ ಸೇರಿದ ನಂತರ, ಬಲೂಚಿಸ್ತಾನಕ್ಕೆ ಯಾವುದೇ ವಿಶೇಷ ಸ್ಥಾನಮಾನ ದೊರೆಯದೇ ಹೋಗಿದ್ದು, ಅಲ್ಲಿನ ಜನರ ಕೋಪಕ್ಕೆ ಕಾರಣವಾಯಿತು. ಆಗಸ್ಟ್​ 11, 1947 ರಂದು ಪಾಕಿಸ್ತಾನದ ಜೊತೆ ನಾವು ಸೇರಲ್ಲ, ನಾವು ಪ್ರತ್ಯೇಕವಾಗಿರುತ್ತೇವೆಂದು ಖಾನ್​ ಹೇಳಿದ್ದಾಗಿ ಅಲ್ಲಿನ ಜನ ನಂಬುವ ಕಾರಣಕ್ಕೆ ಈ ಆಗಸ್ಟ್​​ 11 ನ್ನು ಬಲೂಚ್​ ಜನ ಸ್ವಾತಂತ್ರ ದಿನವನ್ನಾಗಿ ಆಚರಿಸುತ್ತೇವೆಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಆಗಸ್ಟ್​ 14 ಅಂದರೆ ಪಾಕಿಸ್ತಾನದ ಸ್ವಾತಂತ್ರ ದಿನಾಚರಣೆ, ಬಲೂಚ್​ ಜನರಿಗೆ ಕೆಟ್ಟ ದಿನವಾಗಿದ್ದು, ಅಂದು ತಾವು ಕರಾಳ ದಿನ ಆಚರಿಸಲಿದ್ದೆವೆಂದು ತಿಳಿಸಿದ್ದಾರೆ, (ಏಜನ್ಸೀಸ್​).