ಇರಾನ್​ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ  
ವಿದೇಶ

1981, ಇಂದಿರಾ ಗಾಂಧಿ ಪ್ರಧಾನಿ; ಕರ್ನಾಟಕದ 'ಮಿನಿ ಇರಾನ್'​ಗೆ ಭೇಟಿ ನೀಡಿದ್ರು ಖಮೇನಿ! ಅಂದಿನಿಂದ ಈ ಹಳ್ಳಿ...

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ
  • 1981ರಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು ಇರಾನ್‌ನ ಸರ್ವೋಚ್ಚ ನಾಯಕ
  • ಈ ಗ್ರಾಮಕ್ಕೆ ಭೇಟಿ ಕೊಟ್ಟು, ಇಲ್ಲಿನ ಜನರೊಂದಿಗೆ ಸಮಯ ಕಳೆದಿದ್ದರು
Mini Iran: ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾಗಿರುವುದಾಗಿ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಣೆ ಮಾಡಿದ್ದಾರೆ. ಟ್ರಂಪ್​ ಮಾತ್ರವಲ್ಲದೆ, ಇರಾನ್​ ಮಾಧ್ಯಮಗಳು ಕೂಡ ವರದಿ ಮಾಡಿವೆ.
ಅಮೆರಿಕ ಮತ್ತು ಇಸ್ರೇಲ್​ ಅಂದುಕೊಂಡಿದ್ದ ಗುರಿಯನ್ನು ಸಾಧಿಸಿವೆ. ಇನ್ನೊಂದೆಡೆ ಇರಾನ್​ನ ಕೆಲ ಜನರಿಗೂ ಖಮೇನಿ ಸಾವು ಖುಷಿ ತಂದಿದೆ. ಇದೆಲ್ಲದರ ನಡುವೆ ಕರ್ನಾಟಕದಲ್ಲಿದೆ ಮಿನಿ ಇರಾನ್​ ಎಂಬ ಸಂಗತಿ. ಆಶ್ಚರ್ಯ ಎಂದರೆ, 1981ರಲ್ಲಿ ಈ ಹಳ್ಳಿಗೆ ಖುದ್ದಾಗಿ ಅಯತೊಲ್ಲಾ ಖಮೇನಿ ಅವರು ಭೇಟಿ ನೀಡಿದ್ದರು ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ವರದಿಗಳು ಉಲ್ಲೇಖಿಸಿವೆ.
ಇರಾನ್​ನ ಸುಪ್ರೀಂ ನಾಯಕನ ಸಾವು ಇದೀಗ ಇರಾನಿನಲ್ಲಿ ಮಾತ್ರವಲ್ಲ, ಕರ್ನಾಟಕದ ಅಲಿಪುರ ಎಂಬ ಗ್ರಾಮಸ್ಥರಲ್ಲಿಯೂ ಅತೀವ ದುಃಖವನ್ನು ತಂದೊಡ್ಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಈ "ಮಿನಿ ಇರಾನ್" ಎಂದು ಕರೆಯಲ್ಪಡುವ ಗ್ರಾಮಕ್ಕೆ 1981ರಲ್ಲಿ ಭಾರತ ಪ್ರವಾಸದ ಕೈಗೊಂಡಿದ್ದ ಸಮಯದಲ್ಲಿ ಖಮೇನಿ ಅವರು ಭೇಟಿ ನೀಡಿದ್ದರು. ಅಂದಿನಿಂದಲೂ ಈ ಹಳ್ಳಿಯಲ್ಲಿ ಅವರ ಹೆಸರು ಒಂದು ವಿಶೇಷ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಪ್ರಸ್ತುತ, ಅವರ ಸಾವಿನ ಸುದ್ದಿಯಿಂದ ಇಡೀ ಗ್ರಾಮವೇ ಶೋಕದ ಕಗತ್ತಲಿನಲ್ಲಿದೆ.
ಶಿಯಾ ಮುಸ್ಲಿಂ ಜನಸಂಖ್ಯೆಯ ದೊಡ್ಡ ಪ್ರಮಾಣ ಮತ್ತು ಇಸ್ಲಾಮಿಕ್ ಗಣರಾಜ್ಯದೊಂದಿಗೆ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಸಂಬಂಧಗಳಿಂದಾಗಿ ಈ ಗ್ರಾಮವನ್ನು 'ಮಿನಿ ಇರಾನ್' ಎಂದು ಕರೆಯಲಾಯಿತು. ಖಮೇನಿ ಅವರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ, ಗ್ರಾಮವು ಮೂರು ದಿನಗಳ ಅಘೋಷಿತ ಮತ್ತು ಸ್ವಯಂಪ್ರೇರಿತ ಬಂದ್ ಅನ್ನು ಘೋಷಿಸಿದೆ. ಅತ್ಯುನ್ನತ, ಆಧ್ಯಾತ್ಮಿಕ ಮಾರ್ಗದರ್ಶಕ ಎಂದೇ ಇಲ್ಲಿನ ಜನ ಅವರನ್ನು ಪೂಜಿಸುತ್ತಿದ್ದರು ಎನ್ನಲಾಗಿದೆ. ಹೀಗಿದ್ದಾಗಲೇ ಅವರ ಸಾವಿನ ಸುದ್ದಿ ಗ್ರಾಮದ ನಿವಾಸಿಗಳು ಕಣ್ಣೀರಿಗೆ ಕಾರಣವಾಗಿದೆ.
ಖಮೇನಿ ಕೂಡ ಅಲಿಪುರ ಭೇಟಿ, ಕರ್ನಾಟಕದಲ್ಲಿ ಅವರ ಗುರುತಿನ ಮೂಲಾಧಾರವಾಗಿ ಉಳಿದಿದೆ. ತಮ್ಮ ಆಗಮನದ ಸಮಯದಲ್ಲಿ, ಸ್ಥಳೀಯ ವಿದ್ವಾಂಸರು ಮತ್ತು ನಿವಾಸಿಗಳೊಂದಿಗೆ ಸಂಭಾಷಣೆ ನಡೆಸುವ ಮೂಲಕ ಈ ಊರಿನಲ್ಲಿ ಅವರು ಸಮಯ ಕಳೆದರು ಎಂದು ವರದಿಯಾಗಿದೆ. ಇಸ್ರೇಲ್​-ಅಮೆರಿಕ ಜಂಟಿ ದಾಳಿಯನ್ನು ಖಂಡಿಸಿರುವ ಗ್ರಾಮಸ್ಥರು, ಭಾರೀ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ನಿಟ್ಟಿನಲ್ಲಿ, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಗ್ರಾಮದ ಸುತ್ತಮುತ್ತ ಹದ್ದಿನ ಕಣ್ಣಿಟ್ಟಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಬಿಗಿ ಬಂದೋಬಸ್ತ್ ಮಾಡಿದ್ದಾರೆ,(ಏಜೆನ್ಸೀಸ್).