ಸಾವಿನ ಸುದ್ದಿ ಓದುತ್ತಲೇ ನೇರಪ್ರಸಾರದಲ್ಲಿ ಅತ್ತ ಟಿವಿ ನಿರೂಪಕ
- ಅಮೆರಿಕ - ಇಸ್ರೇಲ್ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನಿಧನ
- ಸಾವಿನ ಸುದ್ದಿ ಓದುತ್ತಲೇ ನೇರಪ್ರಸಾರದಲ್ಲಿ ಅತ್ತ ಟಿವಿ ನಿರೂಪಕ
- ನಮ್ಮ ನಾಯಕನ ಸಾವಿಗೆ ಪ್ರತೀಕಾರವನ್ನು ತೀರಿಸಿ ಕೊಳ್ಳತ್ತೇವೆ ಎಂದ ನಿರೂಪಕಿ
ಇರಾನ್: ಶನಿವಾರ (ಫೆ.28) ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ ಪರಿಣಾಮ, ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Khamenei Assassination) ಸಾವನ್ನಪ್ಪಿರುವ ಸುದ್ದಿ ದೃಢಪಟ್ಟಿದೆ.
ತಮ್ಮ ನಾಯಕನ ಸಾವಿನ ಬಗ್ಗೆ ವರದಿ ಮಾಡುವಾದ ಇರಾನಿನ ಸುದ್ದಿ ಸಂಸ್ಥೆಯೊಂದರ ನಿರೂಪಕರು, ಭಾವುಕರಾಗಿ ಖಮೇನಿಯನ್ನು ಕೊಲೆ ಮಾಡಲಾಗಿದೆ ಎಂದು ಹೇಳುತ್ತಾ ನೇರಪ್ರಸಾರದಲ್ಲಿ ಅಳುತ್ತಿರುವ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ನಮ್ಮ ನಾಯಕನ ಕೊಲೆಯಾಗಿದೆ
ವೈರಲ್ ಆಗುತ್ತಿರುವ ವಿಡಿಯೋನಲ್ಲಿರುವ ನಿರೂಪಕ ಇರಾನಿಯನ್ ಸ್ಟೇಟ್ ಟಿವಿ ಎಂಬ ಚಾನೆಲ್ಲಿಗೆ ಸಂಬಂಧಿಸಿದವನಾಗಿದ್ದು, ಇಸ್ಲಾಮಿಕ್ ಕ್ರಾಂತಿಯ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಇಂದು ಅಮೆರಿಕ ಕೊಲೆಮಾಡಿದೆ ಎಂದು ಹೇಳುತ್ತಾ ನಿರೂಪಕ ಅಳುವ ದೃಶ್ಯ ಸದ್ಯ ಎಲ್ಲಾ ಕಡೆ ಸದ್ದು ಮಾಡುತ್ತಿದೆ.
ಈ ಯುದ್ಧ ಇಲ್ಲಿಗೆ ಮುಗಿದಿಲ್ಲ!
ಇರಾನಿನ ಸವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿನ ಬಗ್ಗೆ ವರದಿ ಮಾಡುತ್ತಾ ಪ್ರೆಸ್ ಟಿವಿ ನಿರೂಪಕಿ ಮರಿಯಮ್ ಅಜರ್ಚೆರ್ ಕೂಡ ದುಃಖಿತರಾಗಿದ್ದು, ಈ ಯುದ್ಧ ಇಲ್ಲಿಗೆ ಮುಗಿದಿಲ್ಲ, ಖಮೇನಿ ಸಾವಿಗೆ ಟ್ರಂಪ್ ಬೆಲೆ ತೆರಬೇಕಾಗುತ್ತದೆ ಈ ಸಾವಿನ ಸೇಡಿನ್ನು ಇರಾನ್ ತೀರಿಸಿ ಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಈ ಸಾವಿನಿಂದ ಲಕ್ಷಾಂತರ ಇರಾನಿಯನ್ನರಲ್ಲಿ ಯುರೋಪ್ ಮೇಲೆ ದ್ವೇಷದ ಕಿಚ್ಚು ಹೊತ್ತಿದ್ದು, ಈ ಕಿಚ್ಚು ಯುರೋಪ್ನ್ನು ಸುಡಲಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ನಮ್ಮ ನಾಯಕನ ಸಾವಿಗೆ ಕಾರಣರಾದ ಯಾರನ್ನು ಸಹ ಇರಾನ್ ಕ್ಷಮಿಸುವುದಿಲ್ಲ, ಬದಲಿಗೆ ಅವರ ಮೇಲೆ ಕ್ರೂರವಾಗಿ ತನ್ನ ಸೇಡನ್ನು ತೀರಿಸಿಕೊಳ್ಳಲಿದೆ ಎಂದು ಇರಾನಿನ ಸುದ್ದಿ ನಿರೂಪಕಿ ಮರಿಯಮ್ ಅಜರ್ಚೆರ್ ಹೇಳಿದ್ದಾರೆ.
ಇರಾನಿನಲ್ಲಿ ಶೋಕಾಚರಣೆ
ಶನಿವಾರ (ಫೆ.28) ಅಮೆರಿಕ ಮತ್ತು ಇಸ್ರೇಲ್ ನಡೆಸಿದ್ದ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಇರಾನಿನ ಸವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ನಿಧನರಾದರು. ಈ ಸಾವಿನಿಂದ ಕಂಗೆಟ್ಟಿರುವ ಇರಾನಿನಲ್ಲಿ 40 ದಿನಗಳ ಶೋಕಾಚರಣೆಯನ್ನು ಆಚರಿಸಲಾಗುವುದೆಂದು ಇರಾನ್ ಸರ್ಕಾರ ತಿಳಿಸಿದೆ.
ಖಮೇನಿ ಜೊತೆಗೆ ಅವರ ಮಗಳು, ಮೊಮ್ಮಕಳು, ಸೊಸೆಯಂದಿರು ಮತ್ತು ಅಳಿಯಂದಿರು ಸಹ ಸಾವನ್ನಪ್ಪಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇವರ ಜೊತೆಗೆ ಇರಾನಿನ ರಕ್ಷಣಾ ಮಂತ್ರಿ ಅಮೀರ್ ನಾಸಿರ್ಜಾದೆ ಮತ್ತು ಇರಾನಿನ ಐಆರ್‌ಜಿಸಿ ಮುಖ್ಯಸ್ಥ ಮೊಹಮ್ಮದ್ ಪಕ್ಪೌರ್ ಸಹ ಸಾವನ್ನಪ್ಪಿದ್ದಾರೆ ಎಂದು ಸುದ್ದಿಯಾಗಿದೆ,(ಏಜನ್ಸೀಸ್).