NASA (ಚಿತ್ರ X) 
ವಿದೇಶ

ಬಾಹ್ಯಾಕಾಶದ ಕತ್ತಲಲ್ಲಿ ಕಂಗೊಳಿಸಿದ ಭೂಮಿ ಮತ್ತು ಚಂದ್ರ: ನೆಟ್ಟಿಗರ ಮನಸ್ಸನ್ನು ಗೆದ್ದ ಗಗನಯಾತ್ರಿಯ ಕ್ಯಾಮೆರಾ ಕಣ್ಣು! NASA

NASA: ಬಾಹ್ಯಾಕಾಶದ ವಿಸ್ಮಯಕಾರಿ ನೋಟಗಳನ್ನು ಜಗತ್ತಿಗೆ ಪರಿಚಯಿಸುವ ತಮ್ಮ ಅಭ್ಯಾಸವನ್ನು ಮುಂದುವರಿಸಿರುವ ನಾಸಾ ಗಗನಯಾತ್ರಿ ಅನಿಲ್​ ಮೆನನ್​, ಈ ಬಾರಿಯೂ ಒಂದು ಅತ್ಯದ್ಭುತ ವೀಡಿಯೊ ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಡ್ರಾಗನ್ ಬಾಹ್ಯಾಕಾಶ ನೌಕೆಯ ಕಿಟಕಿಯಿಂದ ಭೂಮಿ ಮತ್ತು ಚಂದ್ರ ಒಂದೇ ಚೌಕಟ್ಟಿನಲ್ಲಿ ಕಾಣುವ ಅಪರೂಪದ 'ಟೈಮ್‌ಲ್ಯಾಪ್ಸ್' (Time-lapse) ವಿಡಿಯೋವನ್ನು ಸಾಮಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಾಹ್ಯಾಕಾಶದ ಕತ್ತಲಲ್ಲಿ ಕಂಗೊಳಿಸಿದ ಭೂಮಿ-ಚಂದ್ರ!

ವಿಶ್ವದ ಕತ್ತಲೆಯ ಹಿನ್ನೆಲೆಯಲ್ಲಿ ಭೂಮಿ ಮತ್ತು ಚಂದ್ರ ಪಕ್ಕಪಕ್ಕದಲ್ಲೇ ಬೆಳಗುವಂತೆ ಕಾಣುವ ಈ ದೃಶ್ಯ ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತಿದೆ. ಈ ವಿಡಿಯೋದಲ್ಲಿ 0:45 ಸೆಕೆಂಡುಗಳ ವೇಳೆಗೆ 'ಒರೈಯನ್' (Orion) ನಕ್ಷತ್ರಪುಂಜ ಮೂಡಿಬರುವುದನ್ನು ಕಾಣಬಹುದು ಎಂದು ಮೆನನ್​ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಈ ವಿಡಿಯೋಚವನ್ನು ಹೆಚ್ಚು ಸ್ಪಷ್ಟವಾಗಿ ತೋರಿಸಲು ಇದರ ವೇಗವನ್ನು ಬದಲಾಯಿಸಲಾಗಿದೆ ಎಂದು ಅನಿಲ್​ ತಿಳಿಸಿದ್ದಾರೆ.
ಈ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರೆ ಬಗ್ಗೆ ಮಾತನಾಡಿದ ಅವರು, "15mm ಲೆನ್ಸ್, ಅಪರ್ಚರ್ ಪ್ರಿಯಾರಿಟಿ (Aperture Priority) ಹಾಗೂ ಆಟೋ ಐಎಸ್‌ಒ (Auto ISO) ಸೆಟ್ಟಿಂಗ್‌ಗಳನ್ನು ಬಳಸಿ ಈ ದೃಶ್ಯಾವಳಿಯನ್ನು ಚಿತ್ರೀಕರಿಸಲಾಗಿದೆ ಎಂದಿದ್ದಾರೆ.

ನೆಟ್ಟಿಗರಿಂದ ಹರಿದುಬಂದ ಶ್ಲಾಘನೆ!

ಅನಿಲ್ ಮೆನನ್ ಅವರು ಈ ಹಿಂದೆ ಕೂಡ ಬಾಹ್ಯಾಕಾಶದಿಂದ ಭೂಮಿಯ ಹಾಗೂ ನಕ್ಷತ್ರ ಮಂಡಲಗಳ ಹಲವು ಅಪರೂಪದ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಬಾಹ್ಯಾಕಾಶದ ಸೌಂದರ್ಯದ ಬಗ್ಗೆ ಕುತೂಹಲ ಮೂಡಿಸಿದ್ದರು.
ಆದಾಗ್ಯೂ, ಈ ಹೊಸ ವೀಡಿಯೊ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ. ಇದೊಂದು ಅದ್ಭುತ ಅನುಭವ, ಇದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು," ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬ ಬಳಕೆದಾರರು "ಈ ದೃಶ್ಯ ನಿಜಕ್ಕೂ ಬೆರಗುಗೊಳಿಸುವಂತಿದೆ," ಎಂದು ಮತ್ತೊಬ್ಬರು ಕೊಂಡಾಡಿದ್ದಾರೆ (ಏಜೆನ್ಸೀಸ್​).