ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 
ವಿದೇಶ

PM Modi | ರಷ್ಯಾ ಅಧ್ಯಕ್ಷರ ಮನೆ ಗುರಿಯಾಗಿಸಿ ದಾಳಿ: ಶಾಂತಿ ಮಾತುಕತೆಗೆ ಧಕ್ಕೆ ತರುವ ಪ್ರಯತ್ನ ಎಂದ ಪ್ರಧಾನಿ ಮೋದಿ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿವಾಸದ ಮೇಲೆ ಯುಕ್ರೇನ್​ ದೊಡ್ಡ ಪ್ರಮಾಣದ ಡ್ರೋನ್ ದಾಳಿ ಮಾಡಿದ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ(PM Modi) ಮಂಗಳವಾರ (ಡಿ.30) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮೋದಿ, ಪ್ರಾದೇಶಿಕ ಸಂಘರ್ಷವನ್ನು ಉಲ್ಬಣಗೊಳಿಸುವ ಬೆದರಿಕೆ ಹಾಕುವ ಯಾವುದೇ ಕ್ರಮಗಳನ್ನು ಖಂಡಿಸುತ್ತೇನೆ ಎಂದಿದ್ದಾರೆ.
ರಷ್ಯಾದ ಅಧ್ಯಕ್ಷರ ನಿವಾಸವನ್ನು ಗುರಿಯಾಗಿಸಿಕೊಂಡಿರುವ ವರದಿಗಳಿಂದ ತೀವ್ರ ಕಳವಳಗೊಂಡಿದ್ದೇನೆ. ಈಗಾ ರಷ್ಯಾ ಮತ್ತು ಯುಕ್ರೇನ್​ ನಡೆಯುತ್ತಿರುವ ಯುದ್ದವನ್ನು ರಾಜತಾಂತ್ರಿಕವಾಗಿ ಕೊನೆಗೊಳಿಸಲು ಮತ್ತು ಶಾಂತಿಯನ್ನು ಸಾಧಿಸುವ ಕಡೆಗೆ ಅತ್ಯಂತ ಕಾರ್ಯಸಾಧ್ಯವಾದ ಮಾರ್ಗವನ್ನು ನೀಡುತ್ತವೆ. ಈ ಪ್ರಯತ್ನಗಳ ಮೇಲೆ ಗಮನಹರಿಸಲು ಮತ್ತು ಇವುಗಳನ್ನು ದುರ್ಬಲಗೊಳಿಸಬಹುದಾದ ಯಾವುದೇ ಕ್ರಮಗಳನ್ನು ತಪ್ಪಿಸಲು ನಾವು ಸಂಬಂಧಪಟ್ಟ ಎಲ್ಲರನ್ನೂ ಕೋರುತ್ತೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಭಾರತವು ನಿರಂತರವಾಗಿ ತಟಸ್ಥತೆಯ ನಿಲುವನ್ನು ಕಾಯ್ದುಕೊಂಡಿದೆ. ಅಲ್ಲದೆ, ಉಭಯ ರಾಷ್ಟ್ತಗಳಿಗೂ ಸಂವಾದ ಮತ್ತು ರಾಜತಾಂತ್ರಿಕತೆಗೆ ಮರಳಲು ಕರೆ ನೀಡಿದೆ. ಈ ಇತ್ತೀಚಿನ ಪ್ರತಿಕ್ರಿಯೆಯು ಯುದ್ಧಭೂಮಿ ಪರಿಹಾರಗಳಿಗೆ ಸ್ಥಳವಲ್ಲ ಎಂಬ ನವದೆಹಲಿಯ ಕಠಿಣ ನಿಲುವನ್ನು ತಳಿದೆ.

ವರದಿಯಾದ ದಾಳಿಯ ವಿವರಗಳು

ಡಿಸೆಂಬರ್ 28-29 ರ ರಾತ್ರಿ ರಷ್ಯಾದ ವಾಯು ರಕ್ಷಣಾ ಪಡೆಗಳು 91 ದೀರ್ಘ-ಶ್ರೇಣಿಯ ಯುಕ್ರೇನಿನ್ ಡ್ರೋನ್‌ಗಳ ದಾಳಿಯನ್ನು ತಡೆದವು ಎಂದು ಕ್ರೆಮ್ಲಿನ್ ವರದಿ ಮಾಡಿದೆ. ಅಲ್ಲದೆ, ಈ ಗುರಿಗಳು ಮಾಸ್ಕೋದ ವಾಯುವ್ಯದಲ್ಲಿರುವ ನವ್ಗೊರೊಡ್ ಪ್ರದೇಶದಲ್ಲಿ (ವಾಲ್ಡೈ) ಅಧ್ಯಕ್ಷ ಪುಟಿನ್​ರ ನಿವಾಸವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಯಾವುದೇ ಹಾನಿಯಾಗಿಲ್ಲ ಎಂದು ದೃಢಪಡಿಸಿದ್ದಾರೆ. ಎಲ್ಲಾ ಡ್ರೋನ್‌ಗಳನ್ನು ಗುರಿ ತಲುಪುವ ಮೊದಲು ತಟಸ್ಥಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದೆವರೆದು ಮಾತನಾಡಿದ ಲಾವ್ರೊವ್, ಈ ಘಟನೆಯನ್ನು ಭಯೋತ್ಪಾದನೆ ಎಂದು ಕಿಡಿಕಾರಿದ್ದಾರೆ. ರಷ್ಯಾ ಈಗಾಗಲೇ ಪ್ರತೀಕಾರದ ದಾಳಿಗಳಿಗೆ ಗುರಿಗಳನ್ನು ಆಯ್ಕೆ ಮಾಡಿದೆ ಎಂದು ಎಚ್ಚರಿಸಿದ್ದಾರೆ.

ಶಾಂತಿ ಮಾತುಕತೆಗಳ ಮೇಲೆ ಪರಿಣಾಮ

ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಭೆಯ ನಂತರ ರಾಜತಾಂತ್ರಿಕ ಪ್ರಚೋದನೆಯು ನಿರ್ಮಾಣವಾಗುತ್ತಿದ್ದಂತೆಯೇ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಅಲ್ಲದೆ, ರಷ್ಯಾ ತನ್ನ ಮಾತುಕತೆಯ ನಿಲುವನ್ನು ಪರಿಷ್ಕರಿಸುವುದಾಗಿ ಹೇಳಿದ್ದರೂ, ವಿದೇಶಾಂಗ ಸಚಿವ ಲಾವ್ರೊವ್ ಮಾಸ್ಕೋ ಇನ್ನೂ ಶಾಂತಿ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು,(ಏಜೆನ್ಸೀಸ್).