ಭಾರತದ ಹಡಗಿನ ಮೇಲೆ ದಾಳಿ 
ವಿದೇಶ

ಓಮನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ: ನಾವು ಇದನ್ನು ಖಂಡಿಸುತ್ತೇವೆ; MEA ವಕ್ತಾರ ರಣಧೀರ್ ಜೈಸ್ವಾಲ್ ಗರಂ! Attack on Indian Ship

ನವದೆಹಲಿ: ಕಳೆದೆರಡು ತಿಂಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಈಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿದೆ ಎಂದರೆ ಸುಳ್ಳಲ್ಲ. ಬುಧವಾರ (ಮೇ.13) ಓಮನ್​ ಕರಾವಳಿಯಲ್ಲಿ ಸಾಗುತ್ತಿದ್ದ ಭಾರತೀಯ ಧ್ವಜ ಹೊತ್ತ ವ್ಯಾಪಾರಿ ಹಡಗಿನ ಮೇಲೆ ದಾಳಿ (Attack on Indian Ship) ನಡೆದಿದ್ದು, ಇದನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ.

ನಾವು ಈ ದಾಳಿಯನ್ನು ಖಂಡಿಸುತ್ತೇವೆ!

ನಿನ್ನೆ (ಮೇ.13) ಓಮನ್ ಕರಾವಳಿಯಲ್ಲಿ ಭಾರತೀಯ ಧ್ವಜ ಹೊತ್ತ ಹಡಗಿನ ಮೇಲೆ ನಡೆದ ದಾಳಿ ಸ್ವೀಕಾರಾರ್ಹವಲ್ಲ ಮತ್ತು ವಾಣಿಜ್ಯ ಹಡಗು ಸಾಗಣೆ ಮತ್ತು ನಾಗರಿಕ ನಾವಿಕರನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಟ್ವಿಟ್​ ಮಾಡಿದ್ದಾರೆ.
ಓಮನ್​ ದೇಶಕ್ಕೆ ನಾವು ಆಭಾರಿ
ಆದರೆ ದಾಳಿಗೆ ತುತ್ತಾದ ಹಡಗಾಗಲಿ ಅಥವಾ ನಾವಿಕರಾಗಲಿ ಸುರಕ್ಷಿತರಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ. ನಮ್ಮ ಹಡಗಿನ ಮೇಲೆ ದಾಳಿ ನಡೆದಾಗ ಓಮನ್​ ದೇಶದ ರಕ್ಷಣಾ ಪಡೆಗಳು ನಮ್ಮ ಸಹಾಯಕ್ಕೆ ಬಂದವು. ಹೀಗಾಗಿ ನಾವು ಅವರಿಗೆ ಧನ್ಯವಾದ ತಿಳಿಸುತ್ತೆವೆಂದು ಅವರು ಹೇಳಿದ್ದಾರೆ.
ನಮ್ಮ ಮೇಲೆ ಯಾರು ದಾಳಿ ಮಾಡಿದರೆಂದು ನಿಖರವಾಗಿ ಇದುವತರೆಗೆ ತಿಳಿದುಬಂದಿಲ್ಲ, ಅದನ್ನು ನಾವು ವಿಚಾರಣೆ ಮಾಡುತ್ತಿದ್ದೆವೆ. ಆದರೆ ಹೀಗೆ ವಾಣಿಜ್ಯ ಹಡಗಿನ ಮೇಲೆ ಹಾಗೂ ನಿರಪರಾಧಿ ನಾವಿಕರ ಮೇಲೆ ದಾಳಿ ನಡೆಸುವುದು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಎಂಇಎ ವಕ್ತಾರ ತಿಳಿಸಿದ್ದಾರೆ, (ಏಜನ್ಸೀಸ್​).