ಫ್ಲೈದುಬೈ ಹೈಜಾಕ್ ಯತ್ನ ಬೆನ್ನಲ್ಲೇ ಏರ್ ಫ್ರಾನ್ಸ್ ಕಠಿಣ ಕ್ರಮ 
ವಿದೇಶ

ಫ್ಲೈದುಬೈ ಹೈಜಾಕ್ ಯತ್ನ ಬೆನ್ನಲ್ಲೇ ಏರ್ ಫ್ರಾನ್ಸ್ ಮಹತ್ವದ ನಿರ್ಧಾರ: ಪಾಕಿಸ್ತಾನ ಸೇರಿ 31 ದೇಶಗಳ ಸಿಬ್ಬಂದಿಗೆ ಬಿಗ್ ಶಾಕ್! Air France

ಫ್ಲೈದುಬೈ ಹೈಜಾಕ್ ಯತ್ನ ಬೆನ್ನಲ್ಲೇ ಏರ್ ಫ್ರಾನ್ಸ್ ಕಠಿಣ ಕ್ರಮ. ಇಸ್ರೇಲ್ ವಿಮಾನಗಳಲ್ಲಿ ಪಾಕಿಸ್ತಾನ ಸೇರಿ 31 ದೇಶಗಳ ಪೈಲಟ್ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಬಿಗ್ ಶಾಕ್!

ಫ್ರಾನ್ಸ್​​: ಕೆಲ ದಿನಗಳ ಹಿಂದೆ, ದುಬೈ ನಿಂದ ಟೆಲ್​ ಅವೀವ್​ಗೆ ಪ್ರಯಾಣ ಬೆಳೆಸಿದ್ದ ವಿಮಾನದಲ್ಲಿ ಸಹ-ಪೈಲಟ್​ವೊಬ್ಬ, ಕ್ಯಾಪ್ಟನ್​ ಮೇಲೆ ಹಲ್ಲೆ ನಡೆಸಿ, ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಿದ ವಿಫಲ ಪ್ರಯತ್ನ ವಿಶ್ವದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಫ್ಲೈದುಬೈ ವಿಮಾನದ ಪೈಲಟ್​ ಕ್ಯಾಪ್ಟನ್​ ಸ್ಮಿತ್​ ಮಚ್ಚಾರ್​ ಮೇಲೆ ಓಮನ್​ ಮೂಲದ ಹಮಾಮ್​ ಅಲ್- ಹಮ್ಮಾಮಿ ಎಂಬಾತ ದಾಳಿ ನಡೆಸಿದ್ದು, ಮಚ್ಚಾರ್​ ಅವರ ಅಪ್ರತಿಮ ಸಾಹಸದ ಫಲವಾಗಿ ಯಾವುದೇ ದುರ್ಘಟನೆ ನಡೆದಿರಲಿಲ್ಲ.

ಈ ಘಟನೆ ನಡೆದ ಬೆನ್ನಲ್ಲೆ, ಏರ್ ಫ್ರಾನ್ಸ್​ ಇಸ್ರೇಲ್​ಗೆ ಹಾರಾಟ ನಡೆಸುವ ವಿಮಾನಗಳಲ್ಲಿ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಮುಂದಿನ ದಿನಗಳಲ್ಲಿ ಇಸ್ರೇಲ್​ಗೆ ಪ್ರಯಾಣ ಬೆಳೆಸುವ ವಿಮಾನಗಳಲ್ಲಿ ದ್ವಿಪೌರತ್ವ ಹೊಂದಿರುವ, ಇಸ್ರೇಲ್​ ಜತೆ ಉತ್ತಮ ಸಂಬಂಧ ಹೊಂದಿರದ ಹಾಗೂ ಪಾಕಿಸ್ತಾನ ಮೂಲದ ವ್ಯಕ್ತಿಗಳನ್ನು ಕ್ಯಾಬಿನ್​ ಕ್ರೂವ್​ಗಳಾಗಿ ಹಾಗೂ ಪೈಲಟ್​ಗಳಾಗಿ ನೇಮಕ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದೆ. ಈ ಹೊಸ ನಿಯಮಾವಳಿಯಿಂದ ಸುಮಾರು 31 ದೇಶಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಒಂದು ಧರ್ಮವನ್ನು ಟಾರ್ಗೆಟ್​ ಮಾಡಲಾಗುತ್ತಿದೆ!

ಏರ್​ ಫ್ರಾನ್ಸ್​ ಜಾರಿಗೆ ತರಲು ಮುಂದಾಗಿರುವ ಈ ಹೊಸ ನೀತಿ ನಿರೂಪಣೆಯನ್ನು ಇಸ್ಲಾಂ ಅನ್ನು ಪಾಲಿಸುವ ದೇಶಗಳು ವಿರೋಧ ವ್ಯಕ್ತಪಡಿಸುತ್ತಿವೆ. ಏರ್​ ಫ್ರಾನ್ಸ್​ ಜಾರಿಗೆ ತರಲು ಮುಂದಾಗಿರುವ ಈ ನಿಯಮಗಳು ಮುಸಲ್ಮಾನರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಲಾಗುತ್ತಿದೆ. ಇದೊಂದು ಇಸ್ಲಾಮೋಫೋಬಿಕ್​ ನಿರ್ಧಾರವಾಗಿದ್ದು, ಈ ನಿಯಮಾವಳಿಯನ್ನು ಜಾರಿಗೆ ಬರದಂತೆ ತಡೆಯಬೇಕೆಂದು ಅರಬ್​​ ದೇಶಗಳಿಂದ ಒತ್ತಡ ಕೇಳಿ ಬರುತ್ತಿದೆ.

ಯಾವ-ಯಾವ ದೇಶಗಳಿಗೆ ನಿರ್ಭಂದ!

ಏರ್​ ಫ್ರಾನ್ಸ್​ ಜಾರಿಗೆ ತರಲು ಹೊರಟಿರುವ ಈ ನಿರ್ಧಾರಗಳಿಂದ ಮುಸ್ಲಿಮರನ್ನು ಬಹುಸಂಖ್ಯಾತರನ್ನಾಗಿ ಹೊಂದಿರುವ ದೇಶಗಳಿಗೆ ಹೆಚ್ಚಿನ ಹೊಡೆತ ಬೀಳಲಿದೆ. ವರದಿಗಳ ಪ್ರಕಾರ, ಅಲ್ಜೀರಿಯಾ, ಟುನೀಶಿಯಾ, ಇರಾನ್, ಓಮನ್, ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ನೈಜರ್ ದೇಶದ ವಿಮಾನಯಾನ ಸಿಬ್ಬಂದಿಗಳನ್ನು ಏರ್​ ಫ್ರಾನ್ಸ್​ ನಿರ್ಭಂದಿಸಿದೆ. ಇತ್ತೀಚೆಗೆ ಫ್ಲೈದುಬೈ ವಿಮಾನದಲ್ಲಿ ನಡೆದ ಘಟನೆ ಕಾರಣದಿಂದಲೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಏರ್​ ಫ್ರಾನ್ಸ್​ ತಿಳಿಸಿದೆ.

IsraelFlights ಫ್ಲೈದುಬೈನಲ್ಲಿ ನಡೆದಿದ್ದೇನು?

ಸೆಪ್ಟೆಂಬರ್​ 30 ರಂದು ದುಬೈನಿಂದ ಇಸ್ರೇಲ್​ನ ಟೆಲ್​ ಅವೀವ್​ಗೆ ಹಾರಾಟ ನಡೆಸಿದ್ದ ವಿಮಾನದ ಕ್ಯಾಪ್ಟನ್​ ಆಗಿ ಸ್ಮಿತ್​ ಮಚ್ಚಾರ್​ ಕಾರ್ಯ ನಿರ್ವಹಿಸುತ್ತಿದ್ದರು. ಓಮನ್​ ಮೂಲದ ಸಹ-ಪೈಲಟ್​ ಹಮಾಮ್​ ಅಲ್​-ಹಮ್ಮಾಮಿ ಎಂಬಾತ, ಒಮ್ಮೆಲೆ ಕ್ಯಾಪ್ಟನ್​ ಮೇಲೆ ದಾಳಿ ನಡೆಸಿದ ಪರಿಣಾಮ ವಿಮಾನ ಸುಮಾರು 14,000 ಅಡಿ ಕುಸಿತ ಕಂಡಿತು.

ಹಮ್ಮಾಮಿ, ಸ್ಮಿತ್​ ಮೇಲೆ ಕೊಡಲಿ ಮೂಲಕ ದಾಳಿ ನಡೆಸಿ, ವಿಮಾನವನ್ನು ತನ್ನ ವಶಕ್ಕೆ ತೆಗೆದುಕೊಂಡು, 9/11 ಮಾದರಿಯಲ್ಲಿ ವಿಮಾನ ಪತನ ಮಾಡುವ ಯೋಜನೆ ಹೊಂದಿದ್ದನು. ಆದರೆ, ಸ್ಮಿತ್​ ಮಚ್ಚಾರ್​, ಕಷ್ಟಪಟ್ಟು ಕಾಕ್​ಪಿಟ್​ ದ್ವಾರವನ್ನು ತೆರೆಯುವಲ್ಲಿ ಯಶಸ್ವಿಯಾಗು, ಪ್ರಯಾಣಿಕರು ಸಹಾಯಕ್ಕೆ ಬಂದ ಕಾರಣ ಭಾರೀ ದುರ್ಘಟನೆಯೊಂದು ನಡೆಯುವುದು ತಪ್ಪಿತು.

ನಂತರ, ವಿಮಾನದಲ್ಲಿದ್ದ, ಸಹಾಯಕ ಪೈಲಟ್​ಗಳು ವಿಮಾನವನ್ನು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರು. ಈ ಘಟನೆ ಬಳಿಕ ತೀವ್ರ ಧಾರ್ಮಿಕ ಭಾವನೆ ಬೆಳೆಸಿಕೊಂಡವರನ್ನು ವಿಮಾನ ಚಾಲನೆಯಂತಹ ಕೆಲಸಕ್ಕೆ ಸೇರಿಸಿಕೊಳ್ಳಬೇಕೆ? ಅಥವಾ ನಿರ್ಭಂದಿಸಬೇಕೆ? ಎಂಬ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ಬಹಳ ಜೋರಾಗಿ ನಡೆಯುತ್ತಿದ್ದವು. ಆದರೆ ಈಗ ಏರ್​ ಫ್ರಾನ್ಸ್​ ತೆಗೆದುಕೊಂಡಿರುವ ಈ ನಿರ್ಧಾರ ವಿಮಾನಯಾನದ ಜಗತ್ತಿನಲ್ಲಿ ಕೋಲಾಹಲವನ್ನಂತು ಸೃಷ್ಟಿಸುವುದು ನಿಜವಾಗಿದೆ, (ಏಜೆನ್ಸೀಸ್​).