Asim Munir 
ವಿದೇಶ

ಅಣ್ಣನ ಮಗನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ ಅಸಿಮ್ ಮುನೀರ್ ! ಗುಟ್ಟಾಗಿ ನೆರವೇರಿತು ಪಾಕ್ ಸೇನಾ ಮುಖ್ಯಸ್ಥನ ಪುತ್ರಿ ಮದ್ವೆ..Asim Munir

ಪಾಕಿಸ್ತಾನ: ( Asim Munir) ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ತಮ್ಮ ಮೂರನೇ ಪುತ್ರಿ ಮಹ್ನೂರ್ ಅವರನ್ನು ತಮ್ಮದೇ ಸಹೋದರ ಖಾಸಿಮ್ ಮುನೀರ್ ಅವರ ಪುತ್ರ ಅಬ್ದುಲ್ ರೆಹಮಾನ್ ಅವರಿಗೆ ನೀಡಿ ವಿವಾಹ ಮಾಡಿದ್ದಾರೆ.
ಮಗಳ ಮದುವೆಯನ್ನು ಅತ್ಯಂತ ಗೌಪ್ಯವಾಗಿ ಮತ್ತು ಅದ್ಧೂರಿಯಾಗಿ ನೆರವೇರಿಸಿದ್ದು ಮಾತ್ರವಲ್ಲದೆ, ತಮ್ಮದೇ ಸಹೋದರನ ಮಗನೊಂದಿಗೆ ಮಗಳ ವಿವಾಹ ಮಾಡುವ ಮೂಲಕ ಅಸಿಮ್ ಮುನೀರ್ ಅವರು ಕುಟುಂಬದ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರಾ? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಈ ಮದುವೆಯು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಮುಖ್ಯವಾಗಿ, ಪಾಕಿಸ್ತಾನದಲ್ಲಿ ಚಾಲ್ತಿಯಲ್ಲಿರುವ ಸೋದರಸಂಬಂಧಿಗಳ ನಡುವಿನ ವಿವಾಹ (Cousin Marriage) ಪದ್ಧತಿ ಮತ್ತು ಸೇನಾ ಮುಖ್ಯಸ್ಥರು ತಮ್ಮ ಅಧಿಕಾರವನ್ನು ಕುಟುಂಬದ ಒಳಗೇ ಗಟ್ಟಿಗೊಳಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಸೋದರಸಂಬಂಧಿಯೇ ವರ!
ಡಿಸೆಂಬರ್ 26, 2025 ರಂದು ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ (GHQ) ಸಮೀಪವಿರುವ ಜನರಲ್ ಅಸಿಮ್ ಮುನೀರ್ ಅವರ ಅಧಿಕೃತ ನಿವಾಸದಲ್ಲಿ ಈ ವಿವಾಹ ಸಮಾರಂಭ ಜರುಗಿತು. ಮುನೀರ್ ಅವರ ಮೂರನೇ ಪುತ್ರಿ ಮಹ್ನೂರ್ (Mahnoor) ಅವರು ತಮ್ಮ ಮೊದಲ ಸೋದರಸಂಬಂಧಿ (ಅಸಿಮ್ ಮುನೀರ್ ಅವರ ಸಹೋದರ ಖಾಸಿಮ್ ಮುನೀರ್ ಅವರ ಪುತ್ರ) ಅಬ್ದುಲ್ ರೆಹಮಾನ್ (Abdul Rehman) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ವರ ಅಬ್ದುಲ್ ರೆಹಮಾನ್ ಈ ಹಿಂದೆ ಪಾಕಿಸ್ತಾನ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಸೇನಾ ಅಧಿಕಾರಿಗಳ ಕೋಟಾದಡಿ ನಾಗರಿಕ ಸೇವೆಗಳಿಗೆ (Civil Services) ಸೇರ್ಪಡೆಗೊಂಡು ಸಹಾಯಕ ಆಯುಕ್ತರಾಗಿ (Assistant Commissioner) ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಕೀಯ ಗಣ್ಯರ ಸಮ್ಮುಖದಲ್ಲಿ ಅಸಿಮ್ ಮುನೀರ್ ಪುತ್ರಿಯ ವಿವಾಹ
ಸುಮಾರು 400 ಅತಿಥಿಗಳಿಗೆ ಮಾತ್ರ ಈ ಸಮಾರಂಭದಲ್ಲಿ ಅವಕಾಶವಿತ್ತು. ಭದ್ರತಾ ಕಾರಣಗಳಿಂದಾಗಿ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಬಹಿರಂಗಪಡಿಸಲಾಗಿಲ್ಲ.