ಯುದ್ಧದ ಅಂತ್ಯ ನಿರ್ಧರಿಸೋದು ನಾವು, ಟ್ರಂಪ್ಗೆ ಆ ಅಧಿಕಾರವಿಲ್ಲ: ಅಮೆರಿಕಕ್ಕೆ ಇರಾನ್ ಟಾಂಗ್...America-Iran War
- ಇರಾನ್ ಮೇಲಿನ ಸೇನಾದಾಳಿ ಶೀಘ್ರವೇ ಕೊನೆಗಾಣಲಿದೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಇರಾನ್ ಬಾಲ ಬಿಚ್ಚಿದ್ರೆ ಇಡೀ ದೇಶವನ್ನೇ ಸರ್ವನಾಶ ಮಾಡ್ತೇವೆ ಎಂದ ಟ್ರಂಪ್
- ಯುದ್ಧ ಅಂತ್ಯ ಕಾಣುವ ಬಗ್ಗೆ ನಿರ್ಧಾರ ಮಾಡುವುದು ಟೆಹ್ರಾನ್ ಅಮೆರಿಕ ಅಲ್ಲ ಎಂದು ಟ್ರಂಪ್ಗೆ ಟಾಂಗ್
- ಒಂದು ಲೀಟರ್ ತೈಲ ರಫ್ತು ಮಾಡೋಕೆ ಬಿಡೋಲ್ಲ ಹುಷಾರ್ ಎಂದು ಎಚ್ಚರಿಕೆ ಕೊಟ್ಟ ಇರಾನ್
ಟೆಹ್ರಾನ್: ಇರಾನ್ ಮೇಲೆ ನಡೆಸುತ್ತಿರುವ ಸೇನಾ ಕಾರ್ಯಾಚರಣೆ(America-Iran War) ಆದಷ್ಟು ಬೇಗನೆ ಕೊನೆಗಾಣಲಿದೆ. ಬಾಲಬಿಚ್ಚಿದ್ರೆ ಅಮೆರಿಕ ಇಡೀ ರಾಷ್ಟ್ರವನ್ನೇ ಧೂಳಿಪಟ ಮಾಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಕೊಟ್ಟ ಬೆನ್ನಲ್ಲೇ ಇರಾನ್ ಟಾಂಗ್ ಕೊಟ್ಟಿದೆ. ಯುದ್ಧ ನಿಲ್ಲಿಸಬೇಕೋ ಅಥವಾ ಬೇಡವೋ ಎಂದು ನಿರ್ಧಾರ ಮಾಡುವುದು ಟೆಹ್ರಾನ್, ಅಮೆರಿಕಕ್ಕೆ ಆ ಅಧಿಕಾರ ಇಲ್ಲ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGS) ಹೇಳಿದೆ.
ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ಸೇನಾ ದಾಳಿಯನ್ನು ವಿಹಾರ ಎಂದು ಕರೆಯಲಾಗುತ್ತಿದ್ದು, ಇದನ್ನು ಶೀಘ್ರವೇ ಕೊನೆಗಾಣಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಮೇಲೆ ನಡೆಸಿದ ದಾಳಿ ತೃಪ್ತಿಕರ ವಿಚಾರ ಸದ್ಯ ಈ ಸಂಘರ್ಷವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇವೆ. ಇರಾನ್ ಬಳಿ ನೌಕಾಪಡೆ, ವಾಯುಪಡೆಯಿಲ್ಲ. ಅವರು ಮತ್ತೆ ಬಾಲ ಬಿಚ್ಚಿದ್ರೆ ನಾವು ಇಡೀ ಇರಾನ್ ಸರ್ವನಾಶ ಮಾಡುತ್ತೇವೆ ಎಂದು ಹೇಳಿದ್ದರು.
ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ವಿರುದ್ಧ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGS) ಕಿಡಿಕಾರಿದೆ. `ಯುದ್ಧದ ಅಂತ್ಯವನ್ನು ನಿರ್ಧರಿಸುವುದು ನಾವು. ಅಮೆರಿಕ ಸೇನಾ ಪಡೆ ಯುದ್ಧ ಕೊನೆಗಾಣಿಸೋದಿಲ್ಲ. ಅವರ ಭವಿಷ್ಯ ನಮ್ಮ ಸಶಸ್ತ್ರ ಪಡೆ ಕೈನಲ್ಲಿದೆ' ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೊಂಡಿದೆ.
ಮಾಧ್ಯಮಗಳ ಮುಂದೆ ಟ್ರಂಪ್ ಹೇಳಿದ್ದಿಷ್ಟು..
`ನಾವು ಇರಾನ್ನಲ್ಲಿ ಈಗಾಗಲೇ ಗೆಲುವು ಪಡೆದುಕೊಂಡಿದ್ದೇವೆ. ಆದರೆ, ಇನ್ನೂ ಸಾಕಷ್ಟು ಗಳಿಸಬೇಕಾದದ್ದು ಇದೆ. ಸಂಘರ್ಷವನ್ನು ಅಂತ್ಯಗೊಳಿಸಬೇಕೆಂದುಕೊಂಡಿದ್ದಂತೂ ನಿಜ. ಆದರೆ, ಸಂಪೂರ್ಣ ನಿಲ್ಲಿಸಲ್ಲ. ಇರಾನ್ನನ್ನು ಸರ್ವನಾಶ ಮಾಡುವವರೆಗೆ ನಮ್ಮ ದಾಳಿ ಮುಂದುವರೆಯುತ್ತದೆ' ಎಂದು ರಿಪಬ್ಲಿಕ್ ಪಾರ್ಟಿಯ ಸದಸ್ಯರ ಸಮ್ಮೇಳನದಲ್ಲಿ ಅವರು ಮಾತನಾಡಿದ್ದಾರೆ ಎನ್ನಲಾಗಿದೆ.
ಇರಾನ್ ಎಚ್ಚರಿಕೆ ಕೊಟ್ಟಿದ್ದೇನು?
ಈ ಹೇಳಿಕೆ ವಿರುದ್ಧ ಇರಾನ್ ಕಿಡಿಕಾರಿದೆ. ಇರಾನ್ ನೆಲ ಎಲ್ಲರಿಗೂ ಸೇರಿದ್ದಾಗಿದೆ ಮತ್ತು ಯಾರಿಗೂ ಸೇರಿದ್ದಲ್ಲ ಅಕಸ್ಮಾತ್ ಅಮೆರಿಕ ಯುದ್ಧ ಮುಂದುವರೆಸಿ, ಹುಚ್ಚಾಟ ಮೆರೆದರೆ ಇಲ್ಲಿಂದ ಒಂದು ಲೀಟರ್ ತೈಲವನ್ನು ಸಾಗಿಸೋಕೆ ಆಗೋದಿಲ್ಲ. ಇನ್ನು ಕೊಲ್ಲಿಯ ಮೂಲಕ ಇಂಧನ ಸಾಗಣೆ ಮುಂದಿನ ದಿನಗಳಲ್ಲಿ ಕಷ್ಟಕರವಾಗಬಹುದು. ಎಂದು ಐಜಿಆರ್ಸಿಯ ವಕ್ತಾರ ಹೇಳಿಕೊಂಡಿದ್ದಾರೆ.
ಇರಾನ್ ಯುದ್ಧವನ್ನು ಎದುರಿಸುವ ಶಕ್ತಿಯನ್ನು ಹೊಂದಿದೆ. ಟೆಹ್ರಾನ್ ಕ್ರೂಸ್ ಕ್ಷಿಪಣಿ, ಡ್ರೋನ್, ದಾಳಿ ನಡೆಸುವ ಹಡಗುಗಳನ್ನು ಹೊಂದಿದೆ. ಕನಿಷ್ಠ ಆರುತಿಂಗಳ ಕಾಲ ಯುದ್ಧವನ್ನು ಎದುರಿಸುತ್ತದೆ. ಇರಾನ್ ಈ ಆರುತಿಂಗಳ ಒಳಗಗೆ ಯುದ್ಧವನ್ನು ಎದುರಿಸಲು ಬೇಕಾಗುವ ಹೊಸತಂತ್ರಗಳನ್ನು ಪರಿಚಯಿಸುತ್ತದೆ. ಹೆಚ್ಚು ಸುಧಾರಿತ ಕ್ಷಿಪಣಿಗಳನ್ನು ಅಖಾಡಕ್ಕೆ ಇಳಿಸಲು ಸಿದ್ಧತೆ ಮಾಡಿಕೊಳ್ಳುತ್ತದೆ ಎಂದು ಐಜಿಆರ್ಸಿ ಹೇಳಿದೆ.
ಇರಾನ್ನಲ್ಲಿ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಯಿಂದಾಗಿ 1,332 ಜನರು ಸಾವನಪ್ಪಿದ್ದಾರೆ. ಇನ್ನೂ ಈ ಸಂಘರ್ಷದಿಂದಾಗಿ ಸಾವಿರಕ್ಕೂ ಹೆಚ್ಚು ಮನೆಗಳು, ವಾಣಿಜ್ಯ ಕಟ್ಟಡಗಳು ನಾಶವಾಗಿದೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿದೆ, (ಏಜೆನ್ಸೀಸ್).