ಢಾಕಾ: 2024ರಲ್ಲಿ ವಿಧ್ಯಾರ್ಥಿಗಳ ಚಳುವಳಿಯಿಂದ ಪ್ರಧಾನಿ ಪದವಿಯಿಂದ ಪದಚ್ಯುತಗೊಂಡು ದೇಶದಿಂದ ಗಡಿಪಾರಾಗಿ ಭಾರತದಲ್ಲಿ ವಾಸಿಸುತ್ತಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಮುಂದಿನ ತಿಂಗಳು ಸ್ವದೇಶಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಮಂಗಳವಾರ(ನ. 10) ಅವರು ದೇಶಕ್ಕೆ ಬಂದ್ರೆ, ಗಲ್ಲಿಗೇರಿಸಲಾಗುವುದು ಎಂದು ಬಾಂಗ್ಲಾದೇಶದ ಪ್ರಾಸಿಕ್ಯೂಟರ್ ಹೇಳಿದ್ದಾರೆ.
2024ರ ದಂಗೆ ಸಮಯದಲ್ಲಿ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯಕ್ಕೆ ಮತ್ತು ಹಲವಾರು ಜನರ ಸಾವುಗಳ ವಿರುದ್ಧದ ಅಪರಾಧಗಳಿಗೆ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.
ಶೇಖ್ ಹಸೀನಾ ದೇಶಕ್ಕೆ ಮರಳುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಪ್ರಾಸಿಕ್ಯೂಟರ್ ಮುಹಮ್ಮದ್ ಅಮೀನುಲ್ ಇಸ್ಲಾಂ, ಶೇಖ್ ಹಸೀನಾಗೆ ತಮ್ಮ ಮರಣದಂಡನೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಗಡುವು ಮುಗಿದಿದೆ. ಮತ್ತು ಈಗ ಯಾವುದೇ ಮೇಲ್ಮನವಿ ಸಲ್ಲಿಸಲಾಗುವುದಿಲ್ಲ. ಮರಣದಂಡನೆಯನ್ನು ಎದುರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದಿದ್ದಾರೆ.
1971ರಲ್ಲಿ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕ್ರಾಂತಿಕಾರಿಯ ಮಗಳಾದ ಹಸೀನಾ, 170 ಮಿಲಿಯನ್ ಜನರ ಬಾಂಗ್ಲಾವನ್ನು ಹೆಚ್ಚಾಗಿ ಕೃಷಿ ಆರ್ಥಿಕತೆಯಿಂದ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಲು ಸಹಾಯ ಮಾಡುವ ಮೂಲಕ ತೀವ್ರ ಆರ್ಥಿಕ ಬೆಳವಣಿಗೆಗೆ ಕಾರಣರಾದರು.
ಆದರೆ, ರಾಜಕೀಯ ಪ್ರತಿಸ್ಪರ್ಧಿಗಳನ್ನು ಜೈಲಿಗೆ ಹಾಕುವುದು, ಕಠಿಣ ಪತ್ರಿಕಾ ವಿರೋಧಿ ಕಾನೂನುಗಳನ್ನು ಜಾರಿಗೆ ತರುವುದು ಮತ್ತು ವಿರೋಧ ಪಕ್ಷದ ಕಾರ್ಯಕರ್ತರ ಹತ್ಯೆ ಸೇರಿದಂತೆ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಆರೋಪ ಅವರ ಮೇಲಿದೆ.
ಇನ್ನೂ 2024ರ ವಿದ್ಯಾರ್ಥಿಗಳ ದಂಗೆ ಸಮಯದಲ್ಲಿ ಅದನ್ನು ದಮನ ಮಾಡುವ ಕಾರ್ಯಾಚರಣೆಯು 1,400 ಜನರನ್ನು ಬಲಿ ತೆಗೆದುಕೊಂಡಿತು ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಇದರಿಂದ ಕೋಪಗೊಂಡ ಜನಸಮೂಹವು, ಅವರ ಅರಮನೆಗೆ ನುಗ್ಗಿತು. ಇದರಿಂದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಾರತಕ್ಕೆ ಪಲಾಯನ ಮಾಡಿದರು ಎನ್ಮಲಾಗಿದೆ. ಅಂದಿನಿಂದ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ (ಏಜೆನ್ಸೀಸ್).