ಢಾಕಾ: ( Begum Khaleda Zia) ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಮತ್ತು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ (80) ಅವರು ಇಂದು (ಡಿಸೆಂಬರ್ 30, 2025, ಮಂಗಳವಾರ) ಮುಂಜಾನೆ ನಿಧನರಾಗಿದ್ದಾರೆ.
ಖಲೀದಾ ಜಿಯಾ ಅವರು ಲಿವರ್ ಸಿರೋಸಿಸ್, ಸಂಧಿವಾತ, ಮಧುಮೇಹ ಮತ್ತು ಗಂಭೀರ ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಳೆದ ನವೆಂಬರ್ 23 ರಿಂದ ಅವರು ಢಾಕಾದ ಎವರ್‌ಕೇರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸೋಂಕು ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಅವರನ್ನು ಡಿಸೆಂಬರ್ 11 ರಿಂದ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ 6 ಗಂಟೆಗೆ ಢಾಕಾದ ಅಪೋಲೋ ಆಸ್ಪತ್ರೆಯಲ್ಲಿ ಬೇಗಂ ಖಲೀದಾ ಜಿಯಾ ಅವರು ನಿಧನರಾಗಿದ್ದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಆಗಸ್ಟ್ 15, 1945 ರಂದು ಜನಿಸಿದರು. ದಿನಾಜ್‌ಪುರದ ಮಿಷನರಿ ಶಾಲೆ ಮತ್ತು ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ನಂತರ ಸುರೇಂದ್ರನಾಥ್ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು.
ಬಾಂಗ್ಲಾದೇಶದ ಸಂಸ್ಥಾಪಕ ಜಿಯಾವುರ್ ರೆಹಮಾನ್ ಅವರ ಪತ್ನಿ. ಅವರ ಕುಟುಂಬದಲ್ಲಿ ಅವರ ಹಿರಿಯ ಮಗ ತಾರಿಕ್, ಅವರ ಪತ್ನಿ ಮತ್ತು ಮಗಳು ಇದ್ದಾರೆ. ಖಲೀದಾ ಜಿಯಾ ಅವರ ಪತಿ ಮತ್ತು ಬಾಂಗ್ಲಾದೇಶದ ಅಂದಿನ ಅಧ್ಯಕ್ಷರಾಗಿದ್ದ ಜಿಯಾವುರ್ ರೆಹಮಾನ್ ಅವರು ಮೇ 30, 1981 ರಂದು ಚಿತ್ತಗಾಂಗ್‌ನಲ್ಲಿ ನಡೆದ ಸೇನಾ ದಂಗೆಯ ಸಂದರ್ಭದಲ್ಲಿ ಹತ್ಯೆಗೀಡಾದರು. ಚಿತ್ತಗಾಂಗ್ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದಾಗ, ಬಂಡಾಯ ಎದ್ದ ಸೇನಾ ಅಧಿಕಾರಿಗಳ ಗುಂಪು ಅವರ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಕೊಂದಿತು. ಈ ಘಟನೆಯ ನಂತರವೇ ಖಲೀದಾ ಜಿಯಾ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.
ಪತಿ ಜಿಯಾವುರ್ ರೆಹಮಾನ್ ಹತ್ಯೆಯ ನಂತರ ಅವರು ರಾಜಕೀಯ ಪ್ರವೇಶಿಸಿ ಬಿಎನ್‌ಪಿ ಪಕ್ಷದ ಉಸ್ತುವಾರಿ ವಹಿಸಿಕೊಂಡರು. 1991 ರಲ್ಲಿ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ತಂದ ಇವರು ಒಟ್ಟು ಮೂರು ಬಾರಿ ದೇಶದ ಚುಕ್ಕಾಣಿ ಹಿಡಿದಿದ್ದರು.
1981 ರಲ್ಲಿ ತಮ್ಮ ಪತಿ ಜಿಯಾವುರ್ ರೆಹಮಾನ್ ಅವರ ಹತ್ಯೆಯ ನಂತರ ಖಲೀದಾ ಜಿಯಾ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. 1984 ರಲ್ಲಿ ಅವರು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಅಧ್ಯಕ್ಷೆಯಾಗಿ ಆಯ್ಕೆಯಾದರು.
ಖಲೀದಾ ಜಿಯಾ ಅವರು ಬಾಂಗ್ಲಾದೇಶದ ಇತಿಹಾಸದಲ್ಲಿ ಒಟ್ಟು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ:
ಮೊದಲ ಅವಧಿ (1991–1996): 1991 ರಲ್ಲಿ ನಡೆದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲಿ ಜಯಗಳಿಸಿ, ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾದರು. ಇವರು ಮುಸ್ಲಿಂ ರಾಷ್ಟ್ರಗಳ ಪೈಕಿ ಬೆನಜೀರ್ ಭುಟ್ಟೋ ನಂತರ ಪ್ರಧಾನಿಯಾದ ಎರಡನೇ ಮಹಿಳೆಯಾಗಿದ್ದಾರೆ.
ಎರಡನೇ ಅವಧಿ (1996): ಫೆಬ್ರವರಿ 1996 ರಲ್ಲಿ ಅಲ್ಪಾವಧಿಗೆ ಮತ್ತೆ ಅಧಿಕಾರಕ್ಕೆ ಬಂದರು.
ಮೂರನೇ ಅವಧಿ (2001–2006): 2001 ರ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರು.
ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮತ್ತು ಉಚಿತವಾಗಿ ಜಾರಿಗೆ ತಂದರು. ವಿಶೇಷವಾಗಿ ಹೆಣ್ಣುಮಕ್ಕಳಿಗೆ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ಪ್ರಾರಂಭಿಸಿದರು. ಖಲೀದಾ ಜಿಯಾ 1991 ರಿಂದ 1996 ರವರೆಗೆ ಮತ್ತು ಮತ್ತೆ 2001 ರಿಂದ 2006 ರವರೆಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದರು. 1991 ರ ರಾಷ್ಟ್ರೀಯ ಚುನಾವಣೆಯಲ್ಲಿ ಜನಪ್ರಿಯ ಮತಗಳ ಮೂಲಕ ಖಲೀದಾ ಜಿಯಾ ಅಧಿಕಾರಕ್ಕೆ ಬಂದರು. ಅವರ ಅಧಿಕಾರಾವಧಿಯಲ್ಲಿ, ಸಂಸದೀಯ ವ್ಯವಸ್ಥೆಯನ್ನು ಪುನಃಸ್ಥಾಪಿಸಲಾಯಿತು.
ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. 2007 ರಲ್ಲಿ ಮಿಲಿಟರಿ ಬೆಂಬಲಿತ ಉಸ್ತುವಾರಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಖಲೀದಾ ಜಿಯಾ ಶೇಖ್ ಹಸೀನಾ ಸೇರಿದಂತೆ ಹಲವಾರು ರಾಜಕಾರಣಿಗಳನ್ನು ಜೈಲಿಗೆ ಹಾಕಿದರು. ಜಿಯಾ ನಂತರ ಬಿಡುಗಡೆಯಾದರು ಮತ್ತು 2008 ರ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದಾಗ್ಯೂ, ಅವರ ಪಕ್ಷ ಗೆಲ್ಲಲು ವಿಫಲವಾಯಿತು.
ಖಲೀದಾ ಜಿಯಾ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಲಾಯಿತು. 2018 ರಲ್ಲಿ ಅವರನ್ನು ಜೈಲಿಗೆ ಹಾಕಲಾಯಿತು. ಆದಾಗ್ಯೂ, ಆರೋಗ್ಯ ಕಾರಣಗಳಿಂದಾಗಿ ಅವರನ್ನು ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಅಂದಿನಿಂದ ಅವರು ಗೃಹಬಂಧನದಲ್ಲಿದ್ದರು. 1981 ರಲ್ಲಿ ಪತಿಯ ಹತ್ಯೆಯ ನಂತರ ರಾಜಕೀಯಕ್ಕೆ ಧುಮುಕಿದ ಇವರು, ಮಿಲಿಟರಿ ಆಡಳಿತದ ವಿರುದ್ಧ ಹೋರಾಡಿ 1991 ರಲ್ಲಿ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.