ಹೊರ್ಮುಜ್ ಜಲಸಂಧಿ ಬಳಿ ಇರಾನ್ ಮಿಲಿಟರಿ ಗುರಿಯಾಗಿಸಿ ಅಮೆರಿಕ ಭೀಕರ ವಾಯುದಾಳಿ 
ವಿದೇಶ

ಹೊರ್ಮುಜ್​ ಮೇಲೆ ಅಮೆರಿಕ ವೈಮಾನಿಕ ದಾಳಿ: ಸಮುದ್ರದಲ್ಲಿ ಹಡಗುಗಳ ಡಿಕ್ಕಿ; ಇರಾನ್​ಗೆ ಬಹ್ರೇನ್​ ಖಡಕ್​ ಎಚ್ಚರಿಕೆ! America Airstrike Iran

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಯುದ್ಧದ ಕಿಡಿ!
  • ಹೊರ್ಮುಜ್ ಜಲಸಂಧಿ ಬಳಿ ಇರಾನ್ ಮಿಲಿಟರಿ ಗುರಿಯಾಗಿಸಿ ಅಮೆರಿಕ ಭೀಕರ ವಾಯುದಾಳಿ
  • ಸಮುದ್ರದಲ್ಲಿ ಹಡಗುಗಳ ಡಿಕ್ಕಿ! ಬಹ್ರೇನ್‌ನಿಂದ ಇರಾನ್‌ಗೆ ಖಡಕ್ ಎಚ್ಚರಿಕೆ
ತೆಹ್ರಾನ್​: ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಇಂದು (ಬುಧವಾರ, ಜು.15) ಇರಾನಿನ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ (America Airstrike Iran) ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ದಾಳಿಯು ಅಮೆರಿಕ ಕಾಲಮಾನದ ಪ್ರಕಾರ ಬೆಳಿಗ್ಗೆ 6 ಗಂಟೆ ಎಂದರೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30 ಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ದಾಳಿ ಹೊರ್ಮುಜ್​ ಜಲಸಂಧಿ ಹತ್ತಿರದಲ್ಲಿ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಹೊರ್ಮುಜ್​ನಲ್ಲಿ ಹಡಗುಗಳ ಡಿಕ್ಕಿ!

ಅಮೆರಿಕ ದಾಳಿ ನಡೆಸಿದ ಹಿನ್ನಲೆಯಲ್ಲಿ ಹೊರ್ಮುಜ್​ ಜಲಸಂಧಿಯಲ್ಲಿ ಎರಡು ಹಡಗುಗಳ ಡಿಕ್ಕಿ ಹೊಡೆದುಕೊಂಡ ಘಟನೆ ಸಹ ಜರುಗಿದೆ ಎಂದು ಇರಾನಿನ ಮಾಧ್ಯಮಗಳು ವರದಿಮಾಡಿದೆ. ಈ ವರದಿ ಪ್ರಕಾರ, ಯಾವುದೇ ಸಾವು-ನೋವುಗಳು ಕಂಡುಬಂದಿಲ್ಲ, ಹಡಗಿನಲ್ಲಿದ್ದ ಎಲ್ಲಾ 23 ಜನ ಸಿಬ್ಬಂದಿಗಳನ್ನು ರಕ್ಷಿಸಲಾಗಿದ್ದು ಎಲ್ಲರು ಸುರಕ್ಷಿತವಾಗಿದ್ದಾರೆಂದು ಹೇಳಲಾಗುತ್ತಿದೆ.
ಇರಾನ್​ಗೆ ಬಹ್ರೇನ್​ ಎಚ್ಚರಿಕೆ!
ಅಮೆರಿಕ ಇರಾನ್​ ಮೇಲೆ ದಾಳಿ ಮಾಡಿದರೆ, ಇರಾನ್​ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಈ ಹಿನ್ನಲೆ ಇಂದು ಬೆಳಿಗ್ಗೆ ಇರಾನ್​, ಬಹ್ರೇನ್​ ಮೇಲೆ ದಾಳಿ ನಡೆಸಿತ್ತು.
ಈ ದಾಳಿಯನ್ನು ಖಂಡಿಸಿರುವ ಬಹ್ರೇನ್​​, ನಮಗೆ ಈ ಸಂಘರ್ಷಕ್ಕೆ ಯಾವುದೇ ಸಂಬಂಧವಿಲ್ಲ, ಆದತೆ ಇರಾನ್​ ನಮ್ಮ ನಾಗರಿಕರನ್ನು ಗುರಿ ಮಾಡಿಕೊಂಡು ದಾಳಿ ನಡೆಸುತ್ತಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇರಾನ್​ ಮತ್ತೆ ದಾಳಿ ಮುಂದುವರಿಸಿದರೆ, ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಇರಾನ್​ ನೋಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ, (ಏಜನ್ಸೀಸ್​).